News

ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ ತಿಂಗಳಿಗೆ 55 ರೂಪಾಯಿ ಹೂಡಿಕೆ ಮಾಡಿ ವಾರ್ಷಿಕ 36 ಸಾವಿರ ಪಡೆಯಿರಿ

24 December, 2020 7:08 AM IST By:

ರೈತರಿಗೆ, ಕೂಲಿ ಕಾರ್ಮಕರಿಗಿಲ್ಲಿದೆ ಸಂತಸದ ಸುದ್ದಿ. ನೀವು ತಿಂಗಳಿಗೆ ಕೇವಲ 55 ರೂಪಾಯಿ ಹೂಡಿಕೆ ಮಾಡಿದರೆ ಸಾಕು. ರೈತ 60 ನೇ ವರ್ಷಕ್ಕೆ ಮಾಸಿಕವಾಗಿ 3 ಸಾವಿರ ರೂಪಾಯಿ ಅಥವಾ ವಾರ್ಷಿಕವಾಗಿ 36 ಸಾವಿರ ರೂಪಾಯಿ ಪಿಂಚಣೆ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಸಂಪೂರ್ಣ ಮಾಹಿತಿ

ಪಿಎಂ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ (PM-SYM)ಕಡಿಮೆ ಆದಾಯ ಇರುವವರಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪಿಂಚಣಿ ವ್ಯವಸ್ಥೆ ಮಾಡಿದೆ. ತಿಂಗಳಿಗೆ ಕೇವಲ 55 ರೂಪಾಯಿ ಹೂಡಿಕೆ ಮಾಡಿದರೆ ಸಾಕು, 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆ ಪಿಎಂ ಶ್ರಮ ಯೋಗಿ ಮಾನ್ ಧನ್ ಯೋಜನೆ ಸೇರಬಹುದು.

ಇದನ್ನೂ ಓದಿ: ಮುದ್ರಾ ಯೋಜನೆಯಡಿ ಸಾಲ ಪಡೆಯಲು ಇಲ್ಲಿದೆ ಮಾಹಿತಿ

ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆಕ್ಕುವವರು ಸೇರಿದಂತೆ ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್-ಧನ್-ಯೋಜನೆಯಲ್ಲಿ ಅರ್ಜಿ ಸಲ್ಲಿಸಬಗಹುದು

ಯೋಜನೆಗೆ ಸೇರಲು ಅರ್ಹತೆಗಳು(Eligibility):

18 ರಿಂದ 40 ವರ್ಷದೊಳಗಾಗಿರಬೇಕು.
ಅವರ ಮಾಸಿಕ ಆದಾಯ ರೂ.15,000/ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
ಸಂಘಟಿತ ವಲಯದ ಕಾರ್ಮಿಕರಾಗಿರಬಾರದು ಹಾಗೂ ಇ.ಎಸ್.ಐ/ಪಿ.ಎಫ್/ಎನ್.ಪಿ.ಎಸ್ ಯೋಜನೆಗೆ ಒಳಪಟ್ಟಿರಬಾರದು.

ರೂ.55 ರಿಂದ ಕೊಡುಗೆ ಆರಂಭ:

ಈ ಯೋಜನೆಯಲ್ಲಿ ವಿವಿಧ ವಯಾಸಿನ ಜನರು ಮಾಸಿಕ 55 ರಿಂದ 200 ರೂಪಾಯಿಗಳ ಕೊಡುಗೆಯನ್ನು ನೀಡಬಹುದಾಗಿದೆ. ಉದಾಹರಣೆಗೆ, ನೀವು 18 ನೇ ವಯಸ್ಸಿನಲ್ಲಿ ಯೋಜನೆಗೆ ಸೇರಿದರೆ, ನಿಮ್ಮ ಪರವಾಗಿ ಮಾಸಿಕ ಕೊಡುಗೆ 55 ರೂಪಾಯಿಗಳು ಇರಲಿದೆ.ಇದೇ ವೇಳೆ 30 ವರ್ಷ ವಯಸ್ಸಿನವರು 100 ರೂ. ಮತ್ತು 40 ವರ್ಷ ವಯಸ್ಸಿನವರು 200 ರೂ. ಕೊಡುಗೆಯನ್ನು ನೀಡಬೇಕು. ನೀವು 18 ವರ್ಷ ವಯಸ್ಸಿಗೆ ಈ ಯೋಜನೆಗೆ ಸೇರಿದರೆ, ನಿಮ್ಮ ವಾರ್ಷಿಕ ಕೊಡುಗೆ 660 ರೂ. ಗಳಷ್ಟಾಗಲಿದೆ. ಇದನ್ನು ನೀವು 42 ವರ್ಷಗಳವರೆಗೆ ಮುಂದುವರೆಸಿದರೆ ನಿಮ್ಮ ಒಟ್ಟು ಹೂಡಿಕೆ 27720 ರೂ ಆಗಲಿದೆ. ಆ ನಂತರ ನಿಮಗೆ ಪ್ರತಿ ತಿಂಗಳು 3000 ರೂ. ನಂತೆ ಜೀವಿತಾವಧಿಯವರೆಗೆ ಪಿಂಚಣಿ ನೀಡಲಾಗುತ್ತದೆ. ಇದರಲ್ಲಿ ಖಾತೆದಾರರು ಎಷ್ಟು ಕೊಡುಗೆ ನೀಡುತ್ತಾರೋ, ಅವರ ಪರವಾಗಿ ಸರ್ಕಾರ ಕೂಡ ಸಮನಾದ ಕೊಡುಗೆ ನೀಡುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಪಿಎಮ್-ಎಸ್‌ವೈಎಂ ದಾಖಲಾತಿಗಳು (Documents):

 ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಾಗ ಕಾರ್ಮಿಕರು ಆಧಾರ್ ಕಾರ್ಡ್ ಮತ್ತು ಉಳಿತಾಯ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ. ಚಂದಾದಾರರು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಪ್ರವೇಶಿಸಿ, ರೂ. 55 ರ ಮಾಸಿಕ ಕೊಡುಗೆ ಪಾವತಿಸುತ್ತಾ ಹೋದರೆ ಅವನು ಅಥವಾ ಅವಳು ನಿವೃತ್ತಿಯ ಮಾಸಿಕ ಪಿಂಚಣಿಯಾಗಿ ರೂ. 3,000 ಪಡೆಯಬಹುದು. ಖಾತೆಗೆ ಪಿಂಚಣಿದಾರರು ಪಾವತಿಸುವಷ್ಟೇ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ

ಇದನ್ನೂ ಓದಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2.67 ಲಕ್ಷ ಸಬ್ಸಿಡಿ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಯೋಜನೆ ನೋಂದಣಿ ವಿಧಾನಗಳು:

ಅರ್ಹ ಫಲಾನುಭವಿಗಳು ಹತ್ತಿರದ “ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ)” ಗಳಲ್ಲಿ ಯೋಜನೆಯಡಿ ನೋಂದಾಯಿಸಬಹುದಾಗಿರುತ್ತದೆ. ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ. ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇ.ಎಸ್.ಐ. ಕಾರ್ಪೋರೇಷನ್, ಹಾಗೂ ಭವಿಷ್ಯನಿಧಿ ಇಲಾಖೆ ಹಾಗೂ ಅವರ ವೆಬ್ ವಿಳಾಸಗಳು ಹಾಗೂ ವೆಬ್ ವಿಳಾಸ http://locator.csccloud.in ಗಳಲ್ಲಿ ಪಡೆಯಬಹುದು.  ವಯಸ್ಸಿಗೆ ಅನುಗುಣವಾಗಿ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಬೇಕು. ತದ ನಂತರ ಮಾಸಿಕ ವಂತಿಕೆಯನ್ನು ಅವರ ಖಾತೆಯಿಂದ ಆಟೋ-ಡೆಬಿಟ್ ಮಾಡಲಾಗುವುದು.

ಯೋಜನೆಯ ಸೌಲಭ್ಯಗಳು:

ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಚಂದಾದಾರರು (ಫಲಾನುಭವಿಯು) ತಿಂಗಳಿಗೆ ನಿಶ್ಚಿತ ರೂ.3,000/-ಗಳ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತ ಪಟ್ಟಲ್ಲಿ ಅವರ ಪತ್ನಿ/ಪತಿ ಪಿಂಚಣಿಯ ಶೆ.50 ರಷ್ಟು ಪಿಂಚಣೆಯನ್ನು ಪಡೆಯಲು ಅರ್ಹರಾಗಿರುತ್ತಾಳೆ. ಚಂದಾದಾರರು ಯೋಜನೆಯಿಂದ 60 ವರ್ಷ ಪೂರ್ವದಲ್ಲೇ (ಮಧ್ಯದಿಂದಲೇ) ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ