News

Hindi Imposition: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ವೃದ್ಧ ರೈತ ಆತ್ಮಹತ್ಯೆ!

28 November, 2022 2:46 PM IST By: Kalmesh T
An old farmer commits suicide by setting himself on fire against the imposition of Hindi

ಹಿಂದಿ ಹೇರಿಕೆಯನ್ನು ವಿರೋಧಿಸಿ 85 ವರ್ಷದ ರೈತರೊಬ್ಬರು ಡಿಎಂಕೆ ಕಚೇರಿಯೆದುರು ದೇಹಕ್ಕೆ ಬೆಂಕಿ ಹಚ್ಚಿಕೊಂಡು ಮೃತಪಟ್ಟ ಘಟನೆ ವರದಿಯಾಗಿದೆ.

Pradhan Mantri Jan-Dhan Yojana | ಖಾತೆದಾರರಿಗೆ ಸರ್ಕಾರದಿಂದ 10,000 ರೂಪಾಯಿ! 

ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ತಮಿಳುನಾಡು ರೈತ ಆತ್ಮಾಹುತಿ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಸೇಲಂ ಜಿಲ್ಲೆಯ ಡಿಎಂಕೆ ಕಚೇರಿಯೆದುರು ಈ ಘಟನೆ ನಡೆದಿದೆ.

ಹಿಂದಿ ಹೇರಿಕೆಯನ್ನು ವಿರೋಧಿಸಿ ತಮಿಳುನಾಡಿನ ಸೇಲಂ ಜಿಲ್ಲೆಯ 85 ವರ್ಷದ ರೈತನು ಡಿಎಂಕೆ ಕಚೇರಿಯೆದುರು ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡ ಮೃತಪಟ್ಟ ಭೀಕರ ಘಟನೆ ವರದಿಯಾಗಿದೆ.

ಡಿಎಂಕೆ ಪಕ್ಷದ ಕೃಷಿ ಒಕ್ಕೂಟದ ಮಾಜಿ ಸಂಘಟಕ ತಂಗವೇಲ್‌ (Thangavel) ಮೃತಪಟ್ಟ ರೈತ. ಇವರು ಥಲೈಯೂರಿನ ಡಿಎಂಕೆ ಪಕ್ಷದ ಕಚೇರಿಯ ಎದುರು ಹಿಂದಿ ಹೇರಿಕೆಯನ್ನು ವಿರೋಧಿಸಿ ತಮ್ಮ ಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಶನಿವಾರ ಮುಂಜಾನೆ 11 ಗಂಟೆ ವೇಳೆಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿರಿ: ಬಂಗಾರ-ಬೆಳ್ಳಿ ಪ್ರಿಯರಿಗೆ ಸಮಾಧಾನದ ಸುದ್ದಿ; ತಿಂಗಳಾಂತ್ಯಕ್ಕೆ ದೇಶಾದ್ಯಂತ ಬೆಲೆ ಇಳಿಕೆ

ತಂಗವೇಲ್‌ ಕೇಂದ್ರ ಸರ್ಕಾರವು ಹಿಂದಿಯನ್ನು ಶಿಕ್ಷಣದ ಮಾಧ್ಯಮವಾಗಿ ಮಾಡಲು ಮುಂದಾಗಿದೆ ಎಂದು ಚಿಂತೆಗೀಡಾಗಿದ್ದರು ಎನ್ನಲಾಗಿದೆ. ತಮ್ಮನ್ನೇ ತಾವು ಸುಟ್ಟುಕೊಳ್ಳುವ ಮೊದಲು ಅವರು ‘ಮೋದಿ ಸರ್ಕಾರ, ಕೇಂದ್ರ ಸರ್ಕಾರ, ನಮಗೆ ಹಿಂದಿ ಬೇಡ.

ನಮ್ಮ ಮಾತೃಭಾಷೆ ತಮಿಳು. ಹಿಂದಿಯು ವಿದೂಷಕರಿಗಾಗಿ ಇರುವ ಭಾಷೆ. ಹಿಂದಿ ಭಾಷೆಯನ್ನು ಹೇರುವುದರಿಂದ ವಿದ್ಯಾರ್ಥಿಗಳ ಜೀವನಕ್ಕೆ ತೊಂದರೆಯಾಗುತ್ತದೆ. ಹಿಂದಿ ತೊಲಗಿಸಿ’ ಎಂದು ಬರೆದ ಬ್ಯಾನರ್‌ ಹಿಡಿದುಕೊಂಡಿದ್ದರು.

ಡಿಎಂಕೆ ಕಾರ್ಯಕರ್ತರೂ ಆಗಿರುವ ಇವರು, ತಮಿಳುನಾಡಿನಲ್ಲಿ ಕೇಂದ್ರ ಸರ್ಕಾರ ಹಿಂದಿ ಹೇರುತ್ತಿದೆ ಎಂದು ಆರೋಪಿಸಿ ಶನಿವಾರ ಸೇಲಂನಲ್ಲಿ ಆತ್ಮಾಹುತಿ ಮಾಡಿಕೊಂಡಿದ್ದಾರೆ.

ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ಡಿಎ ಹೆಚ್ಚಳದ ನಂತರ ಇದೀಗ ಮತ್ತೊಂದು ಮಹತ್ವದ ಘೋಷಣೆ! ಏನಿದು ತಿಳಿಯಿರಿ

ಮೆಟ್ಟೂರಿನ ಪಿ.ಎನ್. ಪಟ್ಟಿ ಸಮೀಪದ ತಲೈಯೂರಿನ ಎಂ.ವಿ. ತಂಗವೇಲ್, ರೈತ ಮತ್ತು ಡಿಎಂಕೆ ಪದಾಧಿಕಾರಿಯಾಗಿದ್ದರು ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.

ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ತಂಗವೇಲ್ ತಲೈಯೂರಿನಲ್ಲಿರುವ ಡಿಎಂಕೆ ಪಕ್ಷದ ಕಚೇರಿಗೆ ಬಂದು ಆತ್ಮಾಹುತಿ ಮಾಡಿಕೊಂಡರು.

ಅವರ ಕಿರುಚಾಟ ಕೇಳಿ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದರೂ ಅವರನ್ನು ಬಚಾವ್‌ ಮಾಡಲು ಸಾಧ್ಯವಾಗಲಿಲ್ಲ. ನಂತರ, ಈ ಬಗ್ಗೆ ಮಾಹಿತಿ ಪಡೆದ ಮೆಟ್ಟೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಟ್ಟೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಮೃತ ತಂಗವೇಲ್ ಪಿ.ಎನ್. ಪಟ್ಟಿ ಪಟ್ಟಣ ಪಂಚಾಯತ್ ಡಿಎಂಕೆ ಕಾರ್ಯದರ್ಶಿ ಕುಮಾರ್ ಅವರಿಗೆ ಬರೆದಿದ್ದ ಫಲಕ ಹಾಗೂ ಪತ್ರವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಅದನ್ನು ಅವರು ಡಿಎಂಕೆ ಪಕ್ಷದ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಫಲಕದಲ್ಲಿ ತಂಗವೇಲ್ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿಯನ್ನು ಹಿಂದಿ ಹೇರಿಕೆ ಮಾಡದಂತೆ ಒತ್ತಾಯಿಸಿದರು.

ಈ ಸಂಬಂಧ ಮೆಟ್ಟೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರು ಪತ್ನಿ ಜಾನಕಿಯಮ್ಮಳ್, ಪುತ್ರರಾದ ಮಣಿ ಮತ್ತು ರತ್ನವೇಲ್ ಹಾಗೂ ಪುತ್ರಿ ಕಲ್ಯಾಣಿ ಅವರನ್ನು ಅಗಲಿದ್ದಾರೆ. ಘಟನೆಯ ಮಾಹಿತಿ ತಿಳಿದ ಡಿಎಂಕೆ ಕಾರ್ಯಕರ್ತರು ಡಿಎಂಕೆ ಪಕ್ಷದ ಕಚೇರಿ ಮತ್ತು ಮೃತರ ನಿವಾಸದಲ್ಲಿ ಜಮಾಯಿಸಿದರು.