News

ನುಚ್ಚಕ್ಕಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ..ಕಾರಣವೇನು..?

11 September, 2022 4:04 PM IST By: Maltesh
Broken Rice Export Ban in India

ದೇಶದ ರೈತರು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಭಾರತ ಸರ್ಕಾರವು ಅಕ್ಕಿ ರಫ್ತು ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಸರ್ಕಾರವು ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನ ಮೇಲೆ ಸುಮಾರು 20 ಪ್ರತಿಶತದಷ್ಟು ರಫ್ತು ಸುಂಕವನ್ನು ವಿಧಿಸಲು ಹೊರಟಿದೆ. ಇದಲ್ಲದೆ, ಅಕ್ಕಿಯ ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಒಡೆದ (ನುಚ್ಚಕ್ಕಿ) ಅಕ್ಕಿಯನ್ನು ರಫ್ತು ಮಾಡುವುದನ್ನು ಸಹ ಸರ್ಕಾರ ನಿಷೇಧಿಸಿದೆ .

ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್‌: 7 ನೇ ವೇತನ ಆಯೋಗ ರಚಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ

ರಫ್ತು ನಿಷೇಧ: ದೇಶದಲ್ಲಿ ಅಕ್ಕಿ ಬೆಲೆ ಏರಿಕೆಯಾಗುತ್ತಿರುವುದನ್ನು ಕಂಡು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದ ಅಡಿಯಲ್ಲಿ, ಸರ್ಕಾರವು ನುಚ್ಚಕ್ಕಿಯನ್ನು ನಿಷೇಧಿಸಿದೆ. ವಿದೇಶಿ ವ್ಯಾಪಾರ ಮಹಾನಿರ್ದೇಶಕ ಸಂತೋಷ್ ಕುಮಾರ್ ಸಾರಂಗಿ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಅಧಿಸೂಚನೆಯ ಪ್ರಕಾರ, ಸೆಪ್ಟೆಂಬರ್ 9, 2022 ರಂದು ಇಡೀ ದೇಶದಲ್ಲಿ  ನುಚ್ಚಕ್ಕಿ ರಫ್ತು ನಿಷೇಧಿಸಲಾಗಿದೆ.

ಅಕ್ಕಿ ರಫ್ತು ನಿಷೇಧ ಏಕೆ?

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯುವ ವಿಸ್ತೀರ್ಣ ತೀರಾ ಕಡಿಮೆ ಎಂಬುದೇ ಒಡೆದ ಅಕ್ಕಿ ರಫ್ತು ನಿಷೇಧದ ಹಿಂದಿನ ಸರ್ಕಾರದ ಉದ್ದೇಶ. ಇಂತಹ ಪರಿಸ್ಥಿತಿಯಲ್ಲಿ, ದೇಶೀಯ ವಲಯದಲ್ಲಿ ಅಕ್ಕಿ ಪೂರೈಕೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ.

ಮುಂದಿನ ದಿನಗಳಲ್ಲಿ ದೇಶದ ನಾಗರಿಕರು ಅಕ್ಕಿಯ ಕೊರತೆಯನ್ನು ಎದುರಿಸಬಾರದು ಎಂದು ಭಾರತ ಸರ್ಕಾರವು ಅದರ ಪೂರೈಕೆಯನ್ನು ಹೆಚ್ಚಿಸಲು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸರ್ಕಾರವು ಭತ್ತದ ರೂಪದಲ್ಲಿ ಅಕ್ಕಿ ಮತ್ತು ಕಂದು ಅಕ್ಕಿಯ ಮೇಲೆ ಸುಮಾರು 20 ಪ್ರತಿಶತದಷ್ಟು ರಫ್ತು ಸುಂಕವನ್ನು ವಿಧಿಸಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್‌: 7 ನೇ ವೇತನ ಆಯೋಗ ರಚಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ

ದೇಶದಲ್ಲಿ ಅಕ್ಕಿಯ ಕೊರತೆ ಏಕೆ?

ಸಿಕ್ಕಿರುವ ಮಾಹಿತಿ ಪ್ರಕಾರ ಈ ವರ್ಷ ದೇಶದ ಹಲವು ರಾಜ್ಯಗಳಲ್ಲಿ ಉತ್ತಮ ಮಳೆಯಾಗದ ಕಾರಣ ರೈತರು ಭತ್ತ ಬಿತ್ತನೆಯನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಈ ಬಾರಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ನಿಮಗೆ ತಿಳಿದಿರುವಂತೆ, ಚೀನಾದ ನಂತರ, ಭಾರತವು ಅತಿ ಹೆಚ್ಚು ಅಕ್ಕಿ ಉತ್ಪಾದಕ ಎಂದು ಹೇಳಲಾಗುತ್ತದೆ. ಜಾಗತಿಕವಾಗಿ ಅಕ್ಕಿಯಲ್ಲಿ ಭಾರತದ ಪಾಲು ಶೇಕಡಾ 40 ರಷ್ಟಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 2021-22ರಲ್ಲಿ ದೇಶದಲ್ಲಿ ಅಕ್ಕಿ ರಫ್ತು 21.2 ಮಿಲಿಯನ್ ಟನ್‌ಗಳಷ್ಟಿತ್ತು.