ದೇಶದಲ್ಲಿ ದಿನದಿಂದ ದಿನಕ್ಕೆ ಅಡುಗೆ ಎಣ್ಣೆ ಆಮದು ಪ್ರಮಾಣವು ಏರಿಕೆಯಾಗುತ್ತಿದೆ. 2022 ಅಕ್ಟೋಬರ್ ತಿಂಗಳ ಕೊನೆಯಲ್ಲಿ ಆಮದು ಪ್ರಮಾಣ 1.57 ಲಕ್ಷ ಕೋಟಿಗೆ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 34.18ರಷ್ಟು ಏರಿಕೆ ಆಗಿದೆ ಎಂದು ಸಾಲ್ವೆಂಟ್ ಎಕ್ಸ್‌ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ವರದಿ ಮಾಡಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ 1.17 ಲಕ್ಷ ಕೋಟಿ ಮೌಲ್ಯದ ಅಡುಗೆ ತೈಲ ಆಮದಾಗಿತ್ತು. ಇವೆರಡನ್ನು ಹೋಲಿಸಿ ನೋಡಿದರೆ ಬರೋಬ್ಬರಿ 131.3 ಲಕ್ಷ ಟನ್‌ನಿಂದ 140.3 ಲಕ್ಷ ಟನ್ ಏರಿಕೆ ಆಗಿದೆ. ಮೊದಲ ಎರಡು ತ್ರೈಮಾಸಿಕಗಳಲ್ಲಿ ಆಮದು ನಿಧಾನವಾಗಿ ಹೆಚ್ಚಾಗಿತ್ತು. ಮೂರನೇ ತ್ರೈಮಾಸಿಕದಲ್ಲಿ ಇಳಿಕೆ ಕಂಡಿತ್ತು.
ಬೆಂಗಳೂರು ಸೇರಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎರಡು ದಿನ ಮಳೆ!
ಆದರೆ ನಾಲ್ಕನೇ ತ್ರೈಮಾಸಿಕದಲ್ಲಿ ಮತ್ತ ಏರಿಕೆಯಾಗಿದೆ. ಇತ್ತ ಇಂಡೊನೇಷ್ಯಾ ದೇಶವು ತಾಳೆ ಎಣ್ಣೆ ರಫ್ತು ಮೇಲೆ ವಿಧಿಸಿದ್ದ ನಿಷೇಧ ತೆರುವುಗೊಳಿಸಿದ್ದು ಭಾರತವು ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೃಷಿ ಜಾಗರಣ ಕೇಂದ್ರ ಕಚೇರಿಗೆ ಭೇಟಿ ನೀಡಿದ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಸಂಪುಟದ ಶಾಸಕ
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಸಂಪುಟದಲ್ಲಿ ಶಾಸಕರಾಗಿರುವ, ಬಿಹಾರ ಮೂಲದ ಡಾ.ಅಭಯ್ ಕುಮಾರ್ ಸಿಂಗ್, ನಿನ್ನೆ ನವದೆಹಲಿಯಲ್ಲಿರುವ ಕೃಷಿ ಜಾಗರಣದ ಕೇಂದ್ರ ಕಚೇರಿಗೆ ಭೇಟಿ ನೀಡಿದರು.
ತದನಂತರ KJ ಚೌಪಾಲ್ ಭಾಗವಹಿಸಿದ ಅವರು ಕೃಷಿ ಜಾಗರಣದ ಯುವ ಕೃಷಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ರಷ್ಯಾ ಕೃಷಿಯ ಬಗ್ಗೆ ಮಾಹಿತಿ ನೀಡಿ ಅಲ್ಲಿಯ ಯಂಯ್ರೋಪಕರಣಗಳು ಹಾಗೂ ನವೀನ ತಂತ್ರಜ್ಞಾನ ದೇಶದಿಂದ ದೇಶಕ್ಕೆ ವಲಸೆಯಾಗಬೇಕು ಎಂದರು.
ಭಾರತದಲ್ಲಿ ಕೃಷಿಗೆ ಅಪಾರವಾದ ಅವಕಾಶಗಳು ಇದ್ದು ಇದನ್ನು ಬಳಸಿಕೊಳ್ಳಬೇಕು. ಕೃಷಿ ಜಾಗರಣ ವೇದಿಕೆಯು ರೈತರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.
EPFO ಸದಸ್ಯರಿಗೆ 50 ಸಾವಿರ ರೂ ಹೆಚ್ಚುವರಿ ಬೋನಸ್..ಇಲ್ಲಿದೆ ಸಂಪೂರ್ಣ ಮಾಹಿತಿ
ಜೊತೆಗೆ ರಷ್ಯಾದಲ್ಲಿ ಸಣ್ಣ ಕೃಷಿಕರು ವಿರಳವಾಗಿದ್ದಾರೆ. ಕೃಷಿ ಮಾಡುವವರು ಶ್ರೀಮಂತರಾಗಿದ್ದು, ರೈತರು ಉತ್ತಮ ಮಟ್ಟದ ಜೀವನವನ್ನು ನಡೆಸುತ್ತಿದ್ದಾರೆ ಎಂದರು. ಇನ್ನು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಸಂಪಾದಕ ಎಂ ಸಿ ಡೊಮಿನಿಕ್ , ನಿರ್ದೆಶಕಿ ಶೈನಿ ಡೊಮಿನಿಕ್, ಕೃಷಿ ಜಾಗರಣ ಸಿಒಒ ಡಾ.ಪಿ.ಕೆ.ಪಂತ್ ಉಪಸ್ಥಿತರಿದ್ದರು.
ಇನ್ನಷ್ಟು ಬಿಗಿಗೊಳ್ಳುತ್ತಿದೆ ಪಿಎಂ ಕಿಸಾನ್ ನಿಯಮಗಳು
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ. ದೇಶದ ಹಲವು ಜನಪ್ರಿಯ ಯೋಜನೆಗಳಲ್ಲಿ ಒಂದಾಗಿರುವ ಈ ಯೋಜನೆಯ ನಿಯಮಗಳನ್ನು ಇದೀಗ ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ.
ಈಗಾಗಲೆ ರೈತರಿಗೆ ಪಿಎಂ ಕಿಸಾನ್ ಯೋಜನೆಯ 12ನೇ ಕಂತನ್ನು ಬಿಡುಗಡೆ ಮಾಡಲಾಗಿದೆ. ಈ ಕಂತು ಬಿಡುಗಡೆಯಾಗುವ ಮುನ್ನ ಸಾಕಷ್ಟು ರೈತರು ನಕಲಿ ದಾಖಲೆಗಳನ್ನು ಸಲ್ಲಿಸಿ ಹಣ ಪಡೆಯುವ ಪ್ರಕರಣಗಳು ಪತ್ತೆಯಾಗಿದ್ದವು. ಅರ್ಹ ಫಲಾನುಭವಿಗಳಿಗಿಂತ ಅನರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾವಣೆಗೊಂಡಿತ್ತು.
ಈ ಎಲ್ಲ ಕಾರಣದಿಂದಲೇ ಇನ್ನು ಕೆಲವೇ ದಿನಗಳಲ್ಲಿ ಜಮಾ ಆಗಲಿರುವ 13ನೇ ಕಂತು ಪಡೆಯಲು ಕೋಟ್ಯಾಂತರ ರೈತರು ಇನ್ನು ಒಂದಷ್ಟು ಕಠಿಣ ನಿಯಮ ಪಾಲಿಸಬೇಕಿದೆ. ಎಲ್ಲ ಅರ್ಹ ಫಲಾನುಭವಿ ಪ್ರತಿ ರೈತರು ಕಾನೂನಿನ ಪ್ರಕಾರ ಮೊದಲು ತಮ್ಮ ಜಮೀನಿನ ಮೂಲ ದಾಖಲೆಗಳನ್ನು ಪರಿಶೀಲಿಸಬೇಕು. ಮತ್ತು ಸರಿಯಾಗಿರುವ ದಾಖಲೆಗಳನ್ನು ಕೆವೈಸಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ̤
ಜೊತೆಗ ಅಧಿಕೃತ ವೆಬ್‌ಸೈಟ್‌ನಲ್ಲಿ ರೈತರ ಕಾರ್ನರ್ ಆರಂಭಗೊಂಡಿದ್ದು. ಅಲ್ಲಿ ರೈತರು ಸ್ವತಃ ತಾವೇ ರಿಜಿಸ್ಟರ್ ಮಾಡಿಕೊಳ್ಳಬಹುದು. ಅವರ ಅಕೌಂಟ್‌ನ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ರೇಷನ್ ಕಾರ್ಡ್ ಕಾಪಿಯನ್ನು ಸಲ್ಲಿಸದಿದ್ದಲ್ಲಿ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಸಿಗುವುದಿಲ್ಲ.
ರಾಜ್ಯದ 34 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ನೀಡೋದಾಗಿ ಸಿಎಂ ಘೋಷಣೆ
ರೈತರ ಹಲವು ದಿನಗಳ ಬೇಡಿಕೆಯನ್ನ ಈಡೇರಿಸಲು ಮುಂದಾಗಿದ್ದ ಕರ್ನಾಟಕ ಹಾಲು ಒಕ್ಕೂಟ ಮಂಡಳಿ ನಿನ್ನೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನ ಮೂರು ರೂಪಾಯಿಗೆ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಅಷ್ಟೇ ಅಲ್ಲದೆ ಇವತ್ತಿನಿಂದ ಈ ದರವು ಜಾರಿಯಾಗಲಿದೆ ಎಂದು ಕೂಡ ಹೇಳಿತ್ತು.
ಅದರೀಗ, ಸಿಎಂ ಬಸವರಾಜ್ ಬೊಮ್ಮಾಯಿ ಈ ನಿರ್ಧಾರಕ್ಕೆ ದಿಢೀರ್‌ನೆ ಬ್ರೇಕ್ ಹಾಕಿದ್ದಾರೆ. ಹೌದು ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಹೊಸ ದರ ಪರಿಷ್ಕರಣೆ ಸಂಬಂಧ ಇದೇ ನವೆಂಬರ್ 20ನೇ ತಾರೀಖಿನ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪರಿಷ್ಕೃತ ದರ ಜಾರಿಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.
ಹಾಲು ಮೊಸರಿನ ದರ ಪರಿಷ್ಕರಣೆಗೆ ಸಿಎಂ ಬೊಮ್ಮಾಯಿ ಬ್ರೇಕ್!
ಸದ್ಯ ಒಂದು ಲೀಟರ್ ಹಾಲಿನ ಬೆಲೆ 37 ರೂಪಾಯಿ ಇದೆ. ಮೊಸರು ಪ್ರತಿ ಲೀಟರ್‌ಗೆ 45 ರೂಪಾಯಿ ಇದೆ. ಒಂದು ವೇಳೆ ಪರಿಷ್ಕೃತ ದರ ಜಾರಿಗೆ ಬಂದರೆ, ಒಂದು ಲೀಟರ್ ಮೊಸರಿಗೆ 48 ರೂಪಾಯಿ ನೀಡಬೇಕಾಗುತ್ತದೆ. ಒಂದು ಲೀಟರ್ ಹಾಲಿಗೆ 40-50 ರೂಪಾಯಿವರೆಗೂ ಕೊಡಬೇಕಾಗುತ್ತದೆ. ಇದು ಗ್ರಾಹಕರ ಜೇಬಿಗೆ ಭಾರವಾಗಿ ಪರಿಣಮಿಸಲಿದೆ
ರಾಜ್ಯದ ಅನ್ನದಾತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು ರಾಜ್ಯದ 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರುಪಾಯಿ ಸಾಲ ನೀಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.
ಸಿಎಂ ಬೊಮ್ಮಾಯಿಯಿಂದ ಸರ್ಕಾರಿ ನೌಕರರ ಪರಿಷ್ಕೃತ ವೇತನ ಪ್ರಕಟ; ಹಾಗಿದ್ರೆ ಇನ್ಮುಂದೆ ಎಷ್ಟಾಗಲಿದೆ ವೇತನ?
ರೈತನ ಬದುಕು ಹಸನಾಗಬೇಕಾದರೆ ಆತನಿಗೆ ಸ್ಕೇಲ್ ಆಫ್ ಫೈನಾನ್ಸ್ ಆಧಾರದಲ್ಲಿ ಬೆಳೆದ ಬೆಳೆಗೆ ದರ ಫಿಕ್ಸ್ ಆಗಬೇಕು. ಆ ಮೂಲಕ ರೈತ ಸ್ವಾವಲಂಬಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಕಾಯಕ ಯೋಜನೆಗಳ ಅನುಷ್ಠಾನವಾಗಬೇಕು. ರೈತರಿಗೆ ಅಲ್ಪಾವಧಿ ಸಾಲ ವಿತರಣೆಯಾಗಿ ಅದರ ಸದುಪಯೋಗ ವಾಗಬೇಕೆಂಬುದೆ ನಮ್ಮ ಸರ್ಕಾರದ ಆಶಯ ಎಂದರು.