News

PM Kisan 15th installment money ಪಿಎಂ ಕಿಸಾನ್‌ ಹಣ ಬಿಡುಗಡೆಗೆ ಕಾಂಗ್ರೆಸ್‌ ಆಕ್ಷೇಪ: ಯಾಕೆ ?

17 November, 2023 4:47 PM IST By: Hitesh
ಪಿಎಂ ಕಿಸಾನ್‌ ಹಣ ಬಿಡುಗಡೆಗೆ ತೀವ್ರ ವಿರೋಧ

ಪಿಎಂ ಕಿಸಾನ್‌ನ 15ನೇ ಕಂತಿನ ಹಣ (PM Kisan 15th installment money) ಬಿಡುಗಡೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಹೌದು ರೈತರ ಖಾತೆಗೆ ನೇರವಾಗಿ ಸಂದಾಯವಾಗುವ ಪಿಎಂ ಕಿಸಾನ್‌ನ 15ನೇ ಕಂತಿನ ಹಣದ ಬಗ್ಗೆ ಇದೀಗ ತೀವ್ರ ಆಕ್ಷೇಪದ ಮಾತುಗಳು ಕೇಳಿ ಬರುತ್ತಿವೆ.

ಇದಕ್ಕೆ ಮುಖ್ಯ ಕಾರಣ ಇನ್ನು ಕೆಲವೇ ದಿನಗಳಲ್ಲಿ ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವುದು.

ಕೇಂದ್ರ ಸರ್ಕಾರದ ಪಿಎಂ- ಕಿಸಾನ್ ಯೋಜನೆಯ 15ನೇ ಕಂತಿನ (15th installment of PM- Kisan scheme)

318,000 ಕೋಟಿ ರೂಪಾಯಿಯನ್ನು ಪ್ರಧಾನಮಂತ್ರಿ ನರೇಂದ್ರ

ಮೋದಿ ಅವರು ಬುಧವಾರ ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಿಂದಾಗಿ 8 ಕೋಟಿ ರೈತರಿಗೆ ಅನುಕೂಲವಾಗಲಿದೆ.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್ ನಿಧಿ (ಪಿಎಂ- ಕಿಸಾನ್) ಯೋಜನೆಯ ಮೂಲಕ ಪ್ರತಿ ವರ್ಷವೂ ರೈತರಿಗೆ 16,000 ಸಾವಿರ ರೂಪಾಯಿ

ಆರ್ಥಿಕ ಸಹಾಯಧನವನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ಮೂರು ಕಂತಿನಲ್ಲಿ ವರ್ಗಾಯಿಸಲಾಗುತ್ತದೆ.

ಇನ್ನು ಪಿಎಂ ಕಿಸಾನ್‌ ಯೋಜನೆ (PM Kisan Scheme) ಯಡಿ 1 2.62 ಲಕ್ಷ ಕೋಟಿ ಹಣವನ್ನು ರೈತರ ಖಾತೆಗೆ ಜನೆ ಮಾಡಲಾಗಿದೆ. 

PM Kisan 15ನೇ ಕಂತಿನ ಹಣ ಜಮೆಯಾಗದಿದ್ದರೆ ಎಲ್ಲಿ ದೂರು ಕೊಡ್ಬೇಕು ಗೊತ್ತಾ?

ಪಂಚರಾಜ್ಯಗಳ ಚುನಾವಣೆಗೆ ತಳುಕು!

ಎಲ್ಲೆಲ್ಲಿ ಯಾವಾಗ ಚುನಾವಣೆ ?

ರಾಜ್ಯ; ಚುನಾವಣೆ ವರ್ಷ

ನವೆಂಬರ್‌ 7ಕ್ಕೆ ಮಿಜೋರಾಂ

ನವೆಂಬರ್‌ 17ಕ್ಕೆ ಮಧ್ಯಪ್ರದೇಶ

ನವೆಂಬರ್‌ 23ಕ್ಕೆ ರಾಜಸ್ಥಾನ

ನವೆಂಬರ್‌ 30ಕ್ಕೆ ತೆಲಂಗಾಣ

ನವೆಂಬರ್‌ 7 ಮತ್ತು 17ಕ್ಕೆ ಛತ್ತೀಸ್ಗಢದಲ್ಲಿ

ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಚುನಾವಣೆ

ಮುಗಿದಿದ್ದು, ಇನ್ನು ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯುವ ಹಂತದಲ್ಲಿದೆ.

ಹೀಗಾಗಿ,ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ಬಿರುಸಿನ ಮಾತಿನ ಸಮರ ನಡೆದಿದೆ. 

15th installment of PM Kisan ಇದನ್ನು ಮಾಡದಿದ್ದರೆ ಪಿ.ಎಂ ಕಿಸಾನ್‌ನ 15ನೇ ಕಂತಿನ ಹಣ ಬರಲ್ಲ!

ಈ ಪಂಚರಾಜ್ಯಗಳ ಚುನಾವಣೆಯು ಮುಂದಿನ ಲೋಕಸಭೆ ಚುನಾವಣೆಗೆ ಫೈನಲ್‌ ಎಂದೇ ಪರಿಗಣಿಸಲಾಗಿದೆ.

ಉದ್ದೇಶಪೂರ್ವಕವೇ ಎಂದು ಕಾಂಗ್ರೆಸ್‌ ಪ್ರಶ್ನೆ 

ಪಿಎಂ ಕಿಸಾನ್‌ ಯೋಜನೆಯ 15ನೇ ಕಂತಿನ ಹಣವನ್ನು ರೈತರ ಖಾತೆಗೆ ಈ ಹಂತದಲ್ಲಿ ಬಿಡುಗಡೆ ಮಾಡಿರುವುದು ಉದ್ದೇಶಪೂರ್ವಕವೇ

ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. ಇದಕ್ಕೆ ಮುಖ್ಯ ಕಾರಣ ಛತ್ತೀಸಗಢ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ

ಬೆರಳೆಣಿಕೆಯ ದಿನವಿರುವಾಗ ಪಿಎಂ ಕಿಸಾನ್‌ ಹಣ ಬಿಡುಗಡೆ ಮಾಡಿರುವುದು.   

ಪಿಎಂ ಕಿಸಾನ್‌ನ ಯೋಜನೆಯ ಆರನೇ ಕಂತನ್ನು 2020ರ ಆ. 1ರಂದು ಮತ್ತು ಒಂಬತ್ತನೇ

ಕಂತನ್ನು 2021ರ ಆ. 9ರಂದು ಬಿಡುಗಡೆ ಮಾಡಲಾಗಿತ್ತು.    

ಯೋಜನೆಯ 12ನೇ ಕಂತಿನ ಹಣವನ್ನು 2023ರ ಅ. 17ರಂದು ಬಿಡುಗಡೆ ಮಾಡಲಾಗಿತ್ತು.

15ನೇ ಕಂತನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಈ ರೀತಿ ಚುನಾವಣೆ ಸಂದರ್ಭದಲ್ಲಿಯೇ ಬಿಡುಗಡೆ ಮಾಡುವುದಕ್ಕೆ

ಕಾರಣ ಏನು ಎಂದು ಪ್ರಶ್ನೆ ಮಾಡಲಾಗಿದೆ. ಈ ಸಂಬಂಧ ಏಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಇದಕ್ಕೆ ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.