News

18 ಚಿಕ್ಕಮಗಳೂರು ಹಬ್ಬ 2023ರ ಅಂಗವಾಗಿ ಜನವರಿ 18ರಿಂದ ಕೃಷಿ ಮೇಳ ಆಯೋಜನೆ

02 January, 2023 11:40 AM IST By: Kalmesh T
As part of Chikkamagaluru festival 2023, Krishi Mela will be organized from January

ಚಿಕ್ಕಮಗಳೂರು ಹಬ್ಬ 2023ರ ಅಂಗವಾಗಿ ಚಿಕ್ಕಮಗಳೂರು ನಗರದ AIT ಕಾಲೇಜು ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಜನವರಿ 18 ರಿಂದ 22 ವರೆಗೆ ರಾಜ್ಯಮಟ್ಟದ ಬೃಹತ್‌ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನವನ್ನು ಆಯೋಜನೆ ಮಾಡಲಾಗುತ್ತಿದೆ.

ಪಿಎಂ ಕಿಸಾನ್‌ ಅಪ್ಡೇಟ್‌: ಕೋಟಿಗಟ್ಟಲೆ ರೈತರಿಗೆ ಪಿಎಂ ಕಿಸಾನ್ 13ನೇ ಕಂತಿನ ಕುರಿತು ಮಹತ್ವದ ಮಾಹಿತಿ

ಚಿಕ್ಕಮಗಳೂರು ಹಬ್ಬ 2023ರ ಅಂಗವಾಗಿ ಚಿಕ್ಕಮಗಳೂರು ನಗರದ AIT ಕಾಲೇಜು ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಜನವರಿ 18 ರಿಂದ 22 ವರೆಗೆ ರಾಜ್ಯಮಟ್ಟದ ಬೃಹತ್‌ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನವನ್ನು ಆಯೋಜನೆ ಮಾಡಲಾಗುತ್ತಿದೆ.

ಕೃಷಿ ಮೇಳ ಮತ್ತು ವಸ್ತು ಪುದರ್ಶನವು ಚಿಕ್ಕಮಗಳೂರು ಹಬ್ಬದ ಮುಖ್ಯ ಆಕರ್ಷಣೀಯ ಕಾರ್ಯಕ್ರಮವಾಗಿದ್ದು, ಮಳಿಗೆಗಳ ಮೂಲಕ ವೈಜ್ಞಾನಿಕ ಮಾಹಿತಿ, ಸಜೀವ ಮಾದರಿಗಳ ಅನಾವರಣ ಮತ್ತು ಅತ್ಯಾಕರ್ಷಕವಾದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ.

ಹೊಸ ವರ್ಷಕ್ಕೆ ಮೋದಿ ಸಿಹಿಸುದ್ದಿ: 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರಧಾನ್ಯ ವಿತರಣೆ - 2 ಲಕ್ಷ ಕೋಟಿ ಸಬ್ಸಿಡಿ!

ಇದಕ್ಕಾಗಿ ಸುಸಜ್ಜಿತವಾದ ಜರ್ಮನ್ ಟೆಂಟ್ ಒಳಗೆ 250ಕ್ಕೂ ಹೆಚ್ಚು ಹೈ-ಟೆಕ್ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

5 ದಿನಗಳವರೆಗೆ ಜರುಗಲಿರುವ ಈ ಕೃಷಿ ಮೇಳದಲ್ಲಿ ಲಕ್ಷಾಂತರ ಜನರನ್ನು ಸೆಳೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಆಸಕ್ತರು ವಸ್ತು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲು ಇಚ್ಛಿಸುವ ಕೃಷಿ ಮತ್ತು ಕೃಷಿ ಸಂಬಂಧಿತ ಎಲ್ಲಾ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸಹಕಾರ ಸಂಘಗಳು, ವಾಣಿಜ್ಯೋದ್ಯಮಿಗಳು ಜನವರಿ 07ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಲು ತಿಳಿಸಲಾಗಿದೆ.

ಗುಡ್‌ನ್ಯೂಸ್‌: ಕಳಸಾ ಬಂಡೂರಿ ಯೋಜನೆಗೆ ಕೇಂದ್ರದ ಒಪ್ಪಿಗೆ– ಸಿಎಂ ಬಸವರಾಜ ಬೊಮ್ಮಾಯಿ

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಶ್ರೀ ಎಸ್, ವೆಂಕಟೇಶ ಚವ್ಹಾಣ್, ಸಹಾಯಕ ಕೃಷಿ ನಿರ್ದೇಶಕರು ಇವರ ಮೊಬೈಲ್ ಸಂಖ್ಯೆ (ವಾಟ್ರ್ಯಾಪ್ ಸಂಖ್ಯೆ:) 8277930896 ಅಥವಾ ಇಮೇಲ್: ckmvigilance@gmail.com ಗೆ ಸಂಪರ್ಕಿಸಲು ಕೋರಿದೆ.

ಅರ್ಜಿಗಳ ಆಯ್ಕೆ ಮತ್ತು ಮಳಿಗೆಗಳ ಬಾಡಿಗೆ ನಿಗದಿಯಲ್ಲಿ ಕೃಷಿ ಮೇಳ ಮತ್ತು ವಸ್ತು ಪುದರ್ಶನ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.