ಒಂದೇ ವೇದಿಕೆಯಲ್ಲಿ ಯುವಕನೊಬ್ಬ ಇಬ್ಬರನ್ನು ಸಹೋದರಿಯನ್ನು ವರಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಈ ರೀತಿಯ ಮದುವೆ ನಡೆದಿದೆ. ಮುಂಬೈಯಲ್ಲಿ ಐಟಿ ವೃತ್ತಿಯಲ್ಲಿರುವ
ಅವಳಿ ಸಹೋದರಿಯರು ಒಂದೇ ಹುಡುಗನನ್ನು ವಿವಾಹವಾಗಿದ್ದಾರೆ.
ಮಲ್ಕಿರಸ್ ತಾಲ್ಲೂಕಿನ ಅಕ್ಲುಜ್ ಎಂಬ ಗ್ರಾಮದಲ್ಲಿ ಶುಕ್ರವಾರ ಈ ವಿವಾಹ ನಡೆದಿದ್ದು, ಸಾಮಾಜಿಕ
ಜಾಲತಾಣದಲ್ಲಿ ಈ ವಿವಾಹದ ವಿಡಿಯೊ ಹಾಗೂ ಪೋಟೊ ವೈರಲ್ ಆಗಿದೆ.
ಈ ಮದುವೆಗೆ ಯುವಕ ಮತ್ತು ಅವಳಿ ಸಹೋದರಿಯರ ಕುಟುಂಬವೂ ಒಪ್ಪಿಕೊಂಡಿದೆ.
7th Pay Commission ಏಳನೇ ವೇತನ ಆಯೋಗ ರಚನೆಗೆ ಜಾಗ ನಿಗದಿ ಮಾಡಿ ಆದೇಶ!
ಆದರೆ, ಒಂದೇ ವೇದಿಕೆಯಲ್ಲಿ ಇಬ್ಬರನ್ನು ವಿವಾಹವಾಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಈ ವಿವಾಹದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.
ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಮುಂಬೈನಲ್ಲಿ ಟೆಕ್ಕಿಗಳಾಗಿದ್ದು, ಚಿಕ್ಕಂದಿನಿಂದಲೂ ಒಂದೇ ಮನೆಯಲ್ಲಿ
ವಾಸಿಸುತ್ತಿದ್ದ ಕಾರಣ ಒಬ್ಬರನೊಬ್ಬರು ಬಿಟ್ಟು ಇರಲಾರರು ಎಂಬ ಕಾರಣಕ್ಕೆ ಸಹೋದರಿಯರು
ಅತುಲ್ ನನ್ನು ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
PMFBY | ಬೆಳೆ ಹಾನಿ: ರೈತರಿಗೆ ಫಸಲ್ ಭೀಮಾ ಯೋಜನೆಯಡಿ ₹1,25,662 ಕೋಟಿ ಪಾವತಿ! |Crop Insurance
ಆದರೆ, ಈ ಸಂಬಂಧ ವರ ಅತುಲ್ ವಿರುದ್ಧ ಐಸಿಪಿ ಸೆಕ್ಷನ್ 494 (ಗಂಡ ಅಥವಾ ಹೆಂಡತಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವು)
ಅಡಿಯಲ್ಲಿ ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.