News

ಸರ್ಕಾರಿ ನೌಕರರಿಂದ ಬೈಕ್ Rally : ಬುಲೆಟ್  ಓಡಿಸಿ ಮತದಾರರಲ್ಲಿ ಜಾಗೃತಿ ಮೂಡಿಸಿದ ಡಿ.ಸಿ.

06 April, 2023 2:55 PM IST By: Maltesh
Bike Rally by Government Employees in kalburgi

ಕಲಬುರಗಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಅಂಗವಾಗಿ ಸೋಮವಾರ ಕಲಬುರಗಿ‌ ನಗರದ, ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಗಂಜ್ ಪ್ರದೇಶದ ನಗರೇಶ್ವರ ಶಾಲೆ ವರೆಗೆ ಆಯೋಜಿಸಿದ ಬೈಕ್ Rally ನಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಬುಲೆಟ್ ಓಡಿಸುವ ಮೂಲಕ ಗಮನ ಸೆಳೆದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ ಹಾಗೂ ರಾಜ್ಯ ಸರ್ಕಾರಿ ನೌಕರರ‌ ಸಂಘದ ಜಿಲ್ಲಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಸಂಜೆ ಕಲಬುರಗಿ ನಗರದಲ್ಲಿ ಬೈಕ್  Rally ಆಯೋಜಿಸಲಾಗಿತ್ತು.

Rallyಗೆ ಚಾಲನೆ ನೀಡಿದ ನಂತರ ಯಶವಂತ‌ ವಿ. ಗುರುಕರ್ ಅವರು ಬುಲೆಟ್ ಹತ್ತಿದಲ್ಲದೆ ಹಿಂಬದಿ ಜಿ.ಪಂ. ಸಿ.ಇ.ಓ ಮತ್ತು ಸ್ವೀಪ್‌ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಡಿ. ಬದೋಲೆ ಅವರನ್ನು ಕೂರಿಸಿಕೊಂಡು ರೈಡ್ ಗೆ ಇಳಿದರು.

ಮಿಸ್‌ ಮಾಡ್ದೇ ನೋಡಿ: ಪ್ಲಾಸ್ಟಿಕ್ ತಂದುಕೊಟ್ಟವ್ರಿಗೆ ಬಂಗಾರ ಕೊಟ್ಟು ಗ್ರಾಮದ ಚಿತ್ರಣವನ್ನೆ ಬದಲಾಯಿಸಿದ ಸರಪಂಚ!

ಎಸ್.ಪಿ. ಇಶಾ ಪಂತ್ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅವರು ಸ್ಕೂಟಿ ಓಡಿಸುವ ಮೂಲಕ ಡಿ.ಸಿ.ಗೆ ಸಾಥ್ ನೀಡಿದರು. Rallyಯು ಗಂಜ್ ಪ್ರದೇಶದ ನಗರೇಶ್ವರ ಶಾಲೆ ವರೆಗೆ ಸಾಗಿ ಮರಳಿ ಜಗತ್ ವೃತ್ತಕ್ಕೆ ಬಂದು ಸಂಪನ್ನಗೊಂಡಿತ್ತು.

*ನಗರದಲ್ಲಿ ಮತದಾನ‌ ಕಡಿಮೆ, ಓಟ್ ಮಾಡುವಂತೆ ಡಿ.ಸಿ. ಮನವಿ*

ಜಗತ್ ವೃತ್ತದಲ್ಲಿ ನೌಕರರಿಗೆ ಮತದಾನ ಪ್ರತಿಜ್ಞೆ ಬೋಧಿಸಿದ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು, ಕಲಬುರಗಿ ನಗರದಲ್ಲಿ ಮತದಾನ ಪ್ರಮಾಣ ಶೇ.49 ಇದ್ದು, ಇಬ್ಬರಲ್ಲಿ ಒಬ್ಬರು ಮಾತ್ರ ಮತದಾನ ಮಾಡುತ್ತಿದ್ದಾರೆ. ಸದೃಢ ಭಾರತಕ್ಕೆ ಸಂವಿಧಾನಬದ್ದ ಹಕ್ಕಾಗಿರುವ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ವಿಮೆ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ

ಜಿಲ್ಲಾ ಪಂಚಾಯತ್ ಸಿ‌.ಇ.ಓ ಡಾ.ಗಿರೀಶ್ ಡಿ. ಬದೋಲೆ‌ ಮಾತನಾಡಿ ಈ ಬಾರಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಶೇ.75ಕ್ಕಿಂತ ಹೆಚ್ಚಿಸುವ ಗುರಿ ಹೊಂದಿ ಸ್ವೀಪ್ ಚಟುವಟಿಕೆ ತೀವ್ರಗೊಳಿಸಿದೆ. ಮೇ 10 ರಂದು ನಡೆಯುವ ಮತದಾನ ದಿನದಂದು ನಗರ ವಾಸಿಗಳು ತಪ್ಪದೆ ಮತ ಚಲಾಯಿಸಬೇಕು. ಮುಂದೆ ತಾಲೂಕಾ ಹಂತದಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಜಂಟಿ ಕೃಷಿ ನಿರ್ದೇಶಕ ಸಮದ್‌ ಪಟೇಲ್.

ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ, ಡಿ.ಎಚ್.ಓ ಡಾ.ರಾಜಶೇಖರ ಮಾಲಿ, ‌ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆರ್.ಸಿ.ಹೆಚ್.ಓ ಡಾ.ಪ್ರಭುಲಿಂಗ‌ ಮಾನಕರ್,

ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸಿದ್ದಲಿಂಗಯ್ಯ ಮಠಪತಿ, ಸತೀಷ್ ಸಜ್ಜನ್,‌ಬಾಬು ಮೌರ್ಯ, ನಾಗೇಂದ್ರಪ್ಪ ಅವರಾದಿ,‌ ರವಿ ಮಿರಸ್ಕರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ನೌಕರರು, ಶಿಕ್ಷಕರು ಭಾಗವಹಿಸಿದ್ದರು. Rally ನಲ್ಲಿ ಭಾಗವಹಿಸಿದವರಿಗೆ ಟಿ.ಶರ್ಟ್, ಕ್ಯಾಪ್ ವಿತರಿಸಲಾಯಿತು.