ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಗುರುವಾರ ಚಾಲನೆ ನೀಡಲಾಯಿತು.
ನಾಡದೋಣಿ ಮೀನುಗಾರರಿಗೆ ಸಿಹಿಸುದ್ದಿ: ಹೆಚ್ಚುವರಿ 30 ಲಕ್ಷ ಲೀ. ಸೀಮೆಎಣ್ಣೆ ಬಿಡುಗಡೆಗೆ ಕೇಂದ್ರ ಸಮ್ಮತಿ
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ) ಆವರಣದಲ್ಲಿ ಗುರುವಾರ ಕೃಷಿ ಮೇಳಕ್ಕೆ ಚಾಲನೆ ನೀಡಲಾಗಿದೆ.
ಇದು ಬೃಹತ್ ಕೃಷಿ ಮೇಳವಾಗಿದ್ದು, ರೈತ ಸಮುದಾಯದ ಅನುಕೂಲಕ್ಕಾಗಿ ಕೃಷಿ ಮತ್ತು ಸಂಬಂಧಿತ ಪ್ರದೇಶಗಳ ಇತ್ತೀಚಿನ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಕೃಷಿ ವಸ್ತುಪ್ರದರ್ಶನವನ್ನು ನಡೆಸಲಾಗುತ್ತದೆ.
ಪಂಜಾಬ್‌ನಲ್ಲಿ ಕಳೆ ಸುಡುತ್ತಿರುವ ರೈತರು; ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ!
ಮೇಳದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಅಭಿವೃದ್ಧಿ ಇಲಾಖೆಗಳು, ಕೃಷಿ ವಿಶ್ವವಿದ್ಯಾನಿಲಯಗಳು, ಏಜೆನ್ಸಿಗಳು, ಪ್ರೀಮಿಯರ್ ಸೀಡ್ ಕಂಪನಿಗಳು, ಕೃಷಿ ಯಂತ್ರೋಪಕರಣ ತಯಾರಕರು, ಪಶುಸಂಗೋಪನಾ ವಲಯ, ಕೃಷಿ-ಉದ್ಯಮಿಗಳು, ಕೃಷಿಗೆ ಸಂಬಂಧಿಸಿದ ಪ್ರಕಾಶಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿವೆ.
ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಬೃಹತ್ ಮತ್ತು ಸಣ್ಣ ಗಾತ್ರದ ಕೃಷಿ ಯಂತ್ರೋಪಕರಣದ ತಯಾರಕರು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು, ಅಲ್ಲದೇ ಮೇಳಕ್ಕೆ ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆಯ ರಾಜ್ಯಗಳಿಂದಲೂ ರೈತರು ಭೇಟಿ ನೀಡಲಿದ್ದಾರೆ.
ಅಂದಾಜಿನ ಪ್ರಕಾರ, 2019ರಲ್ಲಿ 12 ಲಕ್ಷಕ್ಕೂ ಹೆಚ್ಚು ರೈತರು ಕೃಷಿಮೇಳಕ್ಕೆ ಭೇಟಿ ನೀಡಿದ್ದಾರೆ ಮತ್ತು ಪ್ರದರ್ಶನಕ್ಕಾಗಿ 700 ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಪ್ರಸಕ್ತ ಸಾಲಿನ ಕೃಷಿ ಮೇಳವು ಕಳೆದ ಮೇಳದ ದಾಖಲೆಗಳನ್ನು ದಾಟಬಹುದು ಎಂದು ನಿರೀಕ್ಷಿಸಲಾಗಿದೆ.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ: 8 ಲಕ್ಷ ವಿದ್ಯಾರ್ಥಿಗಳು ದಾಖಲು!
ಈ ಬಾರಿಯ ಕೃಷಿ ಮೇಳದ ವೀಕ್ಷಣೆಗೆ ಆನ್‌ಲೈನ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸಸಸಾರ್ವಜನಿಕರ ಪ್ರವೇಶಕ್ಕೆ ಯಾವುದೇ ಶುಲ್ಕ ವಿಧಿಸಿಲ್ಲ.
- ಕೃಷಿ ಮೇಳದ ವಿಶೇಷತೆಗಳು
- ಕೃಷಿಯಲ್ಲಿ ನೂತನ ಮಾಹಿತಿ ತತಂತಂತ್ರಜ್ಞಾನ
- ಜೈವಿಕ ಹಾಗೂ ನವೀಶರಿಸಲ್ಪಡುವ ಇಂಧನ
- ಜಲಾಯನ ನಿರ್ವಹಣೆ
- ಸಾವಯವ ಕೃಷಿ ಪದ್ಧತಿಗಳು
- ತೋಟಗಾರಿಕೆ ಬೆಳೆಗಳ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆಗಳು
- ಮಾರುಕಟ್ಟೆ ನೈಪುಣ್ಯತೆ ಮಾಮಮಾಹಿತಿ
- ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಂ ಹಾಗೂ ಮೀನು ಸಾಕಣೆ
- ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನ
- ಸಿರಿಧಾನ್ಯಗಳು ಹಾಗೂ ಮಹತ್ವ
- ಬಿತ್ತನೆ ಬೀಜಗಳ ಮೊಳಕ ಪರೀಕ್ಷೆ ಹಾಗೂ ಶೇಖರಣೆ
- ಔಷಧೀಯ ಮತ್ತು ಸುಗಂಧಯುಕ್ತ ಸಸ್ಯಗಳು
- ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿತೆಗಳು
- ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಂಗಳ ಪ್ರಾತ್ಯಕ್ಷಿಕೆಗಳು
- ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ
- ಮಳೆ ಹಾಗೂ ಮೇಲ್ಛಾವಣಿ ನೀರಿನ ಕೂಯ್ಲು
- ಹವಾಮಾನ ಚತುರ ಕೃಷಿ
- ಸಮಗ್ರ ಪೋಷಕಾಂಶಗಳು, ರೋಗ ಹಾಗೂ ಪೀಡೆ ನಿರ್ವಹಣೆ
- ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆಗಳು
- ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು
- ಮಣ್ಣು ಪರೀಕ್ಷೆಗೆ ಅನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ
- ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು