News

ಬೆಂಗಳೂರು ಕೃಷಿವಿವಿ “ಮೇಳ”: ಪ್ರೋಮೊ ಬಿಡುಗಡೆ

28 October, 2022 12:32 PM IST By: Hitesh
Bangalore Agricultural University

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ನಡೆಯಲಿರುವ ಮೇಳದ ಪ್ರೋಮೊದಲ್ಲಿ ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ.

ಚಳಿಗಾಲದಲ್ಲಿ ಈ 10 ಆಹಾರ ಪದಾರ್ಥದೊಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ!  

Gkvk ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ)ಯಲ್ಲಿ ನವೆಂಬರ್‌ 3ರಿಂದ ನವೆಂಬರ್‌ 6ರ ವರೆಗೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ ನಡೆಯಲಿದೆ.

ಮೇಳದ ಹಿನ್ನೆಲೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರೋಮೊ ಬಿಡುಗಡೆ ಮಾಡಿದೆ.

ಕೇಂದ್ರದಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳದ ಪ್ರೋಮೊ ಬಿಡುಗಡೆಯಾಗಿದ್ದು, ಚಲನಚಿತ್ರ ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಹರ್ಷಿಕಾ ಪೂಣಚ್ಚ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿರಿ: ಅಕ್ಟೋಬರ್‌ 29,30ಕ್ಕೆ ಬೆಂಗಳೂರಿನಲ್ಲಿ ಕಾಫಿ ಸಂತೆ, ವಿಶೇಷತೆಗಳೇನು ಗೊತ್ತೆ ?  

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ. ನಾರಾಯಣಸ್ವಾಮಿ ಅವರು ಪ್ರೋಮೊ ಬಿಡುಗಡೆ ಮಾಡಿದ್ದಾರೆ.

ಮೇಳದ ಪ್ರೋಮೊ ಒಟ್ಟು 1.11 ನಿಮಿಷವಿದ್ದು, ಪ್ರೋಮೊದಲ್ಲಿ ಮೇಳಕ್ಕೆ ಆಹ್ವಾನ ನೀಡಲಾಗಿದೆ.

 ರಾಜ್ಯದಲ್ಲಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ!  

ಕೃಷಿ ಮತ್ತು ಕೃಷಿಕರ ಬಗ್ಗೆ ವಿಜಯ್ ರಾಘವೇಂದ್ರ ಹಾಗೂ ಹರ್ಷಿಕಾ ಪೂಣಚ್ಚ ಅವರು ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಮನವಿಯಿಂದಾಗಿ ಈ ಬಾರಿ ಕೃಷಿ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಡಾ.ಕೆ.ಸಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.