ರೈತರು ವರ್ಷವಿಡಿ ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಆದರೆ, ಕಟಾವಿನ ನಂತರ ಮಾರುಕಟ್ಟೆಗಳಲ್ಲಿ ನ್ಯಾಯವಾದ ಬೆಲೆ ಸಿಗದೆ ಒದ್ದಾಡುತ್ತಾರೆ. ಇಂತಹುದೆ ಮತ್ತೊಂದು ಘಟನೆ ನಡೆದಿದೆ.
20 ಲಕ್ಷಕ್ಕೂ ಹೆಚ್ಚು ರೈತರಿಗೆ ಬರಲ್ಲ ಪಿಎಂ ಕಿಸಾನ್ 13 ನೇ ಕಂತಿನ ಹಣ! ಯಾಕೆ ಗೊತ್ತೆ?
ಹೌದು, ಕೋಲಾರದ ಶ್ರೀನಿವಾಸಪುರ ಮೂಲದ ಆನಂದ್ ಎಂಬ ರೈತರಿಗೆ 70 ಸಾವಿರ ನೀಡುವ ಬದಲಾಗಿ ಕೇವಲ 600 ರೂಪಾಯಿ ನೀಡಿ ವಂಚಿಸಿದ ಆರೋಪ ಕೇಳಿಬಂದಿದೆ.
50 ಕೆ.ಜಿ ತೂಗುವ ಒಟ್ಟು 316 ಚೀಲ ಗೆಡ್ಡೆಕೋಸು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗಿತ್ತು. ಒಟ್ಟು ಸೇರಿ 70,000 ರೂಪಾಯಿ ಬೆಲೆ ನಿಗದಿಯಾಗಿತ್ತು.
ಆದರೆ, ಕೇವಲ 600 ರೂಪಾಯಿ ನೀಡುವ ಮೂಲಕ ವಂಚನೆ ಮಾಡಿದ್ದಾರೆ ಎಂದು ರೈತ ಆನಂದ ಅವರು ಆರೋಪ ಮಾಡಿದ್ದಾರೆ.
ಕೀಟನಾಶಕ ಸಿಂಪಡಣೆಗೂ ಬಂತು ಡ್ರೋನ್..! ಚುರುಕುಗೊಂಡ ಕೃಷಿ ಚಟುವಟಿಕೆ
ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಕಮಿಷನ್ ಏಜೆಂಟ್ ಅರುಣ್ ಎಂಬುವರ ಈ ಮೋಸ ಎಸಗಿದ್ದಾರೆ ಎನ್ನಲಾಗಿದೆ. ಅವರ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆ, ಬಿಬಿಎಂಪಿ ಹಾಗೂ ತೋಟಗಾರಿಕಾ ಇಲಾಖೆಗೆ ದೂರು ನೀಡಿದ್ದಾರೆ.
ಕೋಲಾರದ ಶ್ರೀನಿವಾಸಪುರ ಮೂಲದ ಆನಂದ್ ಎಂಬ ರೈತ ತನ್ನ ಜಮೀನಿನಲ್ಲಿ ಬೆಳೆದಿದ್ದ ಗಡ್ಡೆಕೋಸಿಗೆ 1 ಚೀಲಕ್ಕೆ 50 ಕೆಜಿ ಎಂಬಂತೆ 316 ಚೀಲಕ್ಕೆ 70 ಸಾವಿರ ಕೊಡುವುದಕ್ಕೆ ಬದಲಾಗಿ ಕೇವಲ 600 ರೂಪಾಯಿ ನೀಡಿ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ.
ಬಂಗಾರ ಪ್ರಿಯರ ಗಮನಕ್ಕೆ: ದೇಶದಲ್ಲಿ ಕಡಿಮೆಯಾದ ಚಿನ್ನ, ಬೆಳ್ಳಿ ದರ
316 ಚೀಲ ಗಡ್ಡೆಕೋಸಿಗೆ 70 ಸಾವಿರ ರೂ ಕೊಡುವ ಬದಲಾಗಿ ಕೇವಲ 600 ರೂಪಾಯಿ ನೀಡಿ ವಂಚನೆ ಮಾಡಿರುವುದಾಗಿ ರೈತರೊಬ್ಬರು ಆರೋಪಿಸಿದ್ದಾರೆ.