News

HDFC Bank ವಿಲೀನಕ್ಕೆ ನಿರ್ಧಾರ!

06 April, 2022 2:16 PM IST By: Kalmesh T
Decision on HDFC Bank merger !

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ (HDFC)  ಬ್ಯಾಂಕ್‌ನಲ್ಲಿ ದೇಶದ ಅತಿದೊಡ್ಡ ಖಾಸಗಿ ಗೃಹಸಾಲ ನೀಡಿಕೆ ಕಂಪನಿ ಎಚ್‌ಡಿಎಫ್‌ಸಿ ಲಿ.( HDFC l.) ಅನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ.

ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಖಾಸಗಿ ಕಂಪನಿಗಳ ವಿಲೀನ ಪ್ರಕ್ರಿಯೆ ಎನ್ನಿಸಿಕೊಳ್ಳಲಿದೆ. 2024ರಲ್ಲಿ ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿರಿ:

PNGRB ನೇಮಕಾತಿ: ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ!

ರಾಜ್ಯದ ಜನತೆಗೆ ಮತ್ತೊಂದು ಶಾಕ್! ನಂದಿನಿ ಹಾಲಿನ ದರದಲ್ಲಿ 5 ರೂ ಹೆಚ್ಚಳ?

ವಿಲೀನ ಪ್ರಕ್ರಿಯೆಯ ಅಂಗವಾಗಿ ಮೊದಲಿಗೆ ಎಚ್‌ಡಿಎಫ್‌ಸಿ ಇನ್ವೆಸ್ಟ್‌ಮೆಂಟ್ಸ್‌ (HDFC Investments)  ಮತ್ತು ಎಚ್‌ಡಿಎಫ್‌ಸಿ ಹೋಲ್ಡಿಂಗ್ಸ್‌ (HDFC Holdings) ಕಂಪನಿಯನ್ನು ಎಚ್‌ಡಿಎಫ್‌ಸಿ ಲಿ.ನಲ್ಲಿ ವಿಲೀನಗೊಳಿಸಲಾಗುತ್ತದೆ. ನಂತರ ಎಚ್‌ಡಿಎಫ್‌ಸಿ ಲಿ. ಕಂಪನಿಯನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲಾಗುತ್ತದೆ.

ವಿಲೀನದ ನಂತರ ಎಚ್‌ಡಿಎಫ್‌ಸಿ ಷೇರುದಾರರಿಗೆ ಪ್ರತಿ 42 ಷೇರಿಗೆ ಎಚ್‌ಡಿಎಫ್‌ಸಿ ಬ್ಯಾಂಕಿನ 25 ಷೇರುಗಳು ಲಭಿಸಲಿವೆ. ಈ ಬ್ಯಾಂಕ್‌ನಲ್ಲಿ ಎಚ್‌ಡಿಎಫ್‌ಸಿಯ ಶೇ.41ರಷ್ಟುಪಾಲು ಇರಲಿದೆ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಶೇ.100ರಷ್ಟುಷೇರುದಾರರ ಒಡೆತನದ ಕಂಪನಿಯಾಗಲಿದೆ.

Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ

ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು

 

ಸೋಮವಾರ ವಿಲೀನ ಸುದ್ದಿ ಹೊರಬಿದ್ದ ಬೆನ್ನಲ್ಲೇ ಎರಡೂ ಕಂಪನಿಯ ಷೇರು ಮೌಲ್ಯದಲಲ್ಲಿ ಭಾರೀ ಏರಿಕೆ ಕಂಡಿದೆ. ಪರಿಣಾಮ ಕಂಪನಿಯ ಮಾರುಕಟ್ಟೆ ಮೌಲ್ಯ ಒಂದೇ ದಿನದಲ್ಲಿ 2 ಲಕ್ಷ ಕೋಟಿ ರು.ನಷ್ಟು ಹೆಚ್ಚಳವಾಗಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ ದೇಶದ 2ನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ.

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

Central Government Scheme! Pashu kisan credit card scheme! ನಿಂದ ನಿಮಗೆ ಪಶುಸಂಗೋಪನೆಗಾಗಿ 60,000 ರೂಪಾಯಿ ನೀಡಲಾಗುತ್ತೆ!

ಹಾಲಿ ಮಾರುಕಟ್ಟೆ ಬಂಡವಾಳ ಹಾಗೂ ಆಸ್ತಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries)   18 ಲಕ್ಷ )ಕೋಟಿ ರು.ನೊಂದಿಗೆ ಮೊದಲ ಸ್ಥಾನದಲ್ಲಿದೆ. 14.04 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಎಚ್‌ಡಿಎಫ್‌ಸಿ 2ನೇ ಸ್ಥಾನಕ್ಕೆ ತಲುಪಿದೆ. 13.79 ಲಕ್ಷ ಕೋಟಿ ರು. ಮಾರುಕಟ್ಟೆ ಮೌಲ್ಯದೊಂದಿಗೆ ಟಿಸಿಎಸ್‌ (TCS) ನಂತರದ ಸ್ಥಾನದಲ್ಲಿದೆ.

ಮೋದಿ ಸರ್ಕಾರದಿಂದ ರೈತರಿಗೆ ಭರ್ಜರಿ ಉಡುಗೊರೆ! ರೂ. 4000ದ ಯೂರಿಯಾ ಈಗ 266 ಕ್ಕೆ !

PM ಕಿಸಾನ್‌  ರೈತರಿಗೆ  ಬಿಗ್‌ ನ್ಯೂಸ್‌: OTP ಮೂಲಕ ಆಧಾರ್‌ ಕಾರ್ಡ್‌ e-KYC ರದ್ದು..