News

ಬಾಳೆ ಬೆಳೆದು ಶೈನ್ (Shine) ಆದ ಸೋಮಶೇಖರ

17 July, 2020 9:06 AM IST By:

ಮೈಸೂರಿನ ಖಾಸಗಿ ಕಾರ್ಖಾನೆಯಲ್ಲಿ ಕೈತುಂಬಾ ಸಂಬಳ ಪಡೆದು ನೆಮ್ಮದಿಯಾಗಿ ಜೀವನ ನಡೆಸುತ್ತಿದಾಗ ಏಕಾಏಕಿ ಫ್ಯಾಕ್ಟರಿಗೆ (Factory) ಬೀಗ ಬಿತ್ತು. ಇದರಿಂದಾಗಿ ಹಲವಾರು ಜನ ನೌಕರಿ ಕಳೆದುಕೊಂಡರು. ನಿರಾಶೆಗೊಂಡ ಕೆಲವರು ಬೇರೆ ನಗರಗಳಿಗೆ ವಲಸೆಹೋದರು, ಇನ್ನೂ ಕೆಲವರು ಸಣ್ಣಪುಟ್ಟ ವ್ಯಾಪಾರದಲ್ಲಿ ತೊಡಗಿದರು. ಆದರೆ ಮೈಸೂರು ತಾಲೂಕಿನ ತಳ್ಳೂರು ಗ್ರಾಮದ ಸೋಮಶೇಖರ (Somashekar) ಹಾಗೆ ಮಾಡಲಿಲ್ಲ. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಧೈರ್ಯಗೆಡದೆ ಊರಿಗೆ ಬಂದು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂಪರ್‌ ಬಾಳೆ (Banana) ಬೆಳೆದು ಎಲ್ಲರೂ ಹುಬ್ಬೇರಿಸುವಂತಹ ಸಾಧನೆ ಮಾಡಿ ತೋರಿಸಿದರು.

ಆರಂಭದಲ್ಲಿ ಲೀಸ್ ಮೇಲೆ ಜಮೀನು ತೆಗೆದುಕೊಂಡು ಕೃಷಿ ಮಾಡುತ್ತಾರೆ. ಉತ್ತಮ ಇಳುವರಿ ಪಡೆಯುತ್ತಿರುವುದನ್ನು ನೋಡಿದ ಭೂ ಮಾಲಿಕರು ನಂತರ ಸೋಮಶೇಖರನಿಗೆ ಲೀಸ್ ಕೊಡುವುದನ್ನು ನಿಲ್ಲಿಸುತ್ತಾರೆ. ಆದರೂ ಸಹ ದೃತಿಗೆಡದ ಸೋಮಶೇಖರ ತನ್ನ ಸ್ವಂತ ಜಮೀನಿನಲ್ಲಿ ಮಿಶ್ರಬೆಳೆಯಲ್ಲಿ ಕೈಹಾಕಿ ಯಶಸ್ವಿಯಾಗುತ್ತಾರೆ.

ಬಾಳೆಯೊಂದಿಗೆ ಮಿಶ್ರಬೆಳೆ: (Multi crop)

 ಮೂರು ಎಕರೆ ಜಮೀನಿನಲ್ಲಿ ಬಾಳೆಯೊಂದಿಗೆ ಅರಣ್ಯ ಕೃಷಿ ಹಾಗೂ ಮಿಶ್ರ ಬೆಳೆಯಿಂದ 12 ಲಕ್ಷ ನಿವ್ವಳ ಲಾಭ ಪಡೆದು ಪ್ರಗತಿಪರ ರೈತರು ಇತ್ತ ಹಾಯುವಂತೆ ಮಾಡಿ ತೋರಿಸಿದ್ದಾರೆ. ಈಗ ಅವರು ಸುತ್ತಮುತ್ತಲಿನ ಗ್ರಾಮಸ್ಥರಿಗೆ ರೋಲ್ ಮಾಡಲ್. ಕೃಷಿ ಪದವಿ ವಿದ್ಯಾರ್ಥಿಗಳಿಗೂ ಸಂಪನ್ಮೂಲ ವ್ಯಕ್ತಿಗಳಾಗಿ ಹೆಸರುವಾಸಿಯಾಗಿದ್ದಾರೆ. ಇದ್ದ ಜಮೀನಿನಲ್ಲಿಯೇ ವಿಭಿನ್ನವಾಗಿ ವ್ಯವಸಾಯ ಮಾಡಿದರೆ ಕಂಪನಿಗಳಲ್ಲಿ ಸಿಗುವ ಸಂಬಳಕ್ಕಿಂತ ಹೆಚ್ಚು ಸ್ವಂತ ಹೊಲದಲ್ಲಿಯೇ ಪಡೆಯಬಹುದು ಎಂಬ ಮೂಲಮಂತ್ರ ಇವರದ್ದಾಗಿದೆ.

Read More: ಬಹುಬೆಳೆಯಲ್ಲಿ ಬದುಕು ಕಟ್ಟಿಕೊಂಡ ರಾಜೇಗೌಡ ಬಿದರಕಟ್ಟೆ

ಗಿಡಗಳಿಗೆ ಆಸರೆಯಾಗಿ ಅರಣ್ಯ ಕೃಷಿ: (Forest farming) ಮಳೆ, ಗಾಳಿಯಿಂದ ಬಾಳೆಗಿಡಗಳನ್ನು ಕಾಪಾಡಲು ತೋಟದ ಸುತ್ತಲೂ ಟೀಕ್, ತೆಂಗು, ಬೇವು ಸೇರಿದಂತೆ ವಿವಿಧ ಬಗೆಯ ಗಿಡಗಳನ್ನು ಬೆಳೆದು ಅರಣ್ಯ ಕೃಷಿಗೆ ಆದ್ಯತೆ ನೀಡಿದ್ದಾರೆ. ಬಾಳೆಯ ತೋಟದ ಸುತ್ತಲೂ ಆಸರೆಗೆಂದು ಮರಗಳನ್ನು ಬೆಳೆಸಿದ್ದಾರೆ. ಮರಗಳ ಟೊಂಗೆಗಳನ್ನು ಕಟಾವು ಮಾಡಿ ಮಾರುದ್ದ ಬೆಳೆದಿರುವ ಬಾಳೆಗೊನೆಗಳು ಭೂಮಿಗೆ ತಾಗದಿರಲೆಂದು ಗೂಟದಂತೆ ನೆಟ್ಟು ಆಸರೆ ನೀಡಿದ್ದಾರೆ. ಗಾಳಿ ಮಳೆಗೆ ಗಿಡಗಳಿಗೆ ಆಸರೆಯಾಗಿ ಕೋಲುಗಳನ್ನು ನೆಟ್ಟಿದ್ದಾರೆ. ಬಾಳೆ ಗಿಡದಿಂದ ಗಿಡಕ್ಕೆ ಇರುವ ಅಂತರದಲ್ಲಿ ಮಂಗಳೂರು ಸೌತೆಕಾಯಿ ಅಂತರ ಬೆಳೆ ಹಾಕಿದ್ದಾರೆ. ಇದರಲ್ಲೇ ಹೂಕೋಸು, ಬೀನ್ಸ್ ಹಾಕಿ ಬಾಳೆಗೆ ಬರುವ ಎಲ್ಲಾ ಖರ್ಚು ಅಂತರ ಬೆಳೆಯಿಂದ ತೆಗೆಯುತ್ತಾರೆ. ಕೊನೆಗೆ ಬಾಳೆ ಬೆಳೆಯಿಂದ ಮೂರು ಎಕರೆ ಜಮೀನಿನಲ್ಲಿ 12 ಲಕ್ಷ ನಿವ್ವಳ ಲಾಭ (Net profit) ಪಡೆಯುತ್ತಾರೆ. 

ಸಮಯಕ್ಕೆ ಮಹತ್ವ (Time value): ಕಂಪನಿಯಲ್ಲಿ ಕೆಲಸ ಮಾಡುವಾಗ ಅರ್ಧ ತಾಸು ತಡವಾದರೆ ಸಾಕು ಸಂಬಳ ಕಟ್ ಮಾಡುತ್ತಿದ್ದರು. ಹಾಗಾಗಿ ಸರಿಯಾದ ಸಮಯಕ್ಕೆ ಕೆಲಸಕ್ಕಿರುತ್ತಿದ್ದರಂತೆ. ಇದೇ ಅನುಭವವನ್ನು ಸೋಮಶೇಖರವರು ವ್ಯವಸಾಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಒಂದು ದಿನ ಕೆಲಸ ಮಾಡದೆ ಇದ್ದರೆ ಅವರು ಆ ದಿನ ಸರಿಯಾಗಿ ನಿದ್ದೆ ಮಾಡುವುದಿಲ್ಲ. ಕೃಷಿಗೆ (Agriculture) ಅಷ್ಟೊಂದು ಮಹತ್ವ ಕೊಟ್ಟಿದ್ದಾರೆ.

Read More:ನೈಸರ್ಗಿಕ ಕೃಷಿ ಅಳವಡಿಸಿಕೊಂಡು ಮಾರಕ ರೋಗಗಳಿಂದ ಮುಕ್ತಿಹೊಂದಿ

ಕೂಡಿ ಬಾಳಿದರೆ ಸ್ವರ್ಗ ಸುಖ ಮಾತಿನ ಮೇಲೆ ನಂಬಿಕೆಯಿಟ್ಟುಕೊಂಡಿರುವ ಸೋಮಶೇಖರನಿಗೆ  ಸಹೋದರ ನಂಜುಂಡಸ್ವಾಮಿ ಆಧಾರ ಸ್ಥಂಭವಾಗಿ ವ್ಯವಸಾಯದಲ್ಲಿ ತೊಡಗಿದ್ದಾರೆ. ಇದರರೊಂದಿಗೆ ಸೋಮಶೇಖರ ಪುತ್ರ ಪುನಿತಕುಮಾರ ಸಹ ತಂದೆಗೆ ತಕ್ಕ ಮಗನಂತೆ ಕೆಲಸ ಮಾಡಿ ಯುವ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಇಡೀ ಕುಟುಂಬವೇ ವ್ಯವಸಾಯದಲ್ಲಿ ತೊಡಗಿದ್ದರಿಂದ ಮಿಶ್ರ ಕೃಷಿಯಲ್ಲಿ ಯಶಸ್ಸು ಗಳಿಸಿದ್ದಾರೆ.

ತರಕಾರಿ ಮಾರಾಟಕ್ಕೆ ವಾಹನ: ಬಾಳೆಯೊಂದಿಗೆ ಅರಣ್ಯಕೃಷಿ,ನಿಂಬೆಹಣ್ಣು (Lemon), ದಾಳಿಂಬೆ, ಸಪೋಟಾ, ನೆಲ್ಲಿಕಾಯಿ, ಜರ್ಬೆರಾ (gerbera), ರಿಜ್ವಾನ್, ಟೊಮ್ಯಾಟೋ, ಮೂಲಂಗಿ, ಬದನೆಕಾಯಿ (brinjal), ಬೆಂಡೆಕಾಯಿ, ಮೆಣಸಿನಕಾಯಿ, ಕ್ಯಾರೇಟ್(carrate) ಸೇರಿದಂತೆ  ಪಾಲಕ್,  ಮೆಂತೆ, ಪುದಿನ ಹೀಗಾ ನಾನಾ ರೀತಿಯ ಸೊಪ್ಪು ಬೆಳೆಸಿ ಸದಾ ಹಣ ಕೈಯಲ್ಲಿರುವಂತೆ ಮಾಡಿಕೊಂಡಿದ್ದಾರೆ. ತಾವು ಬೆಳೆದ  ತರಕಾರಿಗಳನ್ನು  ಸ್ವತ ಅವರೇ ಎಪಿಎಂಸಿ ಮಾರುಕಟ್ಟೆ, ಮಾಲ್ಗಳಿಗೂ ಮಾರಾಟ ಮಾಡುತ್ತಾರೆ. ತರಕಾರಿ ಸಾಗಿಸಲು ಸ್ವಂತ ಟಂಟಂ ಆಟೋ ಇಟ್ಟುಕೊಂಡಿದ್ದಾರೆ.

ವ್ಯವಾಸಯದಲ್ಲಿ ಸಮಯ, ವ್ಯವಹಾರ ಜ್ಞಾನ ಮತ್ತು ಶ್ರಮ ಮಹತ್ವ. ಈ ಮೂರರಲ್ಲಿ ಒಂದನ್ನೂ ರೈತ ಬಿಟ್ಟರೆ ಲಾಭ ಪಡೆಯುವದಕ್ಕಾಗುವುದಿಲ್ಲ. ಯಾವ ಸಮಯಕ್ಕೆ ಬಿತ್ತಿದರೆ ರಾಶಿ ಬರುತ್ತದೆ, ಹಾಗೂ ವ್ಯವಹಾರದ ಜ್ಞಾನ, ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಯಾವ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿರುತ್ತದೆ ಎಂಬು ಅರಿವಿನಿಂದ ವ್ಯವಸಾಯ ಮಾಡಬೇಕು. ನೌಕರಿಯಲ್ಲಿ 8 ರಿಂದ 10 ತಾಸು ದುಡಿಯುತ್ತೇವೆಯೋ ಹಾಗೆಯೇ  ವ್ಯವಸಾಯದಲ್ಲಿಯೂ ನಿರಂತರವಾಗಿ ದುಡಿದರೆ ಫಲ ಸಿಕ್ಕೇ ಸಿಗುತ್ತದೆ. ಪ್ರಪಂಚದಲ್ಲಿ ಯಾರೂ ಬೇಕಾದರೂ ಮೋಸ ಮಾಡಬಹುದು. ಆದರೆ ಭೂತಾಯಿ ಎಂದು ಮೋಸ ಮಾಡುವುದಿಲ್ಲ ಎಂಬ ವಿಶ್ವಾಸದೊಂದಿಗೆ ತಾವು ವ್ಯವಸಾಯದಲ್ಲಿ ತೊಡಗಿಕೊಂಡಿದ್ದೇನೆ.

ಟಿ.ಎಸ್. ಸೋಮಶೇಖರ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಸೋಮಶೇಖರ ಮೊ. 9342105899