News

ಮಹತ್ವದ ಸುದ್ದಿ: ರೇಷನ್‌ ಬದಲು ಹಣ ನೀಡಲು ಚಿಂತನೆ..ಶೀಘ್ರದಲ್ಲೇ ಜಾರಿ ಸಾಧ್ಯತೆ..!

13 April, 2022 11:10 AM IST By: KJ Staff
ಸಾಂದರ್ಭಿಕ ಚಿತ್ರ

ವಿಜಯವಾಡ:   ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ (Y S Jagan) ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯ ಸರ್ಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳತ್ತ ಹೆಜ್ಜೆ ಇಡುತ್ತಿರುವಂತೆ ತೋರುತ್ತಿದೆ. ಈ ಹಿಂದೆ ಟಿಡಿಪಿ(TDP) ಸರ್ಕಾರ ಜಾರಿಗೆ ತರಲು ಉದ್ದೇಶಿಸಿತ್ತು.. ನಂತರ ರದ್ದುಪಡಿಸಿದ್ದ ನಗದು ವರ್ಗಾವಣೆ ನೀತಿಗೆ ಜಗನ್ ಸರ್ಕಾರ ಈಗ ಮರುಜೀವ ನೀಡಿದೆ.

UIDAI ನೇಮಕಾತಿ 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಉದ್ಯೋಗ

ನರೇಗಾ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕದ ಸಾಧನೆ!- ಸಚಿವ ಕೆ.ಎಸ್.ಈಶ್ವರಪ್ಪ

ಹೌದು ಎರಡು ವರ್ಷಗಳ ಹಿಂದೆ ಜಗನ್ ಸರ್ಕಾರ ಈ ಐಡಿಯಾ ಮಾಡಿದ್ದು. ಆದರೆ ಆಗ ಅದು ಜಾರಿಗೆ ಬಂದಿರಲಿಲ್ಲ. ಕಳೆದ ವರ್ಷವೂ ಪಡಿತರ ಬದಲು ನಗದು ವರ್ಗಾವಣೆ ಯೋಜನೆ ಜಾರಿಗೊಳಿಸಲು ಪ್ರಯತ್ನಿಸಲಾಗಿತ್ತು. ಫಲಾನುಭವಿಗೆ ಅಕ್ಕಿ ಬೇಡ ಎನಿಸಿದರೆ ನಗದು ನೀಡಬೇಕೆಂಬುದು ಇದೆ ಉದ್ದೇಶವಾಗಿದೆ.

ಹೆಂಡತಿಯ ಹೆಸರಲ್ಲಿ ಈ ಅಕೌಂಟ್ ತೆರೆಯಿರಿ..ತಿಂಗಳಿಗೆ 44,793 ರೂ. ಆದಾಯ ಪಡೆಯಿರಿ

50 ಲೀ. ವರೆಗೆ ಹಾಲು ನೀಡುವ ದೇಸಿ ತಳಿಯ ಹಸುಗಳು! ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.

ಈ ನಿಟ್ಟಿನಲ್ಲಿ ಉಪ ಸಮಿತಿಯ ಶಿಫಾರಸಿನ ಮೇರೆಗೆ ಸರಕಾರವೂ ತನ್ನ ವಿವೇಚನೆಗೆ ಚಾಲನೆ ನೀಡಿದೆ. ಆದರೆ ಹಲವು ದಿನಗಳಿಂದ ಆಲೋಚಿಸಲಾಗಿದ್ದ ಯೋಜನೆ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ.  ಆದರೆ ಈಗ ಈ ವಿಧಾನವು ಶೀಘ್ರದಲ್ಲೇ ಪ್ರಾಯೋಗಿಕವಾಗಿ ಪ್ರಾರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ

POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?

ಈ ಯೋಜನೆಯಡಿ ಮೇ ತಿಂಗಳಿನಿಂದ ನಗದು ವರ್ಗಾವಣೆ ಯೋಜನೆ ಜಾರಿಯಾಗಲಿದೆ ಎನ್ನಲಾಗ್ತಿದೆ. ಅಕ್ಕಿ ಬೇಡದ ಫಲಾನುಭವಿಗಳಿಂದ ಇದೇ 18ರಿಂದ 22ರವರೆಗೆ ಸ್ವಯಂ ಸೇವಕರ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ತದನಂತರ ದಾಖಲೆಗಳನ್ನು ಸಂಗ್ರಹಿಸಿ ಕೆಜಿಗೆ 12ರಿಂದ 15 ರೂ.ವರಗೆ ಹಣವನ್ನು ನೀಡಲು ಯೋಜಸಲಾಗುತ್ತದೆ ಎಂದು ವರದಿಗಳಾಗಿವೆ.

ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!

ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ