ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಈ ಬಾರಿ ಇನ್ನಷ್ಟು ಮೆರಗು ಪಡೆದುಕೊಳ್ಳಲಿದೆ. ಈ ಬಾರಿ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆಯಲಿದೆ. ಇದರ ವಿಶೇಷತೆಗಳೇನು ಇಲ್ಲಿದೆ ವಿವರ….
ಭಾರತೀಯ ಮಾತೃ ಭಾಷೆಗಳ ಸಮೀಕ್ಷೆ ಪೂರ್ಣ, ಇದರ ಲಾಭವೇನು?
ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಈ ಬಾರಿ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲು ಸಿದ್ಧತೆ ನಡೆದಿದೆ. ಈ ಬಾರಿಯ ತೆಪ್ಪೋತ್ಸವವು ಅತ್ಯಂತ ವೈಭವದಿಂದ ನಡೆಯಲಿದೆ.
ದಶಕದ ಹಿಂದೆ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆದಿತ್ತು. ಇದೀಗ ಮತ್ತೆ ತೆಪ್ಪೋತ್ಸವ ಪ್ರಾರಂಭವಾಗಿದ್ದು, ಇದೀಗ ಕಡಲೆ ಪರಿಷೆಗೆ ಮೆರುಗು ಬಂದಂತಾಗಿದೆ.
ನೇಪಾಳದಲ್ಲಿ ಭೂಕಂಪನ: ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವ!
ಕಡೇ ಕಾರ್ತೀಕ ಸೋಮವಾರವಾದ ನವೆಂಬರ್ 21ಕ್ಕೆ ಕಡಲೆಕಾಯಿ ಪರಿಷೆ ನಡೆಯಲಿದ್ದು, ಪರಿಷೆಯಲ್ಲಿ ಸಾವಿರಾರು ಜನ ಭಾಗವಹಿಸುವ ಸಾಧ್ಯತೆ ಇದೆ.
ಅಲ್ಲದೇ ಬ್ಯೂಗಲ್‌ರಾಕ್‌ಮತ್ತು ನರಸಿಂಹಸ್ವಾಮಿ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಕ್ರಮಗಳೂ ಸೇರಿದಂತೆ ಹಲವು ವಿನೂತನ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಲಿವೆ.
ಈ ಬಾರಿ ಪರಿಷೆಯನ್ನು ಸೋಮವಾರದ ಬದಲಿಗೆ ಭಾನುವಾರ ಸಂಜೆಯೇ ಉದ್ಘಾಟನೆ ಮಾಡಲಾಗುವುದು.
ಸೋಮವಾರ ದೇವಾಲಯಕ್ಕೆ ಸಾಕಷ್ಟು ಮಂದಿ ಬರುವುದರಿಂದ ಸಮಸ್ಯೆ ಆಗದಂತೆ ಆಯೋಜಿಸುವ ಉದ್ದೇಶದಿಂದ ಒಂದು ದಿನ ಮುಂಚಿತವಾಗಿ ಪರಿಷೆ ಆಯೋಜಿಸಲಾಗುತ್ತಿದೆ.
ಆಧಾರ್ ಕಾರ್ಡ್‌ಗಾಗಿ 24 ವರ್ಷ ಬಿಟ್ಟು ಮನೆಗೆ ಬಂದ ವ್ಯಕ್ತಿ!
ಸೋಮವಾರ ಎಂದಿನಂತೆ ಸಾಂಪ್ರದಾಯಿಕವಾಗಿ ಸರಳವಾಗಿ ಪೂಜೆ ನಡೆಸಿ, ದೇವಸ್ಥಾನದಲ್ಲಿ ಜನಸಂದಣಿಯಾಗದಂತೆ ಸಾರ್ವಜನಿಕರಿಗೆ ದೇವರ ದರ್ಶನ ಮತ್ತು ಪರಿಷೆ ವೀಕ್ಷಣೆಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ತಿಳಿಸಿದ್ದಾರೆ.
ಕಡಲೆ ಪರಿಷೆ ಎಂದರೆ ಕೇವಲ ಕಡ್ಲೆಕಾಯಿ ಮಾರಾಟವಷ್ಟೇ ಅಲ್ಲ, ಒಂದು ಹಳ್ಳಿಯ ಚಿತ್ರಣವೇ ಈ ಬಾರಿ ಇರಲಿದೆ.
ನವೆಂಬರ್ 19ರಿಂದಲೇ (ಶನಿವಾರ) ಜನ ಪರಿಷೆಗೆ ಬರಲಿದ್ದಾರೆ. ಭಾನುವಾರ ಮತ್ತು ಸೋಮವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ಸಾಧ್ಯತೆ ಇದೆ.
ಕರಾವಳಿ ಬಿಪಿಎಲ್ ಕಾರ್ಡ್‌ದಾರರಿಗೆ ಸಿಹಿಸುದ್ದಿ: ಇನ್ಮುಂದೆ ಸಿಗಲಿದೆ ಕುಚಲಕ್ಕಿ!
ಪರಿಷೆ ಆರಂಭಕ್ಕೂ ನಾಲ್ಕು ದಿನ ಮೊದಲು ಮತ್ತು ನಂತರ ನಾಲ್ಕು ದಿನ ಮಳಿಗೆಗಳು ತೆರೆದಿರುವುದಲ್ಲದೆ ಖರೀದಿಯೂ ನಡೆಯುತ್ತದೆ. ಹೀಗಾಗಿ, ಒಟ್ಟಾರೆ ಕಡಲೆಕಾಯಿ ಪರಿಷೆಯಲ್ಲಿ ಸುಮಾರು 6 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪರಿಷೆ ಮತ್ತು ತೆಪ್ಪೋತ್ಸವಕ್ಕೆ ಮುಜರಾಯಿ ಇಲಾಖೆ ಮತ್ತು ಬಿಬಿಎಂಪಿ ತಮ್ಮ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಲಿವೆ.
ಪ್ರಸಕ್ತ ಸಾಲಿನಲ್ಲಿ ರಾಮನಗರ, ಕನಕಪುರ, ಮಾಗಡಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಕಡ್ಲೆಕಾಯಿ ಬೆಳೆಯುವ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಕಡಲೆ ಬೆಳೆಯು ಪ್ರಮಾಣವೂ ಹೆಚ್ಚಾಗಿದ್ದು, ವಿಭಿನ್ನ ಮಾದರಿಯ ತಳಿಗಳು ಬರುವ ಸಾಧ್ಯತೆ ಇದೆ.
ಅಡಿಕೆ ಚುಕ್ಕೆರೋಗ ತಡೆಗೆ 10 ಕೋಟಿ ರೂ. ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕಡಲೆ ಪರಿಷೆಯ ಹಿನ್ನೆಲೆ ಏನು ಗೊತ್ತೆ ?
ದಶಕಗಳ ಹಿಂದೆ ಬೆಂಗಳೂರು ಸಹ ಇಷ್ಟು ಪ್ರಮಾಣದಲ್ಲಿ ಬೃಹತ್ ಆಗಿ ಬೆಳೆದಿರಲಿಲ್ಲ. ಸಣ್ಣ ಊರಾಗಿತ್ತು. ಈಗ ಬೆಳೆದು ದೊಡ್ಡ ಊರಾಗಿ ಬದಲಾಗಿದೆ.
ಬೆಂಗಳೂರು ಗಾತ್ರದಲ್ಲಿ ಬೆಳೆದು ಮಹಾ ನಗರವಾಗುವ ಮೊದಲು, ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ (ಶೇಂಗಾ) ಬೆಳೆಯುತ್ತಿದ್ದರು.
ಈ ಬೆಳೆ ಕಟಾವಿಗೆ ಬರುವ ಸಂದರ್ಭದಲ್ಲಿ ಕಟಾವಿಗೆ ಸಿದ್ಧವಾದ ನೆಲಗಡಲೆಯನ್ನೆಲ್ಲ ಗದ್ದೆಗೆ ದಾಳಿ ಇಡುತ್ತಿದ್ದ ಬಸವವೊಂದು ನಾಶಪಡಿಸುತ್ತಿತ್ತು.
ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಬಸವ (ನಂದಿ)ನನ್ನು ಪ್ರಾರ್ಥಿಸಲು ಆರಂಭಿಸಿದರು.
ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು ಮತ್ತು ಈ ಸ್ಥಳದಲ್ಲಿ ಕೆಂಪೇಗೌಡರು 16 ನೇಶತಮಾನದಲ್ಲಿ ನಂದಿಯ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು.
ಇದನ್ನು ಬಸವನ ಗುಡಿ ಅಥವಾ ಬಿಗ್‌ಬುಲ್ ಟೆಂಪಲ್ ಎಂದು ಕರೆಯಲಾಗುತ್ತದೆ. ಕಡಲೆ ಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ.
ಬಸವ ರೈತರು ಅರ್ಪಿಸಿದ ನೆಲಗಡಲೆಯನ್ನು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂಬದು ಪ್ರತಿಯಾಗಿದ್ದು, ಹಲವು ವರ್ಷಗಳಿಂದ ಇದೇ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ.
ಸಂಭ್ರಮ, ಹಬ್ಬದ ವಾತಾವರಣ
ಬೆಂಗಳೂರು ಈಗ ಬೃಹತ್ ನಗರವಾಗಿ ಬದಲಾಗಿದೆ. ಮೊದಲಿನಂತೆ ಹಳ್ಳಿಯ ವಾತಾವರಣ ತೆರೆದುಕೊಳ್ಳುವುದು ಕಡಿಮೆ.
ಆದರೆ, ಕಡಲೆ ಪರಿಷೆಯ ಸಮಯದಲ್ಲಿ ಗ್ರಾಹಕರು ನೆಲಗಡಲೆಗಳನ್ನು ರೈತರಿಂದ ನೇರವಾಗಿ ಮಾರುಕಟ್ಟೆ ದರಕ್ಕಿಂತ ಅಗ್ಗವಾಗಿ ಖರೀದಿಸುತ್ತಾರೆ.
ಕಡಲೆಕಾಯಿ ಪರಿಷೆಯ ಸಂದರ್ಭದಲ್ಲಿ ಬಸವನ ಗುಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನಡೆಯುತ್ತದೆ.
ಅಲಂಕೃತ ಬೀದಿಗಳಲ್ಲಿ ಸಾಕಷ್ಟು ಶಾಪಿಂಗ್ ಆಯ್ಕೆಗಳು, ಆಹಾರ ಮಳಿಗೆಗಳು, ಆಟಗಳು ಮತ್ತು ಮಕ್ಕಳಿಗೆ ಆಟಿಕೆಗಳು ಇರುತ್ತವೆ.
ಬಸವನಗುಡಿ ಮತ್ತು ಸುತ್ತಮುತ್ತಲಿನ ಜನರು ಕಡಲೆಕಾಯಿ ಪರಿಷೆಯನ್ನು ಕಾತರದಿಂದ ಎದುರು ನೋಡುತ್ತಾರೆ ಮತ್ತು ಸಂಭ್ರಮಾಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಈಗಲೂ ಜನ ನಂಬಿಕೆಯಿಂದ ಬಸವನಿಗೆ ಕೈ ಮುಗಿಯುತ್ತಾರೆ. ಇದು ಸದ್ಯ ಯುವಕರಿಗೆ ಮತ್ತು ಹೊಸ ಪೀಳಿಗೆಗೆ ಹಳೆಯ ಸಂಪ್ರದಾಯವನ್ನು ತಿಳಿಸುವ ಉತ್ಸವವಾಗಿಯೂ ಉಳಿದುಕೊಂಡಿದೆ.