News

ಮುಖ್ಯಮಂತ್ರಿ ಕಾಫಿ, ತಿಂಡಿಗೆ 200 ಕೋಟಿ ರೂಪಾಯಿ ಖರ್ಚು, ಏನಿದು ಚರ್ಚೆ ?

07 March, 2023 10:39 AM IST By: Hitesh
Chief Minister spends 200 crore rupees on coffee and snacks, what is the discussion?

ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರು ಕಾಫಿ, ಟೀಗೆ ಬರೋಬ್ಬರಿ 200 ಕೋಟಿ  ಖರ್ಚು ಮಾಡಿದ್ದಾರೆ ಎಂಬ ವಿಷಯ ಇದೀಗ ತೀವ್ರವಾಗಿ ಚರ್ಚೆ ಆಗುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರು ಹಾಗೂ ಅವರ ಪುತ್ರ ಪ್ರಶಾಂತ್‌ ಅವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದೆ.

ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖುಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿಯನ್ನು ಕಾಫಿ/ ಟೀಗೆ ವೆಚ್ಚ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಇದಕ್ಕೆ ಸರಣಿ ಟ್ವೀಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಅವರ ಕಾಲದಲ್ಲಿ ಎಷ್ಟು ವೆಚ್ಚ ಮಾಡಲಾಗಿತ್ತು ಎಂದು ಹೇಳಿದ್ದಾರೆ.

Char Dham Yatra ಚಾರ್ ಧಾಮ್ ಯಾತ್ರಾರ್ಥಿಗಳಿಗೆ ಆರೋಗ್ಯ ಸೇವೆ

ಸರ್ಕಾರವೇ ನನಗೆ ನೀಡಿರುವ ಮಾಹಿತಿಯಂತೆ ನಾನು ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ನನ್ನ ಕಚೇರಿಯಲ್ಲಿನ ಸಭೆಗಳು ಮತ್ತು ಜನತಾದರ್ಶನಗಳು ಮತ್ತಿತರ ಕಾರ್ಯಕ್ರಮಗಳಿಗೆ ಕಾಫಿ, ತಿಂಡಿ ಮತ್ತು ಊಟ ಪೂರೈಕೆಗೆ ಖರ್ಚಾಗಿರುವ ಹಣ ರೂ.3.26 ಕೋಟಿ ಮಾತ್ರ ಎಂದು ಹೇಳಿದ್ದಾರೆ.

ಶಾಸಕ ಮಾಡಾಳ್ ಪುತ್ರನ ಬಳಿ ತಕ್ಷಣಕ್ಕೆ 40 ಲಕ್ಷ ರೂಪಾಯಿ, ಮನೆಯಲ್ಲಿ ಸುಮಾರು 8 ಕೋಟಿ ರೂಪಾಯಿ ನಗದು ಜತೆಗೆ ನೂರಾರು ಕೋಟಿ ಅಕ್ರಮ ಆಸ್ತಿಯ ದಾಖಲೆಗಳು ಸಿಕ್ಕರೂ ಈ ಬಗ್ಗೆ ಅರ್ಧ ಗಂಟೆ ಕೂಡ ವಿಚಾರಣೆ ನಡೆಸಬೇಕು ಎಂದು ಪೊಲೀಸರಿಗೆ  ಯಾಕೆ ಅನಿಸಲಿಲ್ಲ? ಎಂದೂ ಅವರು ಪ್ರಶ್ನಿಸಿದ್ದಾರೆ.  

ಹಾಲ್‌ಮಾರ್ಕ್ ಇಲ್ಲದ ಚಿನ್ನಾಭರಣಗಳ ಮಾರಾಟಕ್ಕೆ ಬೀಳಲಿದೆ ಬ್ರೇಕ್‌

ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿರುವ ದಾಖಲೆ

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನ ಕಚೇರಿಯಲ್ಲಿ ಕಾಫಿ, ತಿಂಡಿ, ಊಟ ಪೂರೈಕೆಗೆ ರೂ.200 ಕೋಟಿ ಖರ್ಚಾಗಿದೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಕೂಗುಮಾರಿಗೆ ಸರಿಯಾದ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಕೊಡಿಸಬೇಕೆಂದು ಮುಖ್ಯಮಂತ್ರಿ @BSBommai ಅವರಿಗೆ ಮನವಿ ಮಾಡುತ್ತೇನೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಬ್ರಹ್ಮಾಂಡ ಭ್ರಷ್ಟಾಚಾರದ ಹಗರಣದಿಂದ ಬತ್ತಲಾಗಿ ಹೋಗಿರುವ ರಾಜ್ಯ ಸರ್ಕಾರ ಮಾನ ಉಳಿಸಿಕೊಳ್ಳಲು ಇಂತಹ ಕೂಗುಮಾರಿಗಳನ್ನು ಬಳಸಿಕೊಳ್ಳುತ್ತಿದೆ ಎನ್ನುವುದನ್ನು ಜನ ಅರ್ಥಮಾಡಿಕೊಳ್ಳುತ್ತಾರೆ.

ಬಂಡಲ್ ಗಟ್ಟಳೆ ನೋಟುಗಳನ್ನೇ ನುಂಗಿದವರು ಕಾಫಿ-ತಿಂಡಿಯ ಲೆಕ್ಕದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ವ್ಯಂಗ್ಯವಾಡಿದ್ದಾರೆ.  

ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 13-5-2013 ರಿಂದ 30-01-2014 ರವರೆಗೆ ರೂ. 85,13 ಲಕ್ಷ , 2014-15 ರಲ್ಲಿ ರೂ. 58.45 ಲಕ್ಷ , 2015-16 ರಲ್ಲಿ  ರೂ.39.20 ಲಕ್ಷ , 2016-17 ರಲ್ಲಿ ರೂ. 66,03 ಲಕ್ಷ ಮತ್ತು

2017- 18 ರಲ್ಲಿ ರೂ. 77.26 ಲಕ್ಷ ಹಣವನ್ನು ಮುಖ್ಯಮಂತ್ರಿ ಕಚೇರಿಯ ಕಾಫಿ-ತಿಂಡಿಗೆ ಖರ್ಚು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಅವರು ಟ್ವಿಟ್ಟರ್‌ನಲ್ಲಿ ದಾಖಲೆ ಲಗತ್ತಿಸಿ ಟ್ವಿಟ್‌ ಮಾಡಿದ್ದಾರೆ.  

Gold Rate ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ: ಖರೀದಿದಾರರಿಗೆ ಶಾಕ್‌!