News

ಸೆ. 9ರಿಂದ ಧಾರವಾಡದಲ್ಲಿ ಕೃಷಿಮೇಳ ಆಯೋಜನೆ

08 August, 2023 6:27 PM IST By: Kalmesh T
Agricultural Fair at Dharwad Agricultural University

Agricultural Fair : ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ 9 ರಿಂದ 12 ರ ವರೆಗೆ ಕೃಷಿಮೇಳ ಹಾಗೂ ಸಿರಿಧಾನ್ಯ ಆಹಾರ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಆಸಕ್ತರು ಭಾಗವಹಿಸಲು ತಿಳಿಸಿದೆ.

ಧಾರವಾಡ : ಧಾರವಾಡ ಕೃಷಿ ವಿಶ್ವವಿದ್ಯಾಲಯ ಸೆಪ್ಟೆಂಬರ್ 9 ರಿಂದ 12 ರ ವರೆಗೆ ಕೃಷಿಮೇಳವನ್ನು ಹಮ್ಮಿಕೊಂಡಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ, ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಕೃಷಿಮೇಳ-2023 ರ ಅಂಗವಾಗಿ ಮಹಿಳಾ ಮತ್ತು ಸಮಿತಿಯಿಂದ ಮಹಿಳೆಯರಿಗಾಗಿ ಸಿರಿಧಾನ್ಯ ಆಧಾರಿತ ಸಿಹಿ ಮತ್ತು ಖಾರಾ ಖಾದ್ಯಗಳ ಸ್ಪರ್ಧೆಯನ್ನು ಆಗಸ್ಟ್ 11 ರಂದು ಬೆಳಿಗ್ಗೆ 10 ಗಂಟೆಗೆ ಆಹಾರ ಮತ್ತು ಪೋಷಣಾ ವಿಭಾಗ, ಸಮುದಾಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.

ಭಾಗವಹಿಸಲಿಚ್ಛಿಸುವ ಮಹಿಳೆಯರು ಸಿರಿಧಾನ್ಯ ಆಧಾರಿತ ಸಿಹಿ ಅಥವಾ ಖಾರಾ ತಿಂಡಿ-ತಿನಿಸಿನೊಂದಿಗೆ, ಅದನ್ನು ತಯಾರಿಸುವ ವಿವರವಾದ ವಿಧಾನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬೇಕು.

ತಿಂಡಿ-ತಿನಿಸುಗಳ ಪೌಷ್ಠಿಕತೆ, ರುಚಿ ಹಾಗೂ ಮಂಡಿಸುವಿಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದು.

ಸ್ಪರ್ಧೆಗೆ ನೊಂದಾಯಿಸಲಿಚ್ಛಿಸುವವರು ಮೊಬೈಲ್ ಸಂಖ್ಯೆ: 9449062812, 9449534836 ಸಂಪರ್ಕಿಸಿ ಆಗಸ್ಟ್ 10 ರೊಳಗಾಗಿ ಹೆಸರುಗಳನ್ನು ನೊಂದಾಯಿಸಬಹುದು.

ಮೊದಲು ನೊಂದಾಯಿಸಿದ 25 ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ. ಸ್ಪರ್ಧೆಯ ವಿಜೇತರಿಗೆ ಕೃಷಿ ಮೇಳ 2023 ರಲ್ಲಿ ಸ್ಮರಣಿಕೆಯೊಂದಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಗುವುದು.

ಸ್ಪರ್ಧೆಗೆ ತಗಲುವ ಎಲ್ಲ ಖರ್ಚು ವೆಚ್ಚವನ್ನು ಸ್ಪರ್ಧಾಳುಗಳಿಗೆ ಭರಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಎಂ ಮತ್ಸ್ಯ ಸಂಪದ ಯೋಜನೆ: ಮೀನುಗಾರರಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ