News

ಬಜೆಟ್‌ನಲ್ಲಿ ಖಾದಿ ಉದ್ಯಮಕ್ಕೆ ಭರ್ಜರಿ ಕೊಡುಗೆ: ಬೊಮ್ಮಾಯಿ

27 January, 2023 12:51 PM IST By: Hitesh
basavaraj bommai

ರಾಜ್ಯ ಸರ್ಕಾರವು ಈ ಬಾರಿ ಮಂಡನೆ ಮಾಡಲಿರುವ ಬಜೆಟ್‌ಗೆ ಸಂಬಂಧಿಸಿದಂತೆ ಹಲವು ಚರ್ಚೆಗಳು ನಡೆದಿವೆ.

Aadhaar Card ಒಂದು ಆಧಾರ್‌ ಕಾರ್ಡ್‌ ಹಲವು ಉಪಯೋಗ: ಆಧಾರ್‌ ಕಾರ್ಡ್‌ ಇನ್ಮುಂದೆ ಇದಕ್ಕೂ ಬಳಸಬಹುದು!

ಚುನಾವಣೆಯೂ ಸಮೀಪದಲ್ಲೇ ಇರುವುದರಿಂದ ಈ ಬಾರಿ ಎಲ್ಲರನ್ನೂ ಮೆಚ್ಚಿಸುವ ಯಾವುದೇ ಹೊರೆ ಇಲ್ಲದಿರುವ ಬಜೆಟ್‌ ಮಂಡನೆ ಆಗುವ ಎಲ್ಲ ಸಾಧ್ಯತೆಗಳೂ ಇವೆ.

ಈ ನಡುವೆ ಮುಂದಿನ ಬಜೆಟ್‌ನಲ್ಲಿ ಖಾದಿ ಉದ್ಯಮಕ್ಕೆ ಬೂಸ್ಟ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಕಳೆದ ಆಗಸ್ಟ್‌ನ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪಾಲಿಸ್ಟಾರ್‌ನಿಂದ ಮಾಡಿದ ಧ್ವಜಕ್ಕೆ ಅನುಮತಿ ನೀಡಿದ ನಂತರದಲ್ಲಿ ಖಾದಿ ಧ್ವಜಕ್ಕೆ ಹೊಡೆತ ಬಿದ್ದಿತ್ತು. ಸ್ವಾಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ನಿರಾಸೆ ಮೂಡಿಸಿತ್ತು. ಇದೀಗ ಮುಂಬರುವ ರಾಜ್ಯ ಬಜೆಟ್‌ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ತಿಳಿಸಿದ್ದಾರೆ.  

ಪಾಕಿಸ್ತಾನದಲ್ಲಿ ಹಣ ದುಬ್ಬರ: ಆಹಾರಕ್ಕೆ ಸೃಷ್ಟಿ ಆಯ್ತು ಹಾಹಾಕಾರ!

ನಗರದಲ್ಲಿ ನಡೆದ ‘ಖಾದಿ ಉತ್ಸವ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ್ದು, ಭಾರತದಲ್ಲಿ ಕೃಷಿಯ ನಂತರ ಜವಳಿ ಕ್ಷೇತ್ರವು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗವನ್ನು ಕಲ್ಪಿಸುತ್ತಿದೆ. ಹೀಗಾಗಿ, ಖಾದಿ ಉದ್ಯಮದಲ್ಲಿ ಹೆಚ್ಚಿನ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಲು ಹೆಚ್ಚಿನ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ ಎಂದಿದ್ದಾರೆ.

ರಾಜ್ಯ ಬಜೆಟ್‌ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ ಆರ್ಥಿಕ ನೆರವು ಕಲ್ಪಿಸಲಾಗುವುದು. ಖಾದಿ ಮತ್ತು ಕೈಮಗ್ಗ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಾಂತ್ರಿಕವಾಗಿ ಕೆಲವು ನಿರ್ದಿಷ್ಟ ಸವಾಲುಗಳನ್ನು ಎದುರಿಸುತ್ತಿದ್ದು, ಆರ್ಥಿಕವಾಗಿಯೂ ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರವು ಎಲ್ಲ ವಿಧದಲ್ಲಿಯೂ ಇವರ ನೆರವಿಗೆ ಧಾವಿಸಲಿದೆ ಎಂದು ಅವರು ಹೇಳಿದ್ದಾರೆ.

ಖಾದಿಯನ್ನು ಅವಲಂಬಿಸಿರುವವರಿಗೆ ಎಲ್ಲಾ ಹಂತದಲ್ಲೂ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಶಿಕ್ಷಣ ನೀಡಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಇನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಜನರಿಗೆ ಶಿಕ್ಷಣ ನೀಡಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ಉತ್ಪಾದನಾ ವಲಯದಲ್ಲಿ ಮಹಿಳೆಯರಿಗೆ 5 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡುವ ಮೂಲಕ ಸಬಲೀಕರಣಗೊಳಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಕಾರ್ಮಿಕ ವರ್ಗದ ಜನತೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗುವುದು. ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆರ್ಥಿಕ ಬಲವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಕನ್ನಡಿಗರಿಗೆ ಸಿಹಿಸುದ್ದಿ: ಇನ್ಮುಂದೆ 11,400 ಕೇಂದ್ರ ಸರ್ಕಾರಿ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಬಹುದು!

ಖಾದಿ ಕ್ಷೇತ್ರಕ್ಕೆ ಮಹಾತ್ಮಗಾಂಧಿ ಅವರು ನೀಡಿದ ಕೊಡುಗೆಯನ್ನು ಬೊಮ್ಮಾಯಿ ಅವರು ಸ್ಮರಿಸಿದರು. ಗಾಂಧೀಜಿಯವರು ಖಾದಿಗೆ ಮಹತ್ವ ನೀಡಿದರು. ಖಾದಿ ಉದ್ಯಮವನ್ನು ದೊಡ್ಡ ಪ್ರಮಾಣದ ಉತ್ಪಾದನಾ ಘಟಕವನ್ನಾಗಿ ಬದಲಾವಣೆ ಮಾಡುವ ನಿಟ್ಟಿನಲ್ಲಿ, ಭಾರತದಲ್ಲಿ ಗರಿಷ್ಠ ಜನರಿಗೆ ಉದ್ಯೋಗವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಜನಸಾಮಾನ್ಯರಿಂದ ಉತ್ಪಾದನೆಯನ್ನು ಮುಂದುವರಿಸಬೇಕು.

ಇದಕ್ಕಾಗಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಉತ್ಸವವನ್ನು ಆಯೋಜಿಸಿದೆ ಸರ್ಕಾರವೂ ಸಹ ಎಲ್ಲ ಮಾದರಿಯಲ್ಲಿ ನೆರವು ನೀಡಲಿದೆ ಎಂದು ಅವರು ಹೇಳಿದ್ದಾರೆ. 

ರಾಜ್ಯದ ಪ್ರಮುಖ ನದಿ ನೀರು ನೇರ ಬಳಸದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ