News

ಫೈಟರ್‌ ಜೆಟ್‌ ಹಾರಿಸಿ ಚೀನಾದ ಬೇಹುಗಾರಿಕೆ ಬಲೂನ್‌ ಸ್ಫೋಟಿಸಿದ ಅಮೆರಿಕಾ!

05 February, 2023 12:48 PM IST By: Hitesh
America flew a fighter jet and blew up a Chinese spy balloon!

ಅಮೆರಿಕಾ ಹಾಗೂ ಚೀನಾದ ನಡುವಿನ ಮುಸುಕಿನ ಗುದ್ದಾಟ ಮತ್ತೊಮ್ಮೆ ಈಗ ಬಹಿರಂಗವಾಗಿದ್ದು, ಇದೀಗ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.  

ಬಜೆಟ್ 2023: ಮಹಿಳೆಯರಿಗೆ ಉಳಿತಾಯ ಖಾತೆಯ ಮೂಲಕ 7.5% ಬಡ್ಡಿ!  

ಈಚೆಗೆ ಅಮೆರಿಕಾದ ದಕ್ಷಿಣ ಕೆರೊಲಿನಾದ ಕರಾವಳಿ ಭಾಗದಲ್ಲಿ ಚೀನಾದ ಬೇಹುಗಾರಿಕಾ ಬಲೂನ್ ಕಾಣಿಸಿಕೊಂಡಿದ್ದು, ತೀವ್ರ ಚರ್ಚೆ ನಡೆದಿದೆ.

ಚೀನಾದ ಬೇಹುಗಾರಿಕಾ ಬಲೂನ್‌ ಅನ್ನು ಅಮೆರಿಕದ ಫೈಟರ್‌ ಜೆಟ್‌ ಶನಿವಾರ ಹೊಡೆದುರುಳಿಸಿದೆ ಎಂದು ಪೆಂಟಗನ್‌ (ಅಮೆರಿಕ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ) ಖಚಿತಪಡಿಸಿದೆ.

pan card update online ಇನ್ಮುಂದೆ ಸರ್ಕಾರಿ ಸಂಸ್ಥೆಗಳ ಡಿಜಿಟಲ್ ವ್ಯವಸ್ಥೆಗೆ ಸಾಮಾನ್ಯ ಗುರುತಿನ ಚೀಟಿಯಾಗಿ ಪ್ಯಾನ್ ಕಾರ್ಡ್ !  

ಅಮೆರಿಕಾದ ಸಾರ್ವಭೌಮತೆಯನ್ನು ಚೀನಾ ಉಲ್ಲಂಘನೆ ಮಾಡಿದೆ ಅಮೆರಿಕಾದ ರಕ್ಷಣಾ ಇಲಾಖೆ ಉತ್ತರಿಸಿದೆ.  

ಅಮೆರಿಕ ವಾಯು, ಜಲಪ್ರದೇಶದಲ್ಲಿ ಹಾರಾಡುತ್ತಿದ್ದ ಬಲೂನ್ ಅನ್ನು ಹೊಡೆದುಹಾಕಿದ ಯುದ್ಧ ವಿಮಾನದ ಪೈಲಟ್‌ಗಳನ್ನು ದೇಶದ ಅಧ್ಯಕ್ಷ ಜೋ ಬೈಡನ್‌ ಅವರು ಅಭಿನಂದಿಸಿದ್ದಾರೆ. ಫೈಟರ್‌ ಜೆಟ್‌ಗಳು ಬಲೂನ್‌ ಅನ್ನು ಯಶಸ್ವಿಯಾಗಿ ಹೊಡೆದುಹಾಕಿವೆ. ನಮ್ಮ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಬೇಹುಗಾರಿಕೆ ಬಲೂನ್‌ನ ಹಿನ್ನೆಲೆ ಏನು

ಅಮೆರಿಕಾದ ದಕ್ಷಿಣ ಕೆರೊಲಿನಾದ ಕರಾವಳಿ ಭಾಗದಲ್ಲಿ ಚೀನಾದ ಬೇಹುಗಾರಿಕಾ ಬಲೂನ್ ಕಾಣಿಸಿಕೊಂಡಿದ್ದು, ಚೀನಾದ ಈ ನಡೆಗೆ ಅಮೆರಿಕಾ ತೀವ್ರವಾದ ವಿರೋಧ ವ್ಯಕ್ತಪಡಿಸಿತ್ತು.

Union Budget 2023 ಮಹಿಳೆಯರಿಗೆ ಕಹಿಸುದ್ದಿ: ಚಿನ್ನ, ಬೆಳ್ಳಿ ದರ ತುಟ್ಟಿ! ಯಾವೆಲ್ಲ ವಸ್ತುಗಳ ಬೆಲೆ ಏರಿಕೆ, ಇಳಿಕೆ ಇಲ್ಲಿದೆ ವಿವರ 

ಈ ಬೆಳವಣಿಗೆಗಳ ಬೆನ್ನಲೇ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರು ಚೀನಾ ಪ್ರವಾಸವನ್ನು ರದ್ದು ಮಾಡಲಾಗಿದೆ. ಶುಕ್ರವಾರ, ಬ್ಲಿಂಕೆನ್ ಚೀನಾಗೆ ತೆರಳಬೇಕಿತ್ತು.

ಕಳೆದ ಹಲವು ವರ್ಷಗಳಿಂದ ಚೀನಾಗೆ ಅಮೆರಿಕದ ಉನ್ನತ ರಾಜತಾಂತ್ರಿಕರ ಭೇಟಿ ಇದಾಗಿದ್ದು, ಮಹತ್ವ ಪಡೆದುಕೊಂಡಿತ್ತು.

ಇದರ ಹಿಂದೆಯೇ ಈ ಘಟನೆ ನಡೆದಿದೆ. ಚೀನಾವು ಅಮೆರಿಕದ ವಾಯು ಪ್ರದೇಶವನ್ನು ಅತಿಕ್ರಮಿಸಿರುವ  ಬಗ್ಗೆ ಅಧ್ಯಕ್ಷ ಜೋ ಬೈಡನ್ ವಿವರಣೆ ನೀಡಿದ್ದರು. ಅಲ್ಲದೇ ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಲಾಗುತ್ತಿದೆ ಎಂದು ಶ್ವೇತಭವನ ತಿಳಿಸಿತ್ತು.

ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬಲೂನ್ ಅನ್ನು ಹೊಡೆದುರುಳಿಸಿರಲಿಲ್ಲ. ಸಿದ್ಧತೆ ಮಾಡಿಕೊಂಡು ಶನಿವಾರ ಹೊಡೆದುರುಳಿಸಲಾಗಿದೆ.

ಬಲೂನ್ ಕಣ್ಗಾವಲು ಉಪಕರಣದ ಜೊತೆಗೆ ಅಧಿಕ ಭಾರದ ವಸ್ತುಗಳನ್ನು ಒಳಗೊಂಡಿದೆ. ಕಣ್ಗಾವಲು ಬಲೂನ್ ವಿವಿಧ ಸಾಮರ್ಥ್ಯಗಳನ್ನು ಹೊಂದಿದೆ. ಸದ್ಯ ಅದು ಅಮೆರಿಕದ ಪೂರ್ವ ಭಾಗಕ್ಕೆ ಚಲಿಸುತ್ತಿದೆ ಎಂದು ವರದಿ ಆಗಿತ್ತು.

Kisan Credit Card: ಕಿಸಾನ್ ಕ್ರೆಡಿಟ್ ಕಾರ್ಡ್‌ ಎಂದರೇನು, ಯಾರೆಲ್ಲ ಇದಕ್ಕೆ ಅರ್ಹರು ಇಲ್ಲಿದೆ ಸಂಪೂರ್ಣ ಮಾಹಿತಿ!  

ಇದೀಗ ಬಲೂನ್‌ ಹೊಡೆದುರುಳಿಸಲಾಗಿದ್ದು, ಬಲೂನ್‌ ಅನ್ನು ಒಡೆಹಾಕಿದ್ದನ್ನು ಸಮರ್ಥಿಸಿಕೊಂಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಇದು ಉದ್ದೇಶಪೂರ್ವಕ ಮತ್ತು ಕಾನೂನುಬದ್ಧ ಕ್ರಮ‌ ಎಂದಿದ್ದಾರೆ.

ಚೀನಾದಿಂದ ಆಗಿರುವ ನಮ್ಮ ಸಾರ್ವಭೌಮತ್ವದ ಉಲ್ಲಂಘನೆಗೆ ಈ ಕ್ರಮವನ್ನು ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.  

ಈ ಕಾರ್ಯಾಚರಣೆಗಾಗಿ ಅಮೆರಿಕಾದ ಆಗ್ನೇಯ ಭಾಗದ 3 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾರ್ಯಚರಣೆ ಎಂದು ದೇಶದ ವಾಯುಯಾನ ಇಲಾಖೆ ಹೇಳಿತ್ತು. ಕಾರ್ಯಾಚರಣೆಯ ನಂತರ ಬಲೂನ್‌ ಸಮುದ್ರಕ್ಕೆ ಬೀಳುತ್ತಿರುವುದು ಪ್ರಸಾರವಾಗಿದೆ.  

ಸದ್ಯ ಹೊಡೆದುರುಳಿಸಲಾಗಿರುವ ಬಲೂಲ್‌ ಮತ್ತು ಅದರೊಳಗಿನ ಸಾಧನಗಳನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭವಾಗಿದೆ ಎಂದು ಪೆಂಟಗನ್‌ ತಿಳಿಸಿದೆ.   

ಸಾವಿನ ನಂತರವೂ ಆತ್ಮೀಯರೊಂದಿಗೆ ಗೊಬ್ಬರ ರೂಪದಲ್ಲೂಳಿವ ಪರಿಕಲ್ಪನೆ!