News

ರೈತರಿಗೆ ಬಂಪರ್‌: 14 ಬೆಲೆಗಳಿಗೆ ಭರ್ಜರಿ  ಬೆಂಬಲ ಬೆಲೆ ಘೋಷಿಸಿದ ಕೇಂದ್ರ..ಯಾವ ಬೆಳೆಗಳಿಗೆ ಎಷ್ಟು..?

09 June, 2022 9:28 AM IST By: Maltesh
Centre hikes MSP for Kharif crops

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ದೇಶದ ಕೋಟ್ಯಾಂತರ ಅನ್ನದಾತರಿಗೆ ಸಿಹಿ ಸುದ್ದಿ ನೀಡಿದೆ. ಹೌದು  2022-23 ರ ಸಾಲಿನ  ಖಾರೀಫ್‌ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನ ಕೇಂದ್ರ ಸರ್ಕಾರ ನಿನ್ನೆ ಘೋಷಿಸಿದೆ.

ಎಳ್ಳು,ತೊಗರಿ, ಭತ್ತ, ಜೋಳ, ರಾಗಿ, ಹತ್ತಿ, ಶೇಂಗಾ ಸೇರಿ ಬರೋಬ್ಬರಿ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು 2022-23ನೇ ಹಂಗಾಮಿನಲ್ಲಿ ಹೆಚ್ಚಿಸಿ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಣಯ ಕೈಗೊಂಡಿದೆ.

ಸಾಮಾನ್ಯ ದರ್ಜೆಯ ಭತ್ತದ ಬೆಂಬಲ ಬೆಲೆಗಳನ್ನು 2022-23ರ ಬೆಳೆ ವರ್ಷಕ್ಕೆ ಹಿಂದಿನ ವರ್ಷ 1,940 ರಿಂದ ಕ್ವಿಂಟಲ್‌ಗೆ 2,040 ರೂ.ಗೆ ಹೆಚ್ಚಿಸಲಾಗಿದೆ. ಕೇಂದ್ರವು 2022-23ರ ಖಾರಿಫ್ ಮಾರ್ಕೆಟಿಂಗ್ ಸೀಸನ್‌ಗೆ MSPಗಳನ್ನು ಅನುಮೋದಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಆಮದು ಅವಲಂಬನೆ ಕಡಿಮೆಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ರೈತರ ಆದಾಯ ಹೆಚ್ಚಿದೆ. ಅನುಮೋದಿತ ದರಗಳು ಕನಿಷ್ಠ 1.5 ಪಟ್ಟು ಮಟ್ಟದಲ್ಲಿ MSP ಗಳನ್ನು ನಿಗದಿಪಡಿಸುವ ತತ್ವಕ್ಕೆ ಅನುಗುಣವಾಗಿರುತ್ತವೆ.

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕ್ವಿಂಟಾಲ್‌ಮೆಕ್ಕೆಜೋಳಕ್ಕೆ 92 ರು. ಶೇಂಗಾಗೆ 300 ರು., ತೊಗರಿಗೆ 300 ಸೂರ್ಯಕಾಂತಿಗೆ 385 ರು., ಎಳ್ಳಿಗೆ 523ರು. ಭತ್ತಕ್ಕೆ 100 ರು., ಜೋಳಕ್ಕೆ 232 ರು., ರಾಗಿಗೆ 201 ರು.  ನಷ್ಟುಬೆಂಬಲ ಬೆಲೆಯನ್ನು ಹೆಚ್ಚಿಸಲು ಸಭೆಯನ್ನು ನಿರ್ಣಯಕ್ಕೆ ಬರಲಾಗಿದೆ. ಇನ್ನು ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ  ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, ಈ 14 ಬೆಳೆಗಳ ಪೈಕಿ ಎಳ್ಳಿನ ಕನಿಷ್ಠ ಬೆಂಬಲ ಬೆಲೆಯನ್ನು 523 ರು.ನಷ್ಟುಹೆಚ್ಚಿಸಲಾಗಿದ್ದು, ಇದು ಅತ್ಯಧಿಕ ಬೆಂಬಲ ಬೆಲೆಯಲ್ಲಿನ ಏರಿಕೆಯಾಗಿದೆ ಎಂದಿದ್ದಾರೆ.

ಈ ಬೆಳೆಗಳು ದೇಶದಲ್ಲಿ ಮುಂಗಾರು ಹಾಗೂ ಹಿಂಗಾರು ಕಾಲದಲ್ಲಿನ ಪ್ರಧಾನ ಬೆಳೆಗಳಾಗಿವೆ. ಇನ್ನು ಹವಾಮಾನ ಇಲಾಖೆ ಕೂಡ ಈ ಬಾರಿ ಉತ್ತಮ ಮಳೆಯಾಗುವ ನೀರಿಕ್ಷೆ ಇದೆ ಎಂದು ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಉತ್ತಮ ಬೆಳೆ ಬರುವ ಸಾಧ್ಯತೆ ಇದೆ. 

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

Bitter Gourd :ಹೈಬ್ರೀಡ್‌ ಹಾಗಲಕಾಯಿ ಕೃಷಿ ಹೇಗೆ..ಇಲ್ಲಿದೆ ಸಿಂಪಲ್‌ ಟಿಪ್ಸ್‌ 

ಬೆಂಬಲ ಬೆಲೆ ಏರಿಕೆ ಎಷ್ಟು? (ಕ್ವಿಂಟಲ್‌ನಲ್ಲಿ)

ಬೆಳೆ ಬೆಲೆ (ಕ್ವಿಂಟಾಲ್‌ಗೆ) ಹೆಚ್ಚಳ ಪ್ರಮಾಣ

ಮೆಕ್ಕೆಜೋಳ 1962 -92

ಶೇಂಗಾ 5850 -300

ತೊಗರಿ 6600 -300

ಉದ್ದು 6600- 300

ಹೆಸರು 7755 -480

ಸೂರ್ಯಕಾಂತಿ 6400 -385

ಹತ್ತಿ (ಸಣ್ಣ ಎಳೆ) 6080 -354

ಹತ್ತಿ (ಉದ್ದ ಎಳೆ) 6380 -355

ಎಳ್ಳು 7830 -523

ಭತ್ತ (ಸಾಮಾನ್ಯ) 2040 -100

ಭತ್ತ (ಎ ದರ್ಜೆ) 2060 -100

ಜೋಳ (ಹೈಬ್ರೀಡ್‌) 2970 -232

ಬಿಳಿಜೋಳ 2990- 232

ರಾಗಿ 3578- 201

ರೈತ ಸಿರಿ ಯೋಜನೆಯತ್ತ ಒಂದು ನೋಟ

ಮೋದಿ ಸರ್ಕಾರದಿಂದ ರೈತರಿಗೆ ಭರ್ಜರಿ ಉಡುಗೊರೆ! ರೂ. 4000ದ ಯೂರಿಯಾ ಈಗ 266 ಕ್ಕೆ !