News

ಗುಡ್‌ನ್ಯೂಸ್‌: ರೈತರ ಬೆಳೆಹಾನಿಗೆ ಹೆಚ್ಚುವರಿ ದರ ನೀಡಲು ಬೊಮ್ಮಾಯಿ ಸರ್ಕಾರ ನಿರ್ಧಾರ! ಎಷ್ಟು ಗೊತ್ತೆ?

16 July, 2022 3:47 PM IST By: Kalmesh T
Bommai government's decision to give additional rate to farmers' crops!

2022 ನೇ ಸಾಲಿನಲ್ಲಿ ಪ್ರವಾಹ/ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿಗೆ, ಕೇಂದ್ರ ಸರ್ಕಾರದ SDRF/NDRF ಮಾರ್ಗಸೂಚಿ ನಿಗದಿಪಡಿಸಿದಕ್ಕಿಂತ ಹೆಚ್ಚುವರಿ ದರವನ್ನು ರೈತರಿಗೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿರಿ: ರೈತರಿಗೆ ಬಂಪರ್‌ ಸುದ್ದಿ: ಕೇಂದ್ರ ಕೃಷಿ ಸಚಿವರಿಂದ 30,000 ಕೋಟಿ ಕೃಷಿ ಸಾಲ ವಿತರಣೆಗೆ ಗುರಿ! ಯಾರು ಅರ್ಹರು ಗೊತ್ತೆ?

ಬೆಳೆ ಹಾನಿಗೆ ರಾಜ್ಯ ಸರ್ಕಾರ (Government of Karnataka) ಹೆಚ್ಚುವರಿಯಾಗಿ ಘೋಷಿಸಿದ್ದ ಪರಿಹಾರ ಬಿಡುಗಡೆಯಾಗಿದ್ದು, ಅರ್ಹ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾವಣೆ ಪ್ರಕ್ರಿಯೆ ಬಾಕಿ ಇದೆ.

ಬೆಳೆ ಹಾನಿಗೆ (Crop Loss) ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(NDRF)ಯಡಿ ಪಾವತಿಸುತ್ತಿದ್ದ ಹಣ ಕಡಿಮೆಯಾಯಿತು ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದರು.

ಬೆಳೆ ಹಾನಿ ಪರಿಹಾರ ಪಡೆಯಲು ಪಹಣಿ, ಆಧಾರ್‌ ಕಾರ್ಡ್‌ ಮತ್ತಿತರ ದಾಖಲೆಗಳನ್ನು ನೀಡಿದ್ದ ರೈತರು, ಹಂತ ಹಂತವಾಗಿ ಪರಿಹಾರ ಹಣ ಬಿಡುಗಡೆ ಆಗುತ್ತಿರುವುದರಿಂದ ಅರ್ಜಿ ತಿರಸ್ಕಾರವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ಗೋಜಿಗೇ ಹೋಗುತ್ತಿಲ್ಲ.

World Snake Day: “ವಿಶ್ವ ಹಾವುಗಳ ದಿನ”ದ ಕುರಿತು ನಾಗರಾಜ್ ಬೆಳ್ಳೂರು ಅವರು ಬರೆದ ಕುತೂಹಲಕಾರಿ ಲೇಖನ!

Bommai government's decision to give additional rate to farmers' crops!

ಆದರೆ ಗ್ರಾಮ ಲೆಕ್ಕಿಗರು ಅಥವಾ ಗ್ರಾಮ ಸಹಾಯಕರಾದರೂ, ಇಂತಹವರ ಅರ್ಜಿಗಳು ಈ ಕಾರಣಕ್ಕೆ ತಿರಸ್ಕೃತವಾಗಿವೆ, ಪರಿಹರಿಸಿಕೊಳ್ಳಿ ಎಂದು ಹೇಳದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿವೆ ಎಂದು ರೈತ ನಾಯಕರು ಆರೋಪಿಸಿದ್ದರು.

ಬೆಳೆ ವಿಧ – ಮಳೆಯಾಶ್ರಿತ

  • SDRF/NDRF ಮಾರ್ಗಸೂಚಿ ದರ : ರೂ.6800
  • ಹೆಚ್ಚುವರಿ ದರ: 6800   
  • ಪರಿಷ್ಕೃತ ದರ : 13600

ಗ್ರಾಹಕರೆ ಗಮನಿಸಿ: ಜುಲೈ 18ರಿಂದ ಮತ್ತೇ ಹೆಚ್ಚಾಗಲಿವೆ ದಿನಬಳಕೆ ಸಾಮಗ್ರಿ ಬೆಲೆಗಳು! ಹೊಸ GST ನಿಯಮ ಏನು ಹೇಳುತ್ತದೆ?

ಬೆಳೆ ವಿಧ – ನೀರಾವರಿ

  • SDRF/NDRF ಮಾರ್ಗಸೂಚಿ ದರ: ರೂ. 13,500
  • ಹೆಚ್ಚುವರಿ ದರ: 11500  
  • ಪರಿಷ್ಕೃತ ದರ:  25,000

Agriculture park: ಭಾರತದಲ್ಲಿ ಬರೋಬ್ಬರಿ 2 ಬಿಲಿಯನ್‌ ಡಾಲರ್‌ ಕೃಷಿ ಪಾರ್ಕ್ ಘೋಷಣೆ? ಏನೇನಿರಲಿದೆ ಗೊತ್ತೆ?

ಬೆಳೆ ವಿಧ – ಬಹುವಾರ್ಷಿಕ

  • SDRF/NDRF ಮಾರ್ಗಸೂಚಿ ದರ: 18000  
  • ಹೆಚ್ಚುವರಿ ದರ : 10,000
  • ಪರಿಷ್ಕೃತ ದರ  28,000

(ಮೇಲ್ಕಂಡ ದರಗಳು ಪ್ರತಿ ಹೆಕ್ಟೇರ್‌ಗೆ)