News

Viral Video ಮೇಕೆಗಳಿಗೆ ರೈನ್‌ಕೋಟ್‌ ತೊಡಿಸಿದ ರೈತ..ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

22 November, 2022 3:50 PM IST By: Maltesh
Raincoat goats

ಸಾಮಾನ್ಯವಾಗಿ ಮಳೆಗಾಲದಲ್ಲಿ ನಾವು ನೀವೆಲ್ಲ ರೇನ್‌ಕೊಟ್‌ ತೊಟ್ಟು ಮಳೆಯಲ್ಲಿ ಹೋಗೋದು, ನೆನೆಯೋದು  ಸಹಜ. ಆದರೆ ಇಲ್ಲೊಬ್ಬ ರೈತ ತನಗಷ್ಟೇ ಮಾತ್ರವಲ್ಲದೆ ತನ್ನ ಸಾಕು ಮೇಕೆಗಳಿಗೂ ರೇನ್‌ಕೋಟ್‌ ತೊಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದಾನೆ.

ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ  ತಮ್ಮ ಮೇಕೆಗಳು ದಿನವೀಡಿ ತಿರುಗಾಡಿ ಮೇಯಲು  ತೊಂದರೆ ಆಗಬಾರದು ಎಂದು ರೈತರ ಈ  ವಿನೂತನ ಐಡಿಯಾ ಮಾಡಿದ್ದಾರೆ.

ತಮಿಳುನಾಡಿನ ತಂಜಾವೂರಿನ ಕುಲಮಂಗಲ ಗ್ರಾಮದ ಗಣೇಶನ್  ಎಂಬವವರು ಈ ರೇನ್‌ಕೋಟ್‌ ಅನ್ನು ತಯಾರು ಮಾಡಿದ್ದಾರೆ.

ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಬಿಗ್‌ ನ್ಯೂಸ್‌: ನವೆಂಬರ್‌ 30ರಂದು ಖಾತೆಗೆ ಬರಲಿದೆ ಹಣ

ಗಣೆಶನ್‌ ಅವರಿಗೆ ಪ್ರಾಣಿಗಳೆಂದರೆ ಬಲು ಅಚ್ಚು ಮೆಚ್ಚು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ತಮ್ಮ ಹೊಲದಲ್ಲಿ ಕುರಿಗಳು, ಹಸುಗಳು, ಕೋಳಿ ಸಾಕಾಣಿಕೆಯನ್ನು  ಸಹ ಮಾಡುತ್ತಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತನ್ನ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಹಾಗೂ ಮೇಕೆಗಳು ಮೇಯುವಾಗ ವಿಪರೀತ ಚಳಿಯಿಂದ ನಡುಗುತ್ತಿರುವುದನ್ನು ಅವರು ಗಮನಿಸಿದ್ದಾರೆ.

ಹೀಗಾಗಿ ತನ್ನ ಮೇಕೆಗಳು ಮಳೆಯಲ್ಲಿ ನೆನೆಯಬಾರದೆಂದು ಅವುಗಳಿಗೆ ತಾತ್ಕಾಲಿಕ ಅಕ್ಕಿ ಚೀಲಗಳಿಂದ ರೇನ್ ಕೋಟ್ ಗಳನ್ನು ಮಾಡಿದ್ದಾರೆ. ಪ್ರಾಣಿಗಳ ಬಗ್ಗೆ ಆತನಿಗಿರುವ ಪ್ರೀತಿ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದೆ.

ಶಾಕಿಂಗ್‌ ಸುದ್ದಿ: ಪಿಎಂ ಕಿಸಾನ್‌ ಯೋಜನೆಯಿಂದ ಶೇ 67 ರಷ್ಟು ರೈತರು ಔಟ್‌..!

ಪಂಜಾಬ್‌ನ ರೈತರಿಗೆ ಮೀನು ಸಾಕಾಣಿಕೆಗೆ ಶೇ 40 ರಷ್ಟು ಸಬ್ಸಿಡಿ

ಪಂಜಾಬ್ ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಅವರು ಪಂಜಾಬ್‌ನ  ರೈತರಿಗೆ ಗುಡ್‌ನ್ಯೂಸ್‌ ನೀಡಿದ್ದು, ಮೀನುಗಾರಿಕೆಗೆ ಶೇ.40 ರಷ್ಟು ಸಬ್ಸಿಡಿ ವಿತರಣೆ ಮಾಡೋದಾಗಿ ತಿಳಿಸಿದ್ದಾರೆ. ರೈತರು

ತಮ್ಮ ಆದಾಯವನ್ನು ಹೆಚ್ಚಿಸಲು ಮೀನು ಸಾಕಣೆಯನ್ನು ಉಪ ವ್ಯಾಪಾರವಾಗಿ ತೆಗೆದುಕೊಳ್ಳುವಂತೆ ರೈತರಿಗೆ ಸಲಹೆ ನೀಡಿದ್ದಾರೆ.