ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ 2022-23ನೇ ಸಾಲಿನ ಡಿಪ್ಲೊಮ(ತೋಟಗಾರಿಕೆ) ಎರಡು ವರ್ಷದ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ತಿಳಿದು, ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ uhsbagalkot.karnataka.gov.in ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.
Breaking: ಕೇಂದ್ರ ಸರ್ಕಾರದಿಂದ LPG ಗೆ ನೀಡುತ್ತಿದ್ದ ಸಬ್ಸಿಡಿ ರದ್ದು! ಇನ್ಮುಂದೆ ನಿಮ್ಮ ಖಾತೆಗೆ ಬರಲ್ಲ ಹಣ!
ರೈತರಿಗೆ ಸಿಹಿಸುದ್ದಿ: ಮಾಸಾಂತ್ಯದೊಳಗೆ “ರೈತ ಶಕ್ತಿ ಯೋಜನೆ”ಗೆ ಚಾಲನೆ! ಏನಿದರ ಲಾಭ ಗೊತ್ತೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎಸ್ ಎಸ್ ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ದಿನಾಂಕ 02.07.2022 ಕ್ಕೆ 25 ವರ್ಷಗಳನ್ನು ಮೀರಿರಬಾರದು. ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆ ಮತ್ತು ಬ್ಯಾಂಕ್ ಚಲನ್ಗಳನ್ನು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ uhsbagalkot.karnataka.gov.in ನಲ್ಲಿ ಪಡೆದುಕೊಳ್ಳಬೇಕು. ಅನ್ವಯವಾಗುವಂತೆ ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ಪಾವತಿಸಬಹುದು.
ಈ ರೀತಿ ಶುಲ್ಕ ಪಾವತಿಸಿದ ರಶೀದಿಯನ್ನು, ವಿಶ್ವವಿದ್ಯಾಲಯದ ಚಲನ್ ಪ್ರತಿಯನ್ನು, ಅರ್ಜಿ ಜೊತೆಗೆ ಕಡ್ಡಾಯವಾಗಿ ಲಗತ್ತಿಸಬೇಕು. ಲಗತ್ತಿಸದಿದ್ದಲ್ಲಿ ಅರ್ಜಿಯನ್ನು ತಿರಿಸ್ಕರಿಸಲಾಗುವುದು.
ಮಾವು ಉತ್ಪಾದನೆಯಲ್ಲಿ ಶೇ.80ರಷ್ಟು ದಾಖಲೆಯ ಕುಸಿತ ಕಂಡ ಭಾರತ: ಮಾವು ಬೆಳೆಗಾರರಿಗೆ ಸಂಕಷ್ಟ!
PM Kisan 11 ನೇ ಕಂತಿನ ಹಣ ನಿಮ್ಮ ಖಾತೆಗೆ ಇನ್ನೂ ಬಂದಿಲ್ಲವೇ? ಹಾಗಿದ್ದರೆ ಈಗಲೇ ಚೆಕ್ ಮಾಡಿ...
ಪ್ರವೇಶ ಮೀಸಲಾತಿ :
ವಿವಿಧ ಮೀಸಲಾತಿ ವರ್ಗಗಳಿಗೆ ಕರ್ನಾಟಕ ಸರ್ಕಾರದ ಪ್ರಚಲಿತ ಮೀಸಲಾತಿ ಆದೇಶಗಳನ್ನು ಅನುಸರಿಸಲಾಗುವುದು.
ತೋಟಗಾರಿಕೆ ಡಿಪ್ಲೊಮ ಎರಡು ವರ್ಷದ ಕೋರ್ಸ್ಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು, ವಿಶ್ವವಿದ್ಯಾಲಯದ ಚಲನ್ ಪ್ರತಿ ಮತ್ತು ಎಲ್ಲಾ ಅವಶ್ಯಕ ದಾಖಲೆಗಳೊಂದಿಗೆ ಡೀನ್(ಸ್ನಾತಕೋತ್ತರ), ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಉದ್ಯಾನಗಿರಿ, ನವನಗರ, ಬಾಗಲಕೋಟ-587104 ಇವರಿಗೆ ದಿನಾಂಕ 02-07-2022 ಮಧ್ಯಾಹ್ನ 1 ಘಂಟೆಯ ಒಳಗಾಗಿ ತಲುಪುವಂತೆ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ತೋಟಗಾರಿಕೆ ಡಿಪ್ಲೊಮ ಕೋಸ್ಗೆ ಎಸ್ ಎಸ್ ಎಲ್ ಸಿ / ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಹಾಗೂ ರೋಸ್ಟರ್ ಪದ್ಧತಿ ಆದರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಮಹಾವಿದ್ಯಾಲಯದ ಆದ್ಯತೆಯನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡಲಾಗುವುದು. ಆದ ಕಾರಣ ಅಭ್ಯರ್ಥಿಗಳು ಆದ್ಯತೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ಪುರಸ್ಕೃತ ಮತ್ತು ತಿರಸ್ಕೃತಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ನಿಗದಿತ ದಿನಾಂಕದಂದು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ uhsbagalkot.karnataka.gov.in ನಲ್ಲಿ ಪ್ರಕಟಿಸಲಾಗುವುದು.
ನಂತರ ಮೊದಲನೇಯ ಮತ್ತು ಎರಡನೇಯ ಪಟ್ಟಿಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಹೆಸರುಗಳನ್ನು ವಿಶ್ವವಿದ್ಯಾಲಯದ ವೆಬ್ ಸೈಟ್ ನಲ್ಲಿ ನಿಗದಿತ ದಿನಾಂಕಗಳಂದು ಪ್ರಕಟಿಸಲಾಗುವುದು.
ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಮೊಬೈಲ್ ನಂಬರ್ಗೆ ಎಸ್ಎಮ್ಎಸ್ ಮೂಲಕ ಅಥವಾ ಇ-ಮೇಲ್ ಮೂಲಕ ತಿಳಿಸಲಾಗುವುದು. ಆದ ಕಾರಣ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಸರಿಯಾದ ಇ-ಮೇಲ್ ಐಡಿಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸಿ.