News

ಬಿ.ವೈ.ವಿಜಯೇಂದ್ರ ಮತ್ತು ಕುಟುಂಬದವರ ಬಳಿ ಇಷ್ಟು ಕೋಟಿ ರೂ ಆಸ್ತಿ!

18 April, 2023 12:22 PM IST By: Hitesh
B.Y.Vijayendra and his family have so many crores of property!

ರಾಜ್ಯ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡಲು ಇನ್ನು ಎರಡು ದಿನಗಳು ಮಾತ್ರ ಕಾಲಾವಕಾಶವಿದ್ದು, ಘಟಾನುಘಟಿಗಳು ಚುನಾವಣೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಆಸ್ತಿ ವಿವರವನ್ನು ಘೋಷಿಸಿದ್ದಾರೆ.   

ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಹಾಗೂ ಅವರ ಪತ್ನಿಗೆ ಸ್ವಂತ ಕಾರು ಇಲ್ಲ ಎಂದು ಉಲ್ಲೇಖಿಸಲಾಗಿದೆ.

ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಮತ್ತು ಅವರ ಪತ್ನಿ ಪ್ರೇಮಾ 126 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.ಆದರೆ, ದಂಪತಿಗೆ ಸ್ವಂತ ಕಾರು ಇಲ್ಲ.

ಮೇ 10ರಂದು ನಿಗದಿಯಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಶಿಕಾರಿಪುರ ಕ್ಷೇತ್ರಕ್ಕೆ ಏಪ್ರಿಲ್ 17 ರಂದು ವಿಜಯೇಂದ್ರ ನಾಮಪತ್ರ ಸಲ್ಲಿಸಿದರು.

Karnataka Election ಲಿಂಗಾಯತ ಸಮುದಾಯದ ಮತ ಸೆಳೆಯಲು ಪಕ್ಷಗಳ ಸರ್ಕಸ್‌: ಡ್ಯಾಮೇಜ್‌ ಕಂಟ್ರೋಲ್‌ಗೆ ಬಿಜೆಪಿ ಪ್ಲಾನ್‌ !

ನಾಮಪತ್ರದ ಜೊತೆಗೆ ಅವರು ಸಲ್ಲಿಸಿದ ಆಸ್ತಿ ಮತ್ತು ಹೊಣೆಗಾರಿಕೆಯ ಅಫಿಡವಿಟ್ ಪ್ರಕಾರ, 47 ವರ್ಷದ ವಿಜಯೇಂದ್ರ ಅವರ ಬಳಿ ಒಟ್ಟು 126 ಕೋಟಿ ರೂಪಾಯಿ ನಗದು ಇದೆ.

ಇನ್ನು 46.82 ಕೋಟಿ ಮೌಲ್ಯದ ಚರ ಆಸ್ತಿ ಇದೆ. ಅವರ ಪತ್ನಿ ಬಳಿ 7.85 ಕೋಟಿ ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ.

ದಂಪತಿ ಹೊಂದಿರುವ ಸ್ಥಿರಾಸ್ತಿಯ ಪ್ರಸ್ತುತ ಮೌಲ್ಯ 70.11 ಕೋಟಿ ರೂಪಾಯಿ ಇದೆ. ಇನ್ನು 34.52 ಕೋಟಿ ರೂಪಾಯಿ ಹೊಣೆಗಾರಿಕೆ ಹೊಂದಿದ್ದಾರೆ.

karnataka Election ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ಗೆ: ರಾಜಕೀಯ ಲೆಕ್ಕಾಚಾರವೇನು?

ಅಲ್ಲದೇ ಅವರ ಬಳಿ ಒಟ್ಟು 1.75 ಲಕ್ಷ ರೂಪಾಯಿ ಮೌಲ್ಯದ ಟ್ರ್ಯಾಕ್ಟರ್ ಹಾಗೂ ಟ್ರೇಲರ್ ಇದೆ.

ಅಫಿಡವಿಟ್‌ನಲ್ಲಿ ಕಾರುಗಳ ಉಲ್ಲೇಖವಿಲ್ಲ. ದಂಪತಿ ಬಳಿ 2.29 ಕೋಟಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ವಸ್ತುಗಳು ಇವೆ.

ವಿಜಯೇಂದ್ರ ಅವರ ಬಳಿ 1.34 ಕೆಜಿ ಚಿನ್ನ, ಅವರ ಪತ್ನಿ ಬಳಿ 1.25 ಕೆಜಿ ಚಿನ್ನದ ವಸ್ತುಗಳು ಇವೆ.

ಅಭ್ಯರ್ಥಿಯ ಕುಟುಂಬವು ಶಿಕಾರಿಪುರದಲ್ಲಿ ಕೃಷಿ ಭೂಮಿ, ದೊಡ್ಡಬಳ್ಳಾಪುರ, ರಾಮನಗರ, ಶಿಕಾರಿಪುರ, ಶಿವಮೊಗ್ಗ, ಕಲಬುರಗಿ

ಮತ್ತು ಬೆಂಗಳೂರಿನಲ್ಲಿ ಕೃಷಿಯೇತರ ಭೂಮಿ ಹೊಂದಿದೆ. ಅಲ್ಲದೇ ಏಳು ವಸತಿ ಕಟ್ಟಡಗಳನ್ನು ಹೊಂದಿದ್ದಾರೆ.

ವಿಜಯೇಂದ್ರ ಅವರ ಹೆಸರು ಎರಡು ಕ್ರಿಮಿನಲ್ ಪ್ರಕರಣಗಳಲ್ಲಿ ಹೆಸರಿಸಿದ್ದಾರೆ.

ಸಾರ್ವಜನಿಕ ಸೇವಕನಿಗೆ ಲಂಚ ನೀಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸರು ಒಂದು ಪ್ರಕರಣ ದಾಖಲಿಸಿದ್ದಾರೆ.

ಮತ್ತೊಂದು ಪ್ರಕರಣವು ಮನಿ ಲಾಂಡರಿಂಗ್‌ಗೆ ಸಂಬಂಧಿಸಿದೆ ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ ಎಂದು ವರದಿ ಆಗಿದೆ.   

Karnataka Election 2023 ಕರ್ನಾಟಕ ಚುನಾವಣೆ: ಪ್ರಚಾರಕ್ಕೆ ತೆಲಂಗಾಣದಿಂದ ಬರ್ತಿದ್ದಾರೆ ಐವರು ನಾಯಕರು!