News

ಹತ್ತಿಗೆ ಬೆಂಬಲ ಬೆಲೆ 5265 ದಿಂದ 6225 ರೂಪಾಯಿ ಘೋಷಣೆ- ಡಿ. 17 ರಿಂದ ಖರೀದಿ ಆರಂಭ

17 December, 2020 6:30 AM IST By:

ಕೇಂದ್ರ ಸರ್ಕಾರದ 2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭಾರತೀಯ ಹತ್ತಿ ನಿಗಮ(Indian cotton Corporation) ದಿಂದ ಡಿಸೆಂಬರ್ 17 ರಿಂದ ಹತ್ತಿ ಖರೀದಿ ಖರಿದಿಸಲಾಗುತ್ತಿದ್ದು, ರೈತರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕಲಬುರಗಿ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. 

ಹತ್ತಿ ಮಾರಾಟಕ್ಕೆ ಗಜಾನನ ಮಹಾರಾಜ ಇಂಡಸ್ಟ್ರೀಸ್, ನಂದೂರ ಕೆಸರಟಗಿ ಇಂಡಸ್ಟ್ರೀಯಲ್ ಏರಿಯಾ, ಹೆಚ್.ಪಿ.ಸಿ.ಎಲ್ ಹತ್ತಿರ ಕಲಬುರಗಿ ಇಲ್ಲಿ ಹತ್ತಿ ಕೇಂದ್ರ ತೆರೆಯಲಾಗಿದ್ದು, ಹತ್ತಿ ಮಾರಾಟಕ್ಕೆ ಬರುವ ರೈತರು ಉತಾರ (ಪಹಣಿಯಲ್ಲಿ ಹತ್ತಿ ಬೆಳೆ ನಮೂದಿಸಿರಬೇಕು), ಚಾಲ್ತಿ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಬೆಳೆ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು.

ಹತ್ತಿ ಮಾರಾಟಕ್ಕೆ ಬರುವ ರೈತರು ಚೀಲ, ಬಾರದಾನ, ಅಂಡಿಗೆಯಲ್ಲಿ ಹತ್ತಿ ತೆಗೆದುಕೊಂಡು ಬಂದಲ್ಲಿ ಪಡೆಯುವುದಿಲ್ಲ, ಬದಲಾಗಿ ಖುಲ್ಲಾ ತರಬೇಕು. ಉದ್ದ ಹಾಗೂ ಹೆಚ್ಚುವರಿ ಉದ್ದ ನೂಲಿನ ಮೈಕ್ರೋನೇರ ಅಂಶ ಮಾನದಂಡಕ್ಕಿಂತ 2 ಅಂಕ ಹೆಚ್ಚು ಅಥವಾ ಕಡಿಮೆಯಿದ್ದಲ್ಲಿ ಪ್ರತಿ ಕ್ವಿಂಟಾಲ್‍ಗೆ ನಿಗದಿತ ಬೆಂಬಲ ಬೆಲೆ ದರದಲ್ಲಿ 25 ರೂ. ಕಡಿತಗೊಳಿಸಲಾಗುತ್ತದೆ. ಹತ್ತಿಯ ತೇವಾಂಶದ ನಿರ್ಧಾರಿತ ಮೂಲ ಮಿತಿ ಶೇ.8 ಆಗಿರುತ್ತದೆ. ಶೇ.8 ತೇವಾಂಶಕ್ಕಿಂತ ಹೆಚ್ಚಿದಲ್ಲಿ ಪ್ರತಿ ಕ್ವಿಂಟಾ¯ ಗೆ ನಿಗದಿತ ಬೆಂಬಲ ದರದಲ್ಲಿ ಸರಾಸರಿಯಾಗಿ ಕಡಿತ ಮಾಡಲಾಗುತ್ತದೆ.

ಹತ್ತಿಯ ಎಂ.ಎಸ್.ಪಿ. ದರ: ಮಧ್ಯದ ನೂಲು (Jayadhar) ಪ್ರತಿ ಕ್ವಿಂಟಾಲ್‍ಗೆ ರೂ. 5265 ಇದ್ದು, ಫೈಬರ್ ಗುಣಮಟ್ಟದ ಮಾನದಂಡದ ಪ್ರಕಾರ ಮೂಲ ನೂಲಿನ ಉದ್ದ (ಎಂ.ಎಂ.ನಲ್ಲಿ) 21.5-22.5 ಇದ್ದರೆ, ಮೈಕ್ರೋನೇರ್ ಮೌಲ್ಯ 4.8-5.8 ಇರಬೇಕು. ಮಧ್ಯದ ಉದ್ಧ ನೂಲು (LRA) ಪ್ರತಿ ಕ್ವಿಂಟಾಲ್‍ಗೆ ರೂ. 5615 ಇದ್ದು, ಫೈಬರ್ ಗುಣಮಟ್ಟದ ಮಾನದಂಡದ ಪ್ರಕಾರ ಮೂಲ ನೂಲಿನ ಉದ್ದ (ಎಂ.ಎಂ.ನಲ್ಲಿ) 26.0-26.5 ಇದ್ದರೆ, ಮೈಕ್ರೋನೇರ್ ಮೌಲ್ಯ 3.4-4.9 ಇರಬೇಕು.

ಇದನ್ನೂ ಓದಿ:ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಆರಂಭ

ಉದ್ಧ ನೂಲು (MECH) ಪ್ರತಿ ಕ್ವಿಂಟಾಲ್‍ಗೆ ರೂ. 5725 ಇದ್ದು, ಫೈಬರ್ ಗುಣಮಟ್ಟದ ಮಾನದಂಡದ ಪ್ರಕಾರ ಮೂಲ ನೂಲಿನ ಉದ್ದ (ಎಂ.ಎಂ.ನಲ್ಲಿ) 27.5-28.5 ಇದ್ದರೆ, ಮೈಕ್ರೋನೇರ್ ಮೌಲ್ಯ 3.5-4.7 ಇರಬೇಕು. ಉದ್ಧ ನೂಲು (BUNNY BRAHMA) ಪ್ರತಿ ಕ್ವಿಂಟಾಲ್‍ಗೆ ರೂ. 5825 ಇದ್ದು, ಫೈಬರ್ ಗುಣಮಟ್ಟದ ಮಾನದಂಡದ ಪ್ರಕಾರ ಮೂಲ ನೂಲಿನ ಉದ್ದ (ಎಂ.ಎಂ.ನಲ್ಲಿ) 29.5-30.5 ಇದ್ದರೆ, ಮೈಕ್ರೋನೇರ್ ಮೌಲ್ಯ 3.5-4.3 ಇರಬೇಕು ಹಾಗೂ ಹೆಚ್ಚುವರಿ ಉದ್ಧ ನೂಲು (DCH-32) ಪ್ರತಿ ಕ್ವಿಂಟಾಲ್‍ಗೆ ರೂ. 6225 ಇದ್ದು, ಫೈಬರ್ ಗುಣಮಟ್ಟದ ಮಾನದಂಡದ ಪ್ರಕಾರ ಮೂಲ ನೂಲಿನ ಉದ್ದ (ಎಂ.ಎಂ.ನಲ್ಲಿ) 34.0-36.0 ಇದ್ದರೆ, ಮೈಕ್ರೋನೇರ್ ಮೌಲ್ಯ 3.0-3.5 ಇರಬೇಕು ಎಮದು ತಿಳಿಸಲಾಗಿದೆ.