News

#Sugarcane farmers: ಕಬ್ಬು ಬೆಳೆಗಾರ ರೈತರಿಂದ ಬಾರ್‌ಕೋಲ್‌ ಚಳುವಳಿ; ಸರ್ಕಾರಕ್ಕೆ 4 ದಿನಗಳ ಗಡುವು!

28 November, 2022 5:05 PM IST By: Kalmesh T
Barcoal movement by sugarcane farmers; 4 days deadline for the government!

ರಾಜ್ಯ ಕಬ್ಬು ಬೆಳೆಗಾರರ ಸಂಘ,ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಕಬ್ಬು ಬೆಳೆಗಾರ ರೈತರು ಫ್ರೀಡಂ ಪಾರ್ಕಲ್ಲಿ ನಡೆಸುತ್ತಿರುವ ಆಹೋ ರಾತ್ರಿ ಧರಣಿ 7ನೇ ದಿನಕ್ಕೆ ಮುಂದುವರೆದಿದೆ.

Pradhan Mantri Jan-Dhan Yojana | ಖಾತೆದಾರರಿಗೆ ಸರ್ಕಾರದಿಂದ 10,000 ರೂಪಾಯಿ! 

ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಕಬ್ಬು ಬೆಳೆಗಾರ ರೈತರು ಫ್ರೀಡಂ ಪಾರ್ಕಲ್ಲಿ ನಡೆಸುತ್ತಿರುವ ಆಹೋ ರಾತ್ರಿ ಧರಣಿ 7ನೇ ದಿನಕ್ಕೆ ಮುಂದುವರೆದಿದೆ.

ಇಂದು ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ನೂರಾರು ರೈತ ಮಹಿಳೆಯರು ಧರಣಿಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಂತರ ತಲೆಗೆ ಹಸಿರು ಟವಲ್ ಸುತ್ತಿ ಕೈಯಲ್ಲಿ ಬಾರ್ ಕೋಲ್ ಹಿಡಿದು ಬೀಸುವ ಮೂಲಕ ಬಾರ್‌ಕೂಲ್  ಚಳುವಳಿ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿರಿ: ಬಂಗಾರ-ಬೆಳ್ಳಿ ಪ್ರಿಯರಿಗೆ ಸಮಾಧಾನದ ಸುದ್ದಿ; ತಿಂಗಳಾಂತ್ಯಕ್ಕೆ ದೇಶಾದ್ಯಂತ ಬೆಲೆ ಇಳಿಕೆ

ರೈತ ಸಂಘಟನೆ ರಾಜ್ಯ ಮಹಿಳಾ ಅಧ್ಯಕ್ಷೆ ಜಿ.ವಿ. ಲಕ್ಷ್ಮಿ ದೇವಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತನನ್ನು ಏಳು ದಿನಗಳಿಂದ ರಸ್ತೆಯಲ್ಲಿ ಮಲಗಿಸಿರುವ ಸರ್ಕಾರಕ್ಕೆ ರೈತರ ಕಷ್ಟಕ್ಕಿಂತ ಸಕ್ಕರೆ ಕಾರ್ಖಾನೆ ಮಾಲೀಕರ ಹಿತವೇ ಮುಖ್ಯವಾಗಿದೆ.

ರೈತ ಮಹಿಳೆಯರು ಕಿತ್ತೂರ್ ರಾಣಿ ಚೆನ್ನಮ್ಮನ ಅವತಾರ ತಾಳುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು, ಕಬ್ಬುದರ ಏರಿಕೆ ಮಾಡಲಿ ಎಂದು ಒತ್ತಾಯಿಸಿದರು.

Hindi Imposition: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ವೃದ್ಧ ರೈತ ಆತ್ಮಹತ್ಯೆ!

ರೈತ ಮಹಿಳೆ  ಮಾತನಾಡಿ, ಸರ್ಕಾರ ಪದೇ ಪದೇ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ಮಾಡುವ ನಾಟಕವಾಡದೆ, ಸರ್ಕಾರದ ಕಾನೂನಿನಂತೆ ಕಬ್ಬು ದರ ಏರಿಕೆ ಮಾಡುವ ನಿರ್ಧಾರ ಕೈಗೊಂಡು ಸರ್ಕಾರದ ತಾಕತ್ತು ತೋರಿಸಲಿ ಎಂದರು.

ಇಂದಿನ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಮಹಿಳಾ ಘಟಕದ ರೂಪ, ಚಂದ್ರಮಾ, ವೀರನಗೌಡ ಪಾಟೀಲ್ ಶಿವನಗೌಡ,ದರೆಪ್ಪಗೌಡ, ರಮೇಶ್ ಹೂಗಾರ್, ದೇವಕುಮಾರ, ಮಹಾಂತೇಶ್ ಮುಂತಾದವರು ಇದ್ದರು