News

ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್‌, ಹಣ್ಣು: 371 ಕೋಟಿ ಅನುದಾನ!

06 January, 2023 1:54 PM IST By: Hitesh
Chicken, fruit in the afternoon heat: 371 crore grant!

 ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುವುದಕ್ಕೇ ಪರ- ವಿರೋಧ ಚರ್ಚೆಗಳು ನಡೆದಿದ್ದವು. ಮೊಟ್ಟೆ ನೀಡುವುದನ್ನು ಹಲವರು ವಿರೋಧಿಸಿದ್ದರು.  

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ 

ಇದೀಗ ಪಶ್ವಿಮ ಬಂಗಾಳದ ಸರ್ಕಾರವು ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್‌ ನೀಡಲು ಮುಂದಾಗಿದೆ.  

ಇದೇ ತಿಂಗಳ 23 ರಿಂದ ಮುಂದಿನ ನಾಲ್ಕು ತಿಂಗಳವರೆಗೂ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್ ಮತ್ತು ಹಣ್ಣಗಳನ್ನು ಪೂರೈಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರ ರೂ.371 ಕೋಟಿ ರೂಪಾಯಿಯನ್ನೂ ಹಂಚಿಕೆ ಮಾಡಿದೆ.

ಪ್ರಧಾನ ಮಂತ್ರಿ ಪೋಷಣ್ ಅಭಿಯಾನದಡಿ ಮುಂದಿನ ನಾಲ್ಕು ತಿಂಗಳ ಕಾಲ ವಾರದಲ್ಲಿ ಒಂದುದಿನದಂತೆ  ಹೆಚ್ಚುವರಿ ಪೌಷ್ಠಿಕಯುಕ್ತ ಆಹಾರವಾಗಿ  ಚಿಕನ್ ಮತ್ತು ಆಯಾ ಋತುವಿನ ಹಣ್ಣುಗಳನ್ನು ಪೂರೈಸಲು ನಿರ್ಧರಿಸಲಾಗಿದೆ. ಅಲ್ಲದೇ ಈ ಕುರಿತು ಅಧಿಕೃತ ನೋಟಿಫಿಕೇಷನ್‌ನಲ್ಲಿ ಹೇಳಲಾಗಿದೆ.

ಈ ಹೊಸ ಯೋಜನೆಯಲ್ಲಿ ಹೆಚ್ಚುವರಿ ಪೌಷ್ಠಿಕಾಂಶಯುಕ್ತ ಆಹಾರ ಪೂರೈಕೆಗೆ ಪ್ರತಿ ವಿದ್ಯಾರ್ಥಿಗಳಿಗೆ ವಾರಕ್ಕೆ 20 ರೂಪಾಯಿ ವೆಚ್ಚವಾಗಲಿದೆ. ಈ ಪ್ರಕ್ರಿಯೆ 16 ವಾರಗಳ ಕಾಲ ಮುಂದುವರಿಯಲಿದೆ ಎಂದು ಹೇಳಲಾಗಿದೆ.

ಪ್ರಸ್ತುತ ವಿದ್ಯಾರ್ಥಿಗಳಿಗೆ ಬಿಸಿಯೂಟದಲ್ಲಿ ಅನ್ನ, ಬೇಳೆ, ತರಕಾರಿ, ಸೋಯಾಬಿನ್ ಮತ್ತು ಮೊಟ್ಟೆಗಳನ್ನು ನೀಡಲಾಗುತ್ತಿದ್ದು, ಜನವರಿ 23 ರಿಂದ ಏಪ್ರಿಲ್ 23ರವರೆಗೂ ವಾರದ ವಿವಿಧ ದಿನಗಳಲ್ಲಿ ಹೆಚ್ಚುವರಿ ಆಹಾರ ಪದಾರ್ಥಗಳನ್ನು ನೀಡಲು ನಿರ್ದೇಶಿಸಲಾಗಿದೆ.  

Chicken, fruit in the afternoon heat: 371 crore grant!

ಮಧ್ಯಾಹ್ನದ ಬಿಸಿಯೂಟ ಯೋಜನೆ

2002-03ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸಿತು. ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ತೊಗರಿಬೇಳೆ, ಸಂಸ್ಕರಿತ ತಾಳೆಎಣ್ಣೆ ಮತ್ತು ಕಡಲೆ ಬೇಳೆಗಳನ್ನೊಳಗೊಂಡ ಆಹಾರವನ್ನು ಒದಗಿಸಲು ನಿರ್ಧರಿಸಿದೆ. ಈ ಪ್ರತಿಷ್ಠಿತ ಘನ ಯೋಜನೆಯನ್ನು ಜಾರಿಗೊಳಿಸಲು ಘನ ಸರ್ಕಾರವು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಒಂದು ಸಂಸ್ಥೆಯನ್ನಾಗಿ ನೇಮಿಸಿರುತ್ತದೆ. ಕೆಲವು ಪ್ರಮುಖ ಅಂಶಗಳು ಈ ಮುಂದಿನಂತಿವೆ.

Chicken, fruit in the afternoon heat: 371 crore grant!

ಒಂದನೇ ತರಗತಿಯಿಂದ ಎಂಟನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಉಚಿತ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಒಂಭತ್ತನೇ ಮತ್ತು ಹತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಎಪಿಎಲ್ ದರದಲ್ಲಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.

ATM ಹಣ ನಿರಾಕರಿಸಿದ HDFC ಬ್ಯಾಂಕ್‌ಗೆ 2. 24 ಲಕ್ಷ ಭಾರೀ ದಂಡ!

Chicken, fruit in the afternoon heat: 371 crore grant!
  • ಈ ಯೋಜನೆಯ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ
  • ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಉಚಿತವಾಗಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿನಲ್ಲಿಯೂ ಎನ್‍ಸಿಡಿಇಎಕ್ಸ್‍ನ ಇ-ಹರಾಜಿನ ಮೂಲಕ ಆ ತಿಂಗಳಿನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಪೂರೈಸಬಲ್ಲ ನೋಂದಾಯಿತ ಪೂರೈಕದಾರರಿಂದ ಅಕ್ಕಿಯನ್ನು ಖರೀದಿಸಿ ರಿಯಾಯಿತಿ ದರದಲ್ಲಿ ಮಾರಲಾಗುತ್ತಿದೆ.
  • 2011 ರಿಂದ ತೊಗರಿಬೇಳೆ ಮತ್ತು ಸಂಸ್ಕರಿತ ತಾಳೆ ಎಣ್ಣೆಗಳನ್ನು, 2015 ರಿಂದ ಕಡಲೇಬೇಳೆಯನ್ನು ಹಾಗೂ 2017 ರಿಂದ ದ್ವಿಗುಣ ಬಲವರ್ಧಿತ ವಿಟಮಿನ್ ಎ ಮತ್ತು ಡಿ ಗಳನ್ನು ನೀಡಲಾಗುತ್ತಿದೆ. ಈ ಆಹಾರ ಧಾನ್ಯಗಳು ಮತ್ತು ಖಾದ್ಯ ತೈಲಗಳನ್ನು ಎನ್‍ಸಿಡಿಇಎಕ್ಸ್‍ನ ಇ-ಹರಾಜಿನ ಮುಖಾಂತರ ನೋಂದಾಯಿತ ಪೂರೈಕೆದಾರರಿಂದ ಖರೀದಿಸಲಾಗುತ್ತಿದೆ. ಆದರೆ ಜೂನ್- 2018ರ ನಂತರ ತೊಗರಿಬೇಳೆಯನ್ನು ಸರ್ಕಾರದ ನಿರ್ದೇಶನದಂತೆ ಎನ್‍ಎಎಫ್‍ಇಡಿ ಇವರಿಂದ ಖರೀದಿಸಲಾಗುತ್ತಿದೆ.
  • ಸಾಮಾನ್ಯ ಅಕ್ಕಿ ಮತ್ತು ಕಡಲೇಬೇಳೆಗಳ ಗುಣಮಟ್ಟವನ್ನು ಅಳೆಯಲು ಎನ್‍ಸಿಎಂಎಲ್, ಹೈದರಾಬಾದ್ ಇವರನ್ನು ಗುಣಮಟ್ಟ ಮೌಲ್ಯಮಾಪನಕ್ಕೆ ಮೂರನೇ ವ್ಯಕ್ತಿಯನ್ನಾಗಿ ಆಯ್ಕೆ ಮಾಡಲಾಗಿದೆ. ನಿಗಮವು ರಾಜ್ಯಾದ್ಯಂತ 67 ಉಗ್ರಾಣಗಳನ್ನು ಹೊಂದಿದೆ. ಕೆಲವು ಜಿಲ್ಲೆಗಳಲ್ಲಿ 37 ಪ್ರತ್ಯೇಕ ಉಗ್ರಾಣಗಳನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯ ಆಹಾರ ಸಾಮಗ್ರಿಗಳ ದಾಸ್ತಾನಿಗಾಗಿ ನಿರ್ವಹಿಸಲಾಗುತ್ತಿದೆ. 206 ಪಿಡಿಎಸ್ ಉಗ್ರಾಣಗಳಲ್ಲಿ ಕೆಲವು ಉಗ್ರಾಣಗಳನ್ನು ಜಂಟಿಯಾಗಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯ ಸರಕುಗಳ ವಹಿವಾಟು ನಡೆಸಲಾಗುತ್ತಿದೆ. 
  •   ಆಹಾರ ಮತ್ತು ರಸಗೊಬ್ಬರದ ಮೇಲಿನ ಸಬ್ಸಿಡಿ ಕಡಿತಕ್ಕೆ ಕೇಂದ್ರ ಸರ್ಕಾರದ ಚಿಂತನೆ!