News

ಈಡೇರಿದ ರಾಜ್ಯ ಸರ್ಕಾರಿ ನೌಕರರ ಬೇಡಿಕೆ.. ‘ಸಾಮೂಹಿಕ ವಿಮಾ ಯೋಜನೆ’ಯಲ್ಲಿ ಬದಲಾವಣೆ

28 May, 2022 10:52 AM IST By: Maltesh
ಸಾಂದರ್ಭಿಕ ಚಿತ್ರ

ಇಲ್ಲಿಯವರೆಗೆ  ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆಗೆ ಸಂಬಂಧಿಸಿದ ಅನೇಕ ಕೆಲಸಗಳು ಕಡತ, ಕಾಗದಗಳ ರೂಪದಲ್ಲಿ ಸಾಗುತ್ತಿದ್ದವು. ಸದ್ಯ ಇದೆಲ್ಲವಕ್ಕೂ ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಮುಂದಿನ ದಿನಗಳಲ್ಲಿ ಸಾಮೂಹಿಕ ವಿಮಾ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ, ನಾಮನಿರ್ದೇಶನ ಹಾಗೂ ಅಂತಿಮ ಕ್ಲೇಮುಗಳನ್ನು ಆನ್ ಲೈನ್ ಮೂಲಕ ಸ್ವೀಕರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.

Shocking News: Fix Deposit ಇಟ್ಟಿದ್ದ 1 ಕೋಟಿ ಹಣವನ್ನ IPL ಬೆಟ್ಟಿಂಗ್‌ಗೆ ಬಳಸಿದ ಪೋಸ್ಟ್ ಮಾಸ್ಟರ್!

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

ಈ ಕುರಿತು  ರಾಜ್ಯ ಸರ್ಕಾರ ನಡವಳಿ ಹೊರಡಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ಯೋಜನೆ, 1981ಗೆ ಸಂಬಂಧಿಸಿದ ಸ್ವೀಕೃತಿ, ನಾಮನಿರ್ದೇಶನ ಹಾಗೂ ಅಂತಿಮ ಕ್ಲೇಮು ಪ್ರಕರಣಗಳನ್ನು KJID ಪೋರ್ಟಲ್ https://kgidonline.karnataka.gov.in ರಲ್ಲಿ ಆನ್ ಲೈನ್ ಸೌಲಭ್ಯ ಕಲ್ಪಿಸಲಾಗಿದೆ. ಈ ಪೋರ್ಟಲ್ ಮೂಲಕವೇ  ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ನಿರ್ವಹಿಸುವುದು ಎಂದು ತಿಳಿಸಸಲಾಗಿದೆ.

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಸಮಗ್ರ ಗಣಕೀಕರಣದ ಭಾಗವಾಗಿ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಒಂದಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ, 1981, ಸಹ ಗಣಕೀಕರಣವಾಗುತ್ತಿದ್ದು, ಈ ಬಗ್ಗೆ ಯೋಜನೆಗೆ ಸಂಬಂಧಿಸಿದ ವಂತಿಗೆ, ಪ್ರಸ್ತಾವನೆ, ನಾಮನಿರ್ದೇಶನ ಹಾಗೂ ಅಂತಿಮ ಕ್ಷೇಮುಗಳ ವ್ಯವಹರಣೆ ಕುರಿತು ಈಗಾಗಲೇ ಕೆ.ಜಿ.ಐ.ಡಿ. ಪೋರ್ಟ ಲ್ https://kgidonline.karnataka.gov.in/ ರಲ್ಲಿ ಆನ್‌ಲೈನ್ (online) ಸೌಲಭ್ಯವಿರುತ್ತದೆ.

ಈರುಳ್ಳಿ ಬೆಲೆ ಕುಸಿತ; ಕೆ.ಜಿ ಈರುಳ್ಳಿಗೆ 3 ರೂಪಾಯಿ! ಕಂಗಾಲಾದ ರೈತರು

ಅಡುಗೆ ಎಣ್ಣೆ ದರ ಇಳಿಕೆ.. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ತುಸು ಸಮಾಧಾನದ ಸಂಗತಿ..!

ಆದ್ದರಿಂದ ಎಲ್ಲಾ ಇಲಾಖೆಗಳ ಡಿ.ಡಿ.ಓ. (ವೇತನ ಬಡವಾಡೆ ಅಧಿಕಾರಿ)ಗಳು ಕರ್ನಾಟಕ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ, 1981 ಗೆ ಸಂಬಂಧಿಸಿದ ಸ್ವೀಕೃತಿ, ನಾಮನಿರ್ದೇಶನ ಹಾಗೂ ಅಂತಿಮ ಕ್ಷೇಮು ಪ್ರಕರಣಗಳನ್ನು (Subscription, Normination and Final Settlement Claims) ಆಫ್‌ಲೈನ್ (offline) ಮೂಲಕ ಸ್ವೀಕರಿಸುವುದನ್ನು ಕಡ್ಡಾಯವಾಗಿ ನಿಲ್ಲಿಸಿ, ಆನ್‌ಲೈನ್ (online) ಮೂಲಕ ನಿರ್ವಹಿಸಲು ಸೂಚನೆಗಳನ್ನು ನೀಡುವಂತೆ ಪತ್ರದಲ್ಲಿ ಆಡಳಿತಾಧಿಕಾರಿಗಳು, ಕರ್ನಾಟಕ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ಹಾಗೂ ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಬೆಂಗಳೂರು, ಇವರು ಕೋರಿರುತ್ತಾರೆ.

ಇನ್ನೂ ಮುಂದೆ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ಸೌಲಭ್ಯದ ಸ್ವೀಕೃತಿ, ನಾಮ ನಿರ್ದೇಶನ ಹಾಗೂ ಅಂತಿಮ ಕ್ಲೇಮುಗಳನ್ನು ಆಫ್ ಲೈನ್ ಮೂಲಕ ಸ್ವೀಕರಿಸುವುದನ್ನು ನಿಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

7th Pay: ಸರ್ಕಾರಿ ನೌಕರರಿಗೆ ಬಿಗ್ ಅಪ್ಡೇಟ್; 8ನೇ ವೇತನ ಆಯೋಗದಲ್ಲಿದೆ ಮಹತ್ವದ ಬದಲಾವಣೆ!

Heavy Rain: ಮೇ 28ರ ವರೆಗೆ ದೇಶಾದ್ಯಂತ ಭಾರೀ ಮಳೆ! ಹವಾಮಾನ ಇಲಾಖೆಯಿಂದ ಎಚ್ಚರಿಕೆ..