ರಾಜ್ಯ ಸರ್ಕಾರವು ಈ ಬಾರಿಯ 2023-24ನೇ ಸಾಲಿನ ಬಜೆಟ್‌ನಲ್ಲಿ ರೈತರಿಗೆ ಹಲವು ಜನಪರ ಹಾಗೂ ಭರ್ಜರಿ ಕೊಡುಗೆಗಳನ್ನು ನೀಡಿದೆ.
ಎಲ್ಲರನ್ನೂ ಒಳಗೊಂಡ ಬಜೆಟ್‌ಗೆ ಆದ್ಯತೆ ನೀಡಲಾಗಿದೆ.
ಕಿಸಾನ್ ಕಾರ್ಡ್‌ದಾರರಿಗೆ ಸಿಗಲಿದೆ ಬರೋಬ್ಬರಿ 10,000 ಸಾವಿರ ರೂ!
ಈ ಬಾರಿಯ ಬಜೆಟ್‌ನಲ್ಲಿಯೂ ಕಳೆದ ಕೆಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ವಲಯವಾರು ವರ್ಗೀಕರಣದ ಆಧಾರದ ಮೇಲೆಯೇ ಬಜೆಟ್ ಮಂಡನೆ ಮಾಡಲಾಗಿದೆ.
ರೈತರಿಗೆ, ಹಿಂದುಳಿದ ವರ್ಗದವರಿಗೆ, ಮಹಿಳೆಯರಿಗೆ ಹಾಗೂ ಗೃಹಿಣಿಯರು ಎಲ್ಲರನ್ನೂ ಒಳಗೊಂಡ ಬಜೆಟ್‌ಗೆ ಆದ್ಯತೆ ನೀಡಲಾಗಿದೆ.
State budget 2023 ಬೊಮ್ಮಾಯಿ ಗಿಫ್ಟ್: ಗೃಹಿಣಿಯರಿಗೆ ಮಾಸಿಕ ಸಿಗಲಿದೆ ಇಷ್ಟು ಸಹಾಯಧನ!
ಇದರಲ್ಲಿ ಮುಖ್ಯವಾಗಿ ರೈತರಿಗೆ ತುಸು ಹೆಚ್ಚಿನ ಕೊಡುಗೆಗಳನ್ನೇ ನೀಡಲಾಗಿದೆ.
ಪ್ರಸಕ್ತ ವರ್ಷದಿಂದಲೇ ರೈತರಿಗೆ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಗಳಿಂದ 5 ಲಕ್ಷಗಳಿಗೆ ಹೆಚ್ಚಿಸಲಾಗಿದೆ.
ಅಲ್ಲದೇ ಪ್ರಸಕ್ತ ಸಾಲಿನಿಂದ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿಗಳಷ್ಟು ಸಾಲ ವಿತರಿಸಲು ನಿರ್ಧರಿಸಲಾಗಿದೆ.
State budget 2023 ಬೊಮ್ಮಾಯಿಯಿಂದ ರೈತರಿಗೆ ಮಿಠಾಯಿ: ರೈತರಿಗೆ 5 ಲಕ್ಷ ರೂಪಾಯಿಯವರೆಗೆ ಬಡ್ಡಿರಹಿತ ಸಾಲ!
- ಕಿಸಾನ್ ಕ್ರೆಡಿಟ್ ಕಾರ್ಡ್ ಇರುವ ರೈತರಿಗೆ ಭೂಸಿರಿ ಎಂಬ ನೂತನ ಯೋಜನೆಯಡಿ 2023-24ನೇ ಸಾಲಿನಿಂದ 10,000 ಸಾವಿರಗಳ ಹೆಚ್ಚುವರಿ ಸಹಾಯ ಧನ ನೀಡಲಾಗುವುದು ಎಂದು ಘೋಷಿಸಲಾಗಿದೆ.
- ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ 10.32 ಲಕ್ಷ ವಿದ್ಯಾರ್ಥಿಗಳಿಗೆ 125 ಕೋಟಿ ಸೌಲಭ್ಯ.
- ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ ಬರೋಬ್ಬರಿ 2,900 ಕೋಟಿಗೆ ಮಾರುಕಟ್ಟೆ ಸಹಾಯ.
- ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರ ಖರೀದಿಗೆ ಬರೋಬ್ಬರಿ 962 ಕೋಟಿ ವೆಚ್ಚ.
- ನೀರಾವರಿ ಪಂಪ್‌ಸೆಟ್‌ಗಳಿಗೆ 52,590 ಕೋಟಿ ವಿದ್ಯುತ್ ಸಹಾಯ ಧನ.
- ಫಸಲ್ ಬಿಮಾ ಯೋಜನೆಯಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ 4,900 ಕೋಟಿ ರೂಪಾಯಿ ಪ್ರೀಮಿಯಂ ಪಾವತಿಗೆ ಅಸ್ತು!
- ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, ರಾಗಿ, ಜೋಳ, ಹೆಸರು ಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗಾಗಿ 6,650 ಕೋಟಿ ನೆರವು.
- ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ ಭದ್ರತೆ ಕಲ್ಪಿಸಲಾಗುವುದು.
- ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ 400 ಕೋಟಿ ಅನುದಾನ ಮೀಸಲು
- ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ 2,037 ಕೋಟಿ ಅನುದಾನ
- ರಾಜ್ಯದಲ್ಲಿ ಬೆಳೆಗಳ ಸಂಸ್ಕರಣೆ, ಶೇಖರಣೆಗಾಗಿ 10.45 ಲಕ್ಷ ಫಲಾನುಭವಿಗಳಿಗೆ 175 ಕೋಟಿ ನೆರವು.
- ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ 5,245 ಕೋಟಿ ವೆಚ್ಚ
State budget 2023 ರಾಜ್ಯ ಸರ್ಕಾರದ 2023-24ನೇ ಸಾಲಿನ ಮಹತ್ವದ ಬಜೆಟ್‌ಗೆ ಕೌಂಟ್‌ಡೌನ್!