ರೈತರು ಜಮೀನು ನೀಡಿದ ನಂತರ ಪರಿಹಾರಕ್ಕೆ ವರ್ಷಗಟ್ಟಲೆ ಅಲೆದಾಡುವ ಪರಿಸ್ಥಿತಿ ಎದುರಾದ ಪ್ರಕರಣಗಳನ್ನು ನೀವು ಕೇಳಿರುತ್ತೀರಿ. ಬೆಳಗಾವಿಯ ಚಿಕ್ಕೋಡಿಯಲ್ಲಿ (belgaum chikodi) ರೈತನಿಗೆ ಪರಿಹಾರ ನೀಡಲು ಅಧಿಕಾರಿಗಳ ಜಮೀನನ್ನೇ ಜಪ್ತಿ ಮಾಡಿದ ಘಟನೆ ನಡೆದಿದೆ.
ಸರ್ಕಾರಿ ನೌಕರರಿಗೆ ಮತ್ತೆ ಸಿಹಿಸುದ್ದಿ: ಸಿ, ಡಿ ದರ್ಜಿ ನೌಕರರ ವರ್ಗಾವಣೆ ನಿಯಮದಲ್ಲಿ ಬದಲಾವಣೆ; ಪತಿ, ಪತ್ನಿ ಪ್ರಕರಣ ನಿಯಮ ಸಡಿಲ!
ರೈತ ಬುದ್ದಿರಾಜ ಶಾಂತಿನಾಥ ಪಾಟೀಲ ಅವರು 31 ಗುಂಟೆ ಭೂಮಿಯನ್ನು 15 ವರ್ಷಗಳ ಹಿಂದೆ ಭೂಮಿ ನೀಡಿದ್ದರು. ಆದರೆ, ಇಷ್ಟು ಸುದೀರ್ಘ ಅವಧಿಯಾದರೂ ಅವರಿಗೆ ಪರಿಹಾರ ಸಿಕ್ಕಿರಲಿಲ್ಲ.
ರಸ್ತೆ ನಿರ್ಮಿಸುವ ಉದ್ದೇಶದಿಂದ ಸರ್ಕಾರ ಬುದ್ದಿರಾಜ ಅವರ ಬಳಿಯಿಂದ ಭೂಮಿ ಸ್ವಾಧೀನ ಪಡಿಸಿಕೊಂಡಿತ್ತು.
ಸ್ವಾಧೀನ ಪಡೆಸಿಕೊಂಡಿದ್ದ ಭೂಮಿಗೆ ಅನುಗುಣವಾಗಿ ರೈತನಿಗೆ 11 ಲಕ್ಷ ರೂಪಾಯಿ ಪರಿಹಾರಧನ ನೀಡಬೇಕಾಗಿತ್ತು. ಆದರೆ, ಸುದೀರ್ಘ 15 ವರ್ಷಗಳಾದರೂ ರೈತನಿಗೆ ಪರಿಹಾರ ಸಂದಾಯವಾಗಿಲ್ಲ.
ಕಡಿಮೆ ಬಂಡವಾಳದಲ್ಲಿ ಭಾರತೀಯ ರೈಲ್ವೆಯೊಂದಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿ..ಡಬಲ್ ಆದಾಯ ಗಳಿಸಿ
ಈ ವಿಳಂಬ ನೀತಿ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಉಪವಿಭಾಗಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಎಇಇ ಅವರ ವಾಹನಗಳನ್ನು ಗುರುವಾರ ಜಪ್ತಿ ಮಾಡಲಾಗಿದೆ.
15 ವರ್ಷದ ಹಿಂದೆ ಚಿಕ್ಕೋಡಿ(chikodi) ತಾಲ್ಲೂಕಿನ ಮಾಂಗೂರ (ನಿಪ್ಪಾಣಿ ತಾಲ್ಲೂಕು) ಗ್ರಾಮದ ರೈತ ಬುದ್ದಿರಾಜ ಶಾಂತಿನಾಥ ಪಾಟೀಲ ಅವರಿಂದ 31 ಗುಂಟೆ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದಿತ್ತು. ಆದರೆ, ರೈತನಿಗೆ ಪರಿಹಾರ ನೀಡಿರಲಿಲ್ಲ.
ಪರಿಹಾರಕ್ಕಾಗಿ ಅಲೆದಾಡಿದ ನಂತರ ರೈತರು ಪರಿಹಾರಕ್ಕಾಗಿ ಕಾನೂನು ಮೊರೆ ಹೋಗಿದ್ದರು. ರೈತ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ 2021ರಲ್ಲಿ 11,70,757 ಲಕ್ಷ ಪರಿಹಾರ ನೀಡುವಂತೆಯೂ ಆದೇಶ ಹೊರಡಿಸಿತ್ತು.
ಆದರೆ, ಕೋರ್ಟ್ ಆದೇಶ ನೀಡಿ ಒಂದು ವರ್ಷ ಕಳೆದರೂ, ಸರ್ಕಾರ ರೈತನಿಗೆ ಪರಿಹಾರ ನೀಡಿರಲಿಲ್ಲ. ಹೀಗಾಗಿ,ನ್ಯಾಯಾಲಯವು ವಾಹನಗಳ ಜಪ್ತಿಗೆ ಆದೇಶಿಸಿತ್ತು.
ವಾಹನ ಜಪ್ತಿಗೆ ಬಂದ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಮತ್ತು ನ್ಯಾಯಾಲಯ ಸಿಬ್ಬಂದಿಯ ನಡುವೆ ಕೆಲಹೊತ್ತು ಮಾತಿನ ಚಕಮಕಿ ಸಹ ನಡೆಯಿತು.