News

ಏಪ್ರಿಲ್ 14ರಿಂದ 17ರವರೆಗೆ ಬ್ಯಾಂಕ್ ರಜೆ! ಈಗಲೇ ಮುಗಿಸಿಕೊಳ್ಳಿ ನಿಮ್ಮ ಕೆಲಸ

11 April, 2022 3:13 PM IST By: Kalmesh T
Bank Holiday from April 14th to 17th! It's your job to finish it now

ಗ್ರಾಹಕರೇ ಗಮನಿಸಿ! ಬ್ಯಾಂಕ್‌ಗೆ ಸಂಬಂಧಿಸಿದ ಏನಾದರೂ ತುರ್ತು ಕೆಲಸಗಳಿದ್ದರೇ ಈಗಲೇ ಮುಗಿಸಿಕೊಳ್ಳಿ. ಏಕೆಂದೆರೆ ಏಪ್ರಿಲ್‌ನಲ್ಲಿ 4 ದಿನ ಬ್ಯಾಂಕ್‌ಗೆ ರಜೆ ಇರಲಿದೆ.

ಏಪ್ರಿಲ್ 14ರಿಂದ ಏಪ್ರಿಲ್ 17ರ ತನಕ ಒಟ್ಟು 4 ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿದೆ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India)  ಪ್ರತಿ ತಿಂಗಳು ಬ್ಯಾಂಕುಗಳಿಗೆ ಸಂಬಂಧಿಸಿ ರಜಾಪಟ್ಟಿ (Holiday List) ಬಿಡುಗಡೆ ಮಾಡುತ್ತದೆ. ಆದರೆ ಈ ರಜಾಪಟ್ಟಿಯಲ್ಲಿರೋ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ (States) ಅನ್ವಯಿಸೋದಿಲ್ಲ. ಆಯಾ ರಾಜ್ಯಕ್ಕೆ ಸಂಬಂಧಿಸಿದ ಹಬ್ಬ (Festival) ಹಾಗೂ ಆಚರಣೆಗಳ (Celebratons) ಹಿನ್ನೆಲೆಯಲ್ಲಿ ರಜೆಗಳನ್ನು ನಿಗದಿಪಡಿಸಲಾಗುತ್ತದೆ.  ಹೀಗಾಗಿ ಆಯಾ ರಾಜ್ಯಕ್ಕೆ ಸಂಬಂಧಿಸಿದ ರಜೆಗಳನ್ನು (Holidays) ಮಾತ್ರ ಪರಿಗಣಿಸಬೇಕಾಗುತ್ತದೆ.

ಇದನ್ನು ಓದಿರಿ:

CAI: ಹತ್ತಿ ಉತ್ಪಾದನೆಯ ಅಂದಾಜು 2.33 % ರಷ್ಟು ಕಡಿತ

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

ಸಾರ್ವಜನಿಕ (Public) ಹಾಗೂ ಗೆಜೆಟೆಡ್ ರಜೆಗಳು (Gazetted holidays) ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಆದಕಾರಣ ಈ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್ ಕಾರ್ಯ ನಿರ್ವಹಿಸೋದಿಲ್ಲ ಎಂಬ ಮಾಹಿತಿಯನ್ನು ನೀವು ಹೊಂದಿರೋದು ಅಗತ್ಯ. ಇಲ್ಲವಾದರೆ ರಜಾದಿನಗಳಂದು ಬ್ಯಾಂಕಿಗೆ ಭೇಟಿ ನೀಡೋ ಮೂಲಕ ತೊಂದರೆಗೊಳಗಾಗುತ್ತೀರಿ. 

4 ದಿನ ರಜೆ ಏಕೆ?

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಸೌರಮಾನ ಯುಗಾದಿ, ಬೈಸಾಶಿ, ವೈಸಾಖಿ ವಿಷು, ಗುಡ್ ಫ್ರೈಡೇ ಮುಂತಾದ ಹಬ್ಬಗಳ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ಏಪ್ರಿಲ್ 14ರಿಂದ ಏಪ್ರಿಲ್ 17ರ ತನಕ ರಜೆಯಿದೆ.

EPFO ಹೊಸ ಮಾರ್ಗಸೂಚಿ ರಿಲೀಸ್.. ಇಲ್ಲಿದೆ ಟ್ಯಾಕ್ಸ್ ಲೆಕ್ಕಾಚಾರ

ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !

ಗ್ರಾಹಕರಿಗೆ ತೊಂದರೆ

ಬ್ಯಾಂಕುಗಳಿಗೆ ಈ ರೀತಿ ನಿರಂತರ ರಜೆಗಳು ಬರೋದ್ರಿಂದ ಗ್ರಾಹಕರು (Customers) ಸಾಕಷ್ಟು ಸಮಸ್ಯೆಗಳನ್ನು (Problems) ಎದುರಿಸಬೇಕಾಗುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ (Internet banking) ಹಾಗೂ ಎಟಿಎಂ (ATM) ಸೇವೆಗಳಲ್ಲಿ (Services) ಯಾವುದೇ ವ್ಯತ್ಯಯವಾಗದಿದ್ದರೂ ಕೆಲವೊಂದು ಕೆಲಸಗಳನ್ನು ಬ್ಯಾಂಕಿಗೆ ಹೋಗಿ ಮಾಡಬೇಕಾದ ಅಗತ್ಯವಿರುತ್ತದೆ. ಅಂಥ ಕೆಲಸಗಳಿಗೆ ತೊಂದರೆಯಾಗುತ್ತದೆ.

ಅಲ್ಲದೆ, ಗ್ರಾಮೀಣ ಭಾಗದ ಜನರು ಇಂಟರ್ನೆಟ್ ಸೇವೆಗಳನ್ನು ಬಳಸೋದು ಕಡಿಮೆ. ಅವರು ಪ್ರತಿ ಕೆಲಸವನ್ನು ಬ್ಯಾಂಕಿಗೆ ತೆರಳಿಯೇ ಮಾಡುತ್ತಾರೆ. ಅಂಥವರು ಕೂಡ ಈ ರೀತಿ ಸಾಲು ರಜೆಗಳ ಕಾರಣಕ್ಕೆ ತೊಂದರೆಗೊಳಗಾಗುತ್ತಾರೆ. ಆದರೆ ಕರ್ನಾಟಕದಲ್ಲಿ ಗುರುವಾರ, ಶುಕ್ರವಾರ ಮಾತ್ರ ಬ್ಯಾಂಕುಗಳಿಗೆ ರಜೆಯಿರುತ್ತದೆ. ಶನಿವಾರ ರಜೆಯಿಲ್ಲ. ಭಾನುವಾರ ಮಾತ್ರ ಎಂದಿನಂತೆ ವಾರದ ರಜೆಯಿರುತ್ತದೆ. 

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

ಆರ್ ಬಿಐ (RBI) ರಜಾದಿನಗಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು.  ಏಪ್ರಿಲ್ ನಲ್ಲಿ ವಾರದ ಹಾಗೂ ಹಬ್ಬಗಳ ರಜೆಗಳನ್ನು ಸೇರಿಸಿದ್ರೆ ಒಟ್ಟು 15 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. 

Agriculture Income! ರೈತರೇ ನಿಮ್ಮ Income 10 ಲಕ್ಷ ಮೀರಿದರೆ? ಏನಾಗುತ್ತೆ?

Chicken And Fish: ಚಿಕನ್‌ & ಮೀನು ಯಾವುದು ಬೆಸ್ಟ್‌..!