ಶಿವಭಕ್ತರಿಗೆ ಶುಭ ಸುದ್ದಿ. ಮುಂಬರುವ ಜೂನ್ 30ರಿಂದ ಅಮರನಾಥ ದೇವಾಲಯ ದರ್ಶನಕ್ಕೆ ತೆರೆಯಲಿದ್ದು, ಈಗಾಗಲೇ ಆಸಕ್ತ ಭಕ್ತರಿಗೆ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ.
ಇದನ್ನೂ ಓದಿರಿ: ಸಾಧನೆ: 2022 ರಲ್ಲಿ 661.54 ಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ!
ಅಮರನಾಥ ದೇವಾಲಯದ ವಾರ್ಷಿಕ ಯಾತ್ರೆಗೆ ಜೂನ್ 30ರಂದು ಚಾಲನೆ ದೊರೆಯಲಿದೆ. ಈ ವರ್ಷದ ತೀರ್ಥಯಾತ್ರೆ ಒಟ್ಟು 43 ದಿನಗಳ ಕಾಲ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಬಾರಿಯ ಯಾತ್ರೆಗೆ ಏಪ್ರಿಲ್ 11ರಿಂದ ನೋಂದಣಿ, ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಆನ್ ಲೈನ್, ಮೊಬೈಲ್ ಅಪ್ಲಿಕೇಷನ್ ಬಳಸಿ ಹೆಸರು, ವಿವರ ದಾಖಲಿಸಬಹುದು ಎಂದು ವ್ಯವಸ್ಥಾಪಕ ಕಮೀಟಿಯವರು ತಿಳಿಸಿದ್ದಾರೆ.
ಭಕ್ತಿ ಸಾಗರದ ಅಮರನಾಥ ದೇವಾಲಯ
ಜಮ್ಮು ಮತ್ತು ಕಾಶ್ಮೀರದ ಒಂದು ಗುಹೆಯಲ್ಲಿ ಅಮರನಾಥ ದೇವಾಲಯ ಇದೆ. ಗುಹೆಯ ಒಳಗೆ ಮಂಜಿನ ಗೆಡ್ಡೆ ಲಿಂಗದ ಆಕಾರದಲ್ಲಿದೆ. ಇದನ್ನು ಶಿವನ ಪ್ರತಿರೂಪ ಎಂದು ಪೂಜಿಸಲಾಗುತ್ತದೆ. ಇದರ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಪ್ರತಿವರ್ಷ ದೇಶದ ವಿವಿಧ ಮೂಲೆಗಳಿಂದ ಆಗಮಿಸುತ್ತಾರೆ.
LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್ ಮಾಡಿ ಸಾಕು
ಯಾತ್ರೆ ತೆರಳಲಿರುವ ಜಮ್ಮು-ಪಹಲ್ಗಾಮ್ ಮಾರ್ಗ ಮತ್ತು ಜಮ್ಮು-ಬಲ್ತಾಲ್ ರಸ್ತೆಯ ದಾರಿಯುದ್ದಕ್ಕೂ 40,000ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಸಿಆರ್ ಪಿಎಫ್ ಮತ್ತು ರಾಜ್ಯ ಪೊಲೀಸರನ್ನು ಪಹರೆ ನಿಲ್ಲಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಪೂರ್ಣ ಮಾಹಿತಿ ಅಧಿಕೃತ ವೆಬ್ ತಾಣದಲ್ಲಿದೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಹಾಗೂ ಕಾಶ್ಮೀರ ಬ್ಯಾಂಕ್, ಯೆಸ್ ಬ್ಯಾಂಕ್‌ನ ದೇಶದ ಎಲ್ಲಾ ಶಾಖೆಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಅಮರನಾಥ ಯಾತ್ರೆ ಮಂಡಳಿ ಮುಖ್ಯಸ್ಥ ನಿತಿಶ್ವರ್ ಕುಮಾರ್ ತಿಳಿಸಿದ್ದಾರೆ.
ಜರ್ಮನಿಯ ಪ್ರಮುಖ ಇಂಧನ ಕಂಪನಿಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವರು ದುಂಡು ಮೇಜಿನ ಸಭೆ!
ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂಪಾಯಿಗಳ GST ಆದಾಯ ಸಂಗ್ರಹ!
ನೋಂದಣಿ ಪ್ರಕ್ರಿಯೆ, ಅರ್ಜಿ ಹಾಗೂ ರಾಜ್ಯಾವಾರು ಬ್ಯಾಂಕ್ ಶಾಖೆಗಳ ಸಂಪೂರ್ಣ ವಿವರವು ಮಂಡಳಿಯ ವೆಬ್ ಸೈಟ್‌ನಲ್ಲಿ ಲಭ್ಯವಿದೆ.