News

ಸಿ.ಎಂ ಆಯ್ಕೆ ಪ್ರಕ್ರಿಯೆ; ಟ್ರೋಲ್‌ಗಳೆಷ್ಟು ಚಂದಿತ್ತು ಗೊತ್ತಾ!

18 May, 2023 12:24 PM IST By: Hitesh
CM selection process; Do you know how cool the trolls are!

ರಾಜ್ಯದ ಹಲವು ಟ್ರೋಲ್‌ ಪೇಜ್‌ಗಳು ಈಗ ಹಾಸ್ಯಕ್ಕಿಂತ ವಿಕೃತಿಯನ್ನೇ ಪ್ರದರ್ಶಿಸುತ್ತಿವೆ.

ಒಂದು ಸಂದರ್ಭವನ್ನು ಯಾವ ರೀತಿ ಹಾಸ್ಯವಾಗಿ ನೋಡಬಹುದು ಎನ್ನುವುದನ್ನು ಕೆಲವು ಯುವಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಸಿ.ಎಂ ಯಾರಾಗ್ತಾರೋ ಗೊತ್ತಿಲ್ಲ ಇಬ್ರದ್ದೂ ಒಂದು ಪೋಟೋ ವಿಶ್‌ (ಶುಭಾಶಯ ಕೋರುವ ಚಿತ್ರ)ರೆಡಿ ಮಾಡಿಟ್ಟುಕೊಂಡಿದ್ದೇವೆ

ಎನ್ನುವ ಪೋಸ್ಟ್‌ಗಳು ಸೇರಿದಂತೆ ಹಲವು ತಿಳಿಹಾಸ್ಯದ ಸಾಲುಗಳು ಎಲ್ಲರೂ ನಗುವಂತಿದೆ.

ಇದನ್ನು ಖುದ್ದು ಡಿ.ಕೆ ಶಿವಕುಮಾರ್‌ ಅಥವಾ ಸಿದ್ದರಾಮಯ್ಯ ಅವರು ನೋಡಿದರೂ ನಗದೆ ಇರಲಾರರು!

ಹೌದು ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಈ ಬಾರಿ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.

ಇದನ್ನು ಜನ ಯಾವ ರೀತಿ ಹಾಸ್ಯವಾಗಿ ನೋಡಿದರು, ಜನರ ಕುತೂಹವನ್ನು ಹೇಗೆಲ್ಲ ಕೆರಳಿಸಿತು ಎನ್ನುವುದರ ಬಗ್ಗೆ ಈ ಲೇಖನ.

ಈ ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ತುಸು ಭಿನ್ನವಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು.

ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ ಮೇ 10ರಂದು ಮತದಾಮ ನಡೆದು, ಮೇ 13ಕ್ಕೆ ಚುನಾವಣಾ ಫಲಿತಾಂಶವೂ ಪ್ರಕಟವಾಗಿದೆ.

ಇದೇ ಮೊದಲ ಬಾರಿ ಎನ್ನುವಂತೆ ಕರ್ನಾಟಕ ವಿಧಾನಸಭೆಯ ಮ್ಯಾಜಿಕ್‌ ಸಂಖ್ಯೆ 113ಅನ್ನು ದಾಟಿ,

ಪೂರ್ಣ ಬಹುಮತ ಅಂದರೆ 135 ಸೀಟುಗಳು ಕಾಂಗ್ರೆಸ್‌ಗೆ ಸಿಕ್ಕಿದೆ.

ಈ ರೀತಿ ಅಭೂತಪೂರ್ವ ಪ್ರಮಾಣದಲ್ಲಿ ಸ್ಥಾನಗಳನ್ನು ಗಳಿಸಿದ ಕಾಂಗ್ರೆಸ್‌ ಅದೇ ರೀತಿಯಲ್ಲಿ ಸರ್ಕಾರವನ್ನೂ

ರಚಿಸಲಿದೆ ಎಂದೇ ರಾಜ್ಯದ ಜನತೆ ಅಂದುಕೊಂಡಿದ್ದರು. ಆದರೆ, ರಾಜ್ಯದ ಮುಖ್ಯಮಂತ್ರಿ ಆಯ್ಕೆ ಕಸರತ್ತಾಗಿ ಬದಲಾಗಿದ್ದು,

ಐದು ದಿನಗಳ ಕಾಲ ಚರ್ಚೆಯೇ ನಡೆದು, ಅಂತಿಮವಾಗಿ ಮುಖ್ಯಮಂತ್ರಿ ಆಯ್ಕೆಯಾಗಿದೆ.

ಈ ಸುದೀರ್ಘ ಪ್ರಹಸನಕ್ಕೆ ಸಾರ್ವಜನಿಕರಿಂದ ವ್ಯಂಗ್ಯ ಹಾಗೂ ತೀಕ್ಷ್ಣ ಪ್ರತಿಕ್ರಿಯೆಗಳು ಸಿಕ್ಕಿವೆ.

ಬಂತಾ ಬಂದಿಲ್ವಾ!

ಸಿನಾ/ ಡಿನಾ ಅಂದ್ರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾ ಇಲ್ಲ, ಡಿ.ಕೆ ಶಿವಕುಮಾರ್‌ ಅವರ, ಬಂತಾ ಬಂದಿಲ್ವಾ, ಫೈನಲ್‌ ಆಯ್ತಾಂತಾ.

ಯಾರೂ ಸಹ ಎಲ್ಲ ಫೈನಲ್‌ ಆಗುವ ವರೆಗೆ ವಿಶ್‌ ಮಾಡಬೇಡ್ರೋ ಎನ್ನುವ ಹಾಸ್ಯದ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂತು.

ಇದಕ್ಕೆ ಕೆಲವರು ಬರುತ್ತೆ, ಬರುತ್ತೆ ಸ್ವಲ್ಪ ಸಮಾಧಾನ ಇರಲಿ ಎಂದೂ ಪ್ರತಿಕ್ರಿಯಿಸಿದ್ದಾರೆ. 

CM selection process; Do you know how cool the trolls are!

ಯಾವುದಕ್ಕೂ ಎರಡು ಪೋಸ್ಟರ್‌ ಇರ್ಲಿ!

ಸಾಮಾಜಿಕ ಜಾಲತಾಣದಲ್ಲಿ ಸಿ.ಎಂ ಆಯ್ಕೆಗೆ ಸಂಬಂಧಿಸಿದಂತೆ ಕಂಡುಬಂದ ಟ್ರೋಲ್‌ ಅಥವಾ ವ್ಯಂಗ್ಯ ಸಾಲುಗಳಲ್ಲಿ ಆಕರ್ಷಕವಾಗಿ

ಕಾಣಿಸಿದ ಪೋಸ್ಟ್‌ಗಳಲ್ಲಿ ಹಕೀಂ ಪಡಡ್ಕ (Hakeem Padadka) ಅವರು ಹಂಚಿಕೊಂಡ ಪೋಸ್ಟರ್‌ಗಳು ಮಜವಾಗಿದೆ. 

CM selection process; Do you know how cool the trolls are!

ಇನ್ನೂ(ಸಿ.ಎಂ) ಯಾರಾಗ್ತಾರೆ ಅನ್ನೋ ಖಚಿತ ಮಾಹಿತಿ ಇಲ್ಲದ ಕಾರಣ, ಒಂದು ವೇಳೆ ಮಧ್ಯರಾತ್ರಿ ಹೊತ್ತಲ್ಲೇನಾದ್ರೂ ಘೋಷಣೆ ಆದ್ರೆ,

ಪೋಸ್ಟರ್ ಮಾಡಿ ಕೊಡು ಅಂತ ಯಾರ ಕೈಕಾಲು ಹಿಡಿಯುವುದು....? ಇದಕ್ಕೆ ಪರಿಹಾರವೆಂಬಂತೆ ನಮ್ಮ ನಡುವಿನ ಅತಿಬುದ್ಧಿವಂತ Taj Puttur ಕೈಗೊಂಡ ಉಪಾಯ ನೋಡಿ...

ಇದಾಗುವಾಗ ರಗಾಳೆ ಇಲ್ಲ ಅಲ್ವಾ,

ಘೋಷಣೆ ಮಾಡಿದಾಗ ಪೋಸ್ಟರ್ ಶೇರ್ ಮಾಡಿದ್ರಾಯ್ತು... ಎಂದು ಡಿ.ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಿಗೆ ಶುಭಕೋರುವ

ಎರಡು ಪ್ರತ್ಯೇಕ ಪೋಸ್ಟ್‌ಗಳನ್ನು ಅವರು ಹಂಚಿಕೊಂಡಿದ್ದಾರೆ.

CM selection process; Do you know how cool the trolls are!

ಇದಾದ ಮೇಲೆ ಇನ್ನೂ ಕ್ರಿಯೇಟಿವ್‌ ಎನ್ನುವ ಮತ್ತೊಂದು ಪೋಸ್ಟರ್‌ ಸಹ ಸಖತ್‌ ವೈರಲ್‌ ಆಗಿದೆ. ಅದರಲ್ಲಿ ಕರ್ನಾಟಕದ ನಕ್ಷೆ ಇದ್ದು,

ಭಾವಚಿತ್ರದ ಜಾಗವನ್ನು ಖಾಲಿ ಬಿಟ್ಟು, ನೂತನ ಮುಖ್ಯಮಂತ್ರಿಗೆ ಶುಭಾಶಯ ಕೋರಲಾಗಿದೆ.

ಅದರಲ್ಲಿ ಬುದ್ಧಿವಂತಿಕೆಯಲ್ಲಿ ತಾಜುಗಿಂತ ಸ್ವಲ್ಪ ಮುಂದೆ ಇರುವ, ಬ್ರೋಕರ್ Nasir Alakke ಈ ಕುರ್ಚಿಗಾಗಿರುವ ಗಲಾಟೆಯಲ್ಲಿ ಪರಿಹಾರ ಕಂಡುಕೊಂಡಿದ್ದು ಹೀಗೆ...

ಸಿ.ಎಂ ಘೋಷಣೆಯಾದಾಗ ಫೋಟೋ ಮತ್ತು ಹೆಸರು ಲಗತ್ತಿಸಿದರೆ ಸಾಕು ಎನ್ನುವ ತೀರ್ಮಾನ ಅವರದ್ದು... ಎಂದು ಹಕೀಂ ಪಡಡ್ಕ ಅವರು ಮತ್ತೊಂದು ಪೋಸ್ಟ್‌ ಶೇರ್‌ ಮಾಡಿದ್ದಾರೆ. 

CM selection process; Do you know how cool the trolls are!

ದೆಹಲಿಗೆ ಅಂಗಳಕ್ಕೆ ತಲುಪಿದ್ದ ಸಿ.ಎಂ ಆಯ್ಕೆ ಚಂಡು!

ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಈ ಬಾರಿ ಬಹುತೇಕ ದೆಹಲಿಯ ಅಂಗಳಕ್ಕೆ ಶಿಫ್ಟ್‌ ಆಗಿತ್ತು. ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ

ಅವರ ನೇತೃತ್ವದಲ್ಲಿ ಸರಣಿ ಸಭೆಗಳು ನಡೆದಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದರು.  

ಈ ಸುದ್ದಿಗಳನ್ನೂ ಓದಿರಿ: 

Karnataka CM ಮೊತ್ತೊಮ್ಮೆ ಸಿದ್ದರಾಮಯ್ಯ ದರ್ಬಾರ್‌; ಎರಡನೇ ಬಾರಿ ಸಿ.ಎಂ

Siddaramaiah ಸಿದ್ದುಗೆ ಮತ್ತೆ ಮುಖ್ಯಮಂತ್ರಿ ಗದ್ದುಗೆ; ಆಯ್ಕೆಯ ಹಿಂದಿನ ಕಾರಣಗಳೇನು ?

Elections ರಾಜ್ಯದಲ್ಲಿ ಮತ್ತೆ ಬರಲಿದೆ ಸಾಲು ಸಾಲು ಚುನಾವಣೆ: ಮತದಾನಕ್ಕೆ ಸಿದ್ಧರಾಗಿರಿ!

Chief Minister's ಮುಖ್ಯಮಂತ್ರಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ; ಸುರ್ಜೀವಾಲಾ ಹೇಳಿಕೆ!