News

ಬಂಪರ್‌ ನ್ಯೂಸ್‌: ಅಡುಗೆ ಎಣ್ಣೆಯಲ್ಲಿ ಇದೀಗ ಮತ್ತಷ್ಟು ಇಳಿಕೆ..ಲೀಟರ್‌ಗೆ 30 ರೂ ಕಡಿಮೆಯಾಗುವ ಸಾಧ್ಯತೆ

17 July, 2022 11:08 AM IST By: Maltesh
Adani wilmar Gemini Edible oil producers cut prices

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಜುಲೈ 6, 2022 ರಂದು ನಡೆದ ಸಭೆಯಲ್ಲಿ ಖಾದ್ಯ ತೈಲಗಳ MRP ನಲ್ಲಿ 15/-  ರೂ.ಗಳಷ್ಟು ಕಡಿತವನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಖಾದ್ಯ ತೈಲ ಸಂಘಗಳಿಗೆ ನಿರ್ದೇಶನ ನೀಡಿತ್ತು. ಇದರ ಜೊತೆ ಇದು ತಕ್ಷಣದಿಂದ ಜಾರಿಗೆ ಬರುವಂತೆ ಇರಬೇಕು ಎಂದು ಆದೇಶಿಸಿತ್ತು. ಈ ಕುರಿತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.

ಖಾದ್ಯ ತೈಲಗಳ ಬೆಲೆಗಳನ್ನು ತಕ್ಷಣವೇ ಕಡಿಮೆ ಮಾಡಿ ಮತ್ತು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ತಯಾರಕರು ಮತ್ತು ಸಂಸ್ಕರಣಾಗಾರರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. "ತಯಾರಕರು / ಸಂಸ್ಕರಣಾಗಾರರಿಂದ ವಿತರಕರಿಗೆ ಬೆಲೆಯಲ್ಲಿ ಕಡಿತವನ್ನು ಮಾಡಿದಾಗ ಲಾಭವನ್ನು ಉದ್ಯಮದಿಂದ ಗ್ರಾಹಕರಿಗೆ ವರ್ಗಾಯಿಸಬೇಕು ಮತ್ತು ಇಲಾಖೆಗೆ ನಿಯಮಿತವಾಗಿ ಮಾಹಿತಿ ನೀಡಬಹುದು" ಎಂದು ಸಚಿವಾಲಯವು ಹೇಳಿದೆ.

ಪ್ರತಿ ಲೀಟರ್‌ಗೆ 15 ರೂ.ವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಖಾತ್ರಿಪಡಿಸಿಕೊಳ್ಳಲು ಕೇಂದ್ರವು ಖಾದ್ಯ ತೈಲ ಸಂಘಗಳನ್ನು ಕೇಳಿದ ಬೆನ್ನಲ್ಲೇ ಇದರ ಪರಿಣಾಮವಾಗಿ ಗ್ರಾಹಕರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ, ಖಾದ್ಯ ತೈಲಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ಬದಲಾಯಿಸಲಾಗಿತ್ತು. ಇದು ಇನ್ನು ಮುಂದುವರೆದಿದ್ದು ಇನ್ನು ಹಲವು ತೈಲ ಕಂಪನಿಗಳು ಬೆಲೆ ಇಳಿಕೆಯನ್ನು ಮಾಡಿವೆ. ಅದು ಲೀಟರ್‌ಗೆ 30 ರೂಪಾಯಿಯವರೆಗೆ. 

ಹೌದು Adani Wilmar, ಇಮಾಮಿ ಮತ್ತು ಜೆಮಿನಿಯಂತಹ kelಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಗಳನ್ನು ಕಡಿತಗೊಳಿಸಿವೆ 

Fortune ಸೋಯಾಬೀನ್ ಎಣ್ಣೆ 1 ಲೀಟರ್ ಪೌಚ್ ರೂ 195 ರಿಂದ 165 ರೂಗೆ ಕಡಿಮೆಯಾಗಿದೆ

ಇದನ್ನೂ ಓದಿ> ದೇಶಗಳಲ್ಲಿ ಸದ್ದು ಮಾಡ್ತಿದೆ ಅಸ್ಸಾಂನ  Red Rice..! ಏನಿದರ ಸ್ಪೇಷಾಲಿಟಿ..?

Fortune ಸನ್‌ಫ್ಲವರ್ ಆಯಿಲ್ 1 ಲೀಟರ್ ಪೌಚ್ 210 ರೂ.ನಿಂದ 199 ರೂಗೆ ಕಡಿಮೆಯಾಗಿದೆ -

Fortune ಸಾಸಿವೆ ಎಣ್ಣೆ 1 ಲೀಟರ್ ಪೆಟ್ ಬಾಟಲ್ 210 ರೂ.ನಿಂದ  190 ರೂಗೆ ಕಡಿಮೆಯಾಗಿದೆ

Fortune ಕಡಲೆ ಎಣ್ಣೆ 1 ಲೀಟರ್ ಪೌಚ್ 220 ರಿಂದ 210 ರೂಗೆ ಕಡಿಮೆಯಾಗಿದೆ

Fortune ರೈಸ್ ಬ್ರಾನ್ ಆಯಿಲ್ 1 ಲೀಟರ್ ಪೌಚ್ ರೂ 225 ರಿಂದ 210ಗೆ ಇಳಿಕೆಯಾಗಿದೆ

Raag ವನಸ್ಪತಿ 1 ಲೀಟರ್ ಪೌಚ್ ರೂ 205 ರಿಂದ ಬರೋಬ್ಬರಿ 185 ರೂಗೆ ಬಂದಿದೆ.

ದಿಢೀರ್‌ ಬೆಲೆ ಇಳಿಕೆಗೆ ಕಾರಣವೇನು?
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಖಾದ್ಯ ತೈಲಗಳ ಆಮದು ಸುಂಕವನ್ನು ಕಡಿತಗೊಳಿಸಿತ್ತು. ಈ  ಹಿನ್ನೆಲೆಯಲ್ಲಿ ಹಲವಾರು ಖಾದ್ಯ ತೈಲ ಕಂಪನಿಗಳು ಬೆಲೆಯನ್ನು ತಗ್ಗಿಸಿದ್ದವು..  ಕಳೆದ ವಾರ ಬ್ರ್ಯಾಂಡೆಡ್ ತಾಳೆ ಎಣ್ಣೆ (Palm Oil),ಸೂರ್ಯಕಾಂತಿ (Sunflower) ಹಾಗೂ ಸೋಯಾಬಿನ್ ಎಣ್ಣೆ (Soybean Oil) ಬೆಲೆಯಲ್ಲಿ (Price) ಪ್ರತಿ ಲೀಟರ್ ಗೆ 15ರೂ. ಇಳಿಕೆಯಾಗಿದೆ. ತಾಳೆ ಎಣ್ಣೆ ಬೆಲೆ ಪ್ರತಿ ಲೀಟರ್ ಗೆ 7-8ರೂ. ತಗ್ಗಿದೆ. ಇನ್ನು ಸೂರ್ಯಕಾಂತಿ ಎಣ್ಣೆ ದರದಲ್ಲಿ ಕೂಡ ಪ್ರತಿ ಲೀಟರ್ ಗೆ 10-15ರೂ. ಇಳಿಕೆ ಕಂಡಿದೆ. ಇನ್ನು ಸೋಯಾಬಿನ್ ಎಣ್ಣೆ ಬೆಲೆಯಲ್ಲಿ ಕೂಡ 5ರೂ. ಕಡಿಮೆಯಾಗಿದೆ.