News

ಡ್ರ್ಯಾಗನ್ ಫ್ರೂಟ್ ರಫ್ತು ಉತ್ತೇಜಿಸಲು APEDA ವತಿಯಿಂದ ಖರೀದಿದಾರರ ಹಾಗೂ ಮಾರಾಟಗಾರರ ಸಭೆ

20 August, 2022 3:29 PM IST By: Maltesh
Buyer Seller Meet organised by APEDA, To Promote Dragon Fruit export

ಈ ರೀತಿಯ ಮೊದಲ ಉಪಕ್ರಮದಲ್ಲಿ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA), ಬೆಂಗಳೂರು ಪ್ರಾದೇಶಿಕ ಕಛೇರಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು KAPPEC ಸಹಯೋಗದೊಂದಿಗೆ  ಡ್ರ್ಯಾಗನ್ ಫ್ರೂಟ್ ರಫ್ತು ಉತ್ತೇಜಿಸಲು GKVK ಕ್ಯಾಂಪಸ್, ಬೆಂಗಳೂರುನಲ್ಲಿ  “ಡ್ರ್ಯಾಗನ್ ಹಣ್ಣಿನ ಖರೀದಿದಾರರ ಮಾರಾಟಗಾರರ ಸಭೆಆಯೋಜಿಸಲಾಗಿತ್ತು.

ಅಬ್ಬಾ 27 ಸಾವಿರ ಲೀಟರ್‌ ಅಡುಗೆ ಎಣ್ಣೆ ಸೀಜ್‌! ಕಾರಣವೇನು ಗೊತ್ತಾ..?

ಕುರಿತು ಮಾಹಿತಿ ನೀಡಿದ  ಎಪಿಇಡಿಎ ಅಧ್ಯಕ್ಷ ಡಾ.ಎಂ.ಅಂಗಮುತ್ತು, ಭವಿಷ್ಯದಲ್ಲಿ ಹೆಚ್ಚಿನ ಪಾಲುದಾರರ ಸಂವಾದವನ್ನು ನಡೆಸಲಾಗುವುದು ಮತ್ತು ರಫ್ತು ಹೆಚ್ಚಿಸಲು ಡ್ರ್ಯಾಗನ್ ಫ್ರೂಟ್ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪ್ರಚಾರಕ್ಕಾಗಿ ರಿವರ್ಸ್ ಖರೀದಿದಾರರ ಮಾರಾಟಗಾರರ ಸಭೆಯನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಉದ್ಯಮಕ್ಕೆ ಸಹಾಯ ಮಾಡಲು ಹಣ್ಣಿನ ನಿಯತಾಂಕಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪ್ರಮಾಣೀಕರಣಕ್ಕಾಗಿ ಅವರು IIHR ನೊಂದಿಗೆ ಸಹಯೋಗವನ್ನು ಸೂಚಿಸಿದರು.

ಪಿಯುಸಿ ಹಾಗೂ ಪದವಿ ಪಾಸ್‌ ಆದವರಿಗೆ ಇಲ್ಲಿದೆ ಟಾಪ್‌ 5 ನೇಮಕಾತಿ ವಿವರಗಳು

ಸಭೆಯಲ್ಲಿ ರೈತರು/ಎಫ್‌ಪಿಒಗಳು ಮತ್ತು ರಫ್ತುದಾರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ JDGFT, KAPPEC, UAS ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯುಎಎಸ್(ಬಿ) ಉಪಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು.

APEDA, ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿದೆ, ಇದು ಭಾರತೀಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ರಫ್ತುಗಳನ್ನು ಉತ್ತೇಜಿಸುವ ನೋಡಲ್ ಏಜೆನ್ಸಿಯಾಗಿದೆ ಮತ್ತು ತೋಟಗಾರಿಕೆ, ಪುಷ್ಪಕೃಷಿ, ಸಂಸ್ಕರಿಸಿದ ಆಹಾರ, ಕೋಳಿ ಉತ್ಪನ್ನಗಳು, ಡೈರಿ ಮತ್ತು ರಫ್ತುಗಳನ್ನು ಇತರ ಕೃಷಿ ಉತ್ಪನ್ನಗಳನ್ನ ಸುಗಮಗೊಳಿಸುವ ಮತ್ತು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿದೆ.

ವರ್ಚುವಲ್ ಟ್ರೇಡ್ ಫೇರ್‌ಗಳು, ಫಾರ್ಮರ್ ಕನೆಕ್ಟ್ ಪೋರ್ಟಲ್, ಇ-ಆಫೀಸ್, ಹಾರ್ಟಿನೆಟ್ ಟ್ರೇಸಿಬಿಲಿಟಿ ಸಿಸ್ಟಮ್, ಖರೀದಿದಾರರ ಮಾರಾಟಗಾರರ ಸಭೆಗಳು, ರಿವರ್ಸ್ ಖರೀದಿದಾರರ ಮಾರಾಟಗಾರರ ಸಭೆಗಳು, ಉತ್ಪನ್ನ ನಿರ್ದಿಷ್ಟ ಪ್ರಚಾರಗಳು ಇತ್ಯಾದಿಗಳನ್ನು ಆಯೋಜಿಸಲು ವರ್ಚುವಲ್ ಪೋರ್ಟಲ್‌ಗಳ ಅಭಿವೃದ್ಧಿಯ ಮೂಲಕ APEDA ಹಲವಾರು ರಫ್ತು ಪ್ರಚಾರ ಚಟುವಟಿಕೆಗಳು ಮತ್ತು ಉಪಕ್ರಮಗಳನ್ನು ತೆಗೆದುಕೊಂಡಿದೆ. APEDA ಮೂಲಸೌಕರ್ಯಗಳನ್ನು ಸೃಷ್ಟಿಸಲು ಮತ್ತು ರಾಜ್ಯದಿಂದ ರಫ್ತು ಉತ್ತೇಜಿಸಲು ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ಮೂಲ: PIB

ಒಂದೇ ಬೆಳೆಯಲ್ಲಿ ನಾಲ್ಕು ಬೆಳೆ! ಈ ಹೊಸ ತಂತ್ರದಿಂದ ರೈತರಿಗೆ ಭಾರೀ ಹಣ ಸಿಗಲಿದೆ