News

ಮನೆ ಪೂರ್ತಿಗೊಳಿಸದ ಗುತ್ತಿಗೆದಾರನಿಗೆ ಬಿತ್ತು ಬರೋಬ್ಬರಿ 7 ಲಕ್ಷ ರೂ ದಂಡ!

09 March, 2023 9:53 AM IST By: Maltesh
Consumer Court 7 lakh fine to contractor in dharwad

ಧಾರವಾಡ : ಅಳ್ನಾವರ್ ನಿವಾಸಿಯಾದ ಶ್ರೀಮತಿ ರೇಣುಕಾ ಸುಣಗಾರ ಮನೆ ಕಟ್ಟಿಕೊಡುವಂತೆ ಖಾನ್ ಸಿವಿಲ್ ಕನ್ಸಲ್ಟನ್ಸಿಯ ವಾಸಿಮ್ ಖಾನ್ ಪಠಾಣ ರವರ ಜೊತೆ 2020 ನೇ ಇಸವಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆ ಒಪ್ಪಂದದ ಪ್ರಕಾರ ದೂರುದಾರ ಪ್ರತಿ ಚ.ದ.ಅಡಿಗೆ ರೂ.1,800- ಗಳಂತೆ ಗುತ್ತಿಗೆದಾರನಿಗೆ ಸಂದಾಯ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರ ಪ್ರಕಾರ  ದೂರುದಾರರು ಒಟ್ಟು 14 ಲಕ್ಷ 87 ಸಾವಿರ ರೂ. ಹಣವನ್ನು  ಮನೆ ಕಟ್ಟುವ ಕುರಿತು ಎದುರುದಾರರಿಗೆ ನೀಡಿದ್ದರು.

ಸದರಿ ಗುತ್ತಿಗೆದಾರ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿ ಮನೆಯ ಕಟ್ಟಡ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಕಳಪೆ ದರ್ಜೆಯ ಸಾಮಗ್ರಿಯಿಂದ ಕಟ್ಟಿದ್ದರಿಂದ ಮನೆಯ ಸ್ಲ್ಯಾಬ್‍ನಲ್ಲಿ ಲಿಕೇಜ್ ಆಗಿರುತ್ತದೆ ಹಾಗೂ ಮನೆಯ ಇಟ್ಟಿಗೆಗಳು ಸಹ ಕರಗಿ ಹೋಗಿರುತ್ತವೆ. ಕಳಪೆ ಮನೆ ಕಾಮಗಾರಿಯಿಂದ ಮತ್ತು ಮನೆ ಕೆಲಸ ಪೂರ್ತಿಗೊಳಿಸದ್ದರಿಂದ ತನಗೆ ಆರ್ಥಿಕ ಹಾನಿ, ಮಾನಸಿಕ ತೊಂದರೆಯಾಗಿದೆ ಅಂತಾ ಹೇಳಿ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ವಿದ್ಯಾನಿಧಿ: ಆಟೋರಿಕ್ಷಾ ಕ್ಯಾಬ್,ಟ್ಯಾಕ್ಸಿ ಚಾಲಕರ ಮಕ್ಕಳಿಗೆ 10 ಸಾವಿರ ರೂ ಸ್ಕಾಲರ್‌ಶಿಪ್‌- ಅರ್ಜಿ ಆಹ್ವಾನ

ಗುತ್ತಿಗೆದಾರ ವಕೀಲರ ಮೂಲಕ ಹಾಜರಾಗಿ ನಾವು ಕಟ್ಟಡ ಕಾಮಗಾರಿಯಲ್ಲಿ ಅತ್ಯುತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿದ್ದೇವೆ. ದೂರುದಾರ ಇನ್ನೂ ರೂ.12 ಲಕ್ಷ ನಮಗೆ ಕೊಡುವುದಿದೆ ಕಾರಣ ತಮ್ಮಿಂದ ಯಾವುದೇ ಸೇವಾ ನ್ಯೂನ್ಯತೆ ಆಗಿಲ್ಲಾ ಅಂತಾ ಹೇಳಿ ಈ ದೂರನ್ನು ವಜಾ ಮಾಡುವಂತೆ ಕೋರಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು. ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಲಾಗಿದೆಯೋ ಅಥವಾ ಇಲ್ಲವೋ ಅನ್ನುವುದನ್ನು ತಿಳಿದುಕೊಳ್ಳಲು, ಸ್ಥಳಿಯ ವಕೀಲರನ್ನು ಕೋರ್ಟ್ ಕಮೀಷನರ್ ಆಗಿ ನೇಮಿಸಲಾಗಿತ್ತು.

ಅವರು ಸಮಕ್ಷಮ ಸ್ಥಳ ಪರಿಶೀಲನೆ ಮಾಡಿ ಆಯೊಗಕ್ಕೆ ವರದಿ ಸಲ್ಲಿಸಿದ್ದರು. ಅವರ ವರದಿ ಮತ್ತು ಹಾಜರು ಮಾಡಿದ ಸಾಕ್ಷಾಧಾರಗಳನ್ನು ಆಯೋಗವು ಪರಿಶೀಲಿಸಿತು.ದೂರುದಾರ ಗುತ್ತಿಗೆದಾರನಿಗೆ ರೂ.14 ಲಕ್ಷ 87 ಸಾವಿರ ರೂ.ಸಂದಾಯ ಮಾಡಿದ್ದರೂ ಅವರು ಕಳಪೆ ಕಾಮಗಾರಿ ಮಾಡಿ ಕಟ್ಟಡದ ಕೆಲಸ ಪೂರ್ತಿಗೊಳಿಸದ್ದರಿಂದ ಗುತ್ತಿಗೆದಾರ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

7TH Pay Commission 10 ಲಕ್ಷ ಸರ್ಕಾರಿ ನೌಕರರಿಂದ ನಾಳೆ ಕೆಲಸಕ್ಕೆ ಗೈರು; ಜನ ಜೀವನದ ಮೇಲೆ ಪರಿಣಾಮ!

ಅದಕ್ಕಾಗಿ ಗುತ್ತಿಗೆದಾರ ದೂರುದಾರರಿಗೆ ಕೊಡಬೇಕಾದ ಹಣ, ಅವರಿಗೆ ಆಗಿರುವ ಅನಾನುಕೂಲ, ಮಾನಸಿಕ ತೊಂದರೆ ಹಾಗೂ ಪ್ರಕರಣದ ಖರ್ಚು ವೆಚ್ಚ ಒಟ್ಟು 7 ಲಕ್ಷ 50 ಸಾವಿರ ರೂ ನೀಡಲು ಆದೇಶಿಸಿದೆ.ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಆದೇಶಿಸಿದೆ. ಒಂದು ತಿಂಗಳ ಒಳಗಾಗಿ ಗುತ್ತಿಗೆದಾರ ದೂರುದಾರರಿಗೆ ಸದರಿ ಹಣ ಕೊಡದಿದ್ದಲ್ಲಿ ತೀರ್ಪು ನೀಡಿದ ದಿನಾಂಕದಿಂದ 7.50 ಲಕ್ಷದರೂ. ಮೇಲೆ 8% ರಂತೆ ಬಡ್ಡಿ ವಿಧಿಸಿ ನೀಡುವಂತೆ  ಆಯೋಗ ನಿರ್ದೇಶಿಸಿದೆ.