News

Fire ರೈತರು ರಸ್ತೆಗೆ ಹಾಕಿದ ಹುಲ್ಲಿನಿಂದ ಕಾರಿಗೆ ಬೆಂಕಿ; ಕಾರು ಭಸ್ಮ!

20 January, 2024 3:25 PM IST By: Hitesh
ಹುಲ್ಲಿನಿಂದ ಕಾರು ಧಗಧಗ

ರೈತರಿಗೆ ನಿತ್ಯದ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡವು ಯೂಟ್ಯೂಬ್‌ನ ಮೂಲಕ ಸುದ್ದಿ ಪ್ರಸಾರ ಮಾಡುತ್ತಿದೆ.

ಇಂದೂ ಸಹ ಹಲವು ಪ್ರಮುಖ ಸುದ್ದಿಗಳಿವೆ. ಅದರಲ್ಲಿ ರೈತರೊಬ್ಬರು ರಸ್ತೆ ಬದಿಗೆ ಹಾಕಿದ ಹುಲ್ಲಿನಿಂದ ಕಾರಿಗೆ ಬೆಂಕಿ ತಗುಲಿರುವುದೂ ಸಹ ಇದೆ.

ಇನ್ನು ಬೇಕಾಬಿಟ್ಟಿ ಕೋಚಿಂಗ್‌ ಸೆಂಟರ್‌ಗಳನ್ನು ನಡೆಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ರೈತರಿಗೆ ಸಾಲ ನೀಡುವ ಬಗ್ಗೆ ಕೃಷಿ ಸಚಿವ ಚಲುವರಾಯ ಸ್ವಾಮಿ ಮಾತನಾಡಿದ್ದಾರೆ. ಈ ಎಲ್ಲ ಸುದ್ದಿಗಳ ಚುಟುಕು ವಿವರ ಇಲ್ಲಿದೆ.  

1. ಕೋಚಿಂಗ್‌ ಸೆಂಟರ್‌ಗಳಿಗೆ ಶಾಕಿಂಗ್‌ ನ್ಯೂಸ್‌

2. ಸುಂಕ ಮಸೂದೆಗೆ ಕರ್ನಾಟಕ ಒಪ್ಪಿಗೆ

3. ಹಳೇ ವಾಹನ ಗುಜರಿಗೆ ಹಾಕಿದರೆ ಸಿಗಲಿದೆ 50 ಸಾವಿರ !

4. ರೈತರಿಗೆ 2 ಕೋಟಿ ರೂ.ವರಗೆ ಸಾಲ: ಸಚಿವ ಚಲುವರಾಯಸ್ವಾಮಿ

5. ತೋಟಗಾರಿಕೆ ಉತ್ಪಾದನೆ ಭರ್ಜರಿ ಹೆಚ್ಚಳ

6. ರಾಜ್ಯ ಮಟ್ಟದಲ್ಲಿ ಬೃಹತ್ ಉದ್ಯೋಗ ಮೇಳ

7. ಕರ್ನಾಟಕದ ವೀಕೆಂಡ್‌ ವೆದರ್‌ ರಿಪೋರ್ಟ್‌

8. ರೈತರು ಹಾಕಿದ ಹುಲ್ಲಿನಿಂದ ಕಾರಿಗೆ ಬೆಂಕಿ; ಕಾರು ಭಸ್ಮ

 ಸುದ್ದಿಗಳ ವಿವರ ಈ ರೀತಿ ಇದೆ.

ಕರ್ನಾಟಕದಿಂದ ಹೊಸ ಮಸೂದೆ, ಏನದು  ?

1. ಕೇಂದ್ರ ಶಿಕ್ಷಣ ಸಚಿವಾಲಯವು ಕೋಚಿಂಗ್‌ ಸೆಂಟರ್‌ಗಳಿಗೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿದೆ.

ಕೋಚಿಂಗ್ ಸೆಂಟರ್‌ಗಳ ನಿಯಂತ್ರಣ-2024 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಹಲವು ನಿರ್ದೇಶನ ಇದರಲ್ಲಿದೆ.

ಯಾವುದೇ ಕೋಚಿಂಗ್ ಸೆಂಟರ್ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಸಿಕೊಳ್ಳುವಂತಿಲ್ಲ ಎನ್ನುವುದು

ಇದರಲ್ಲಿ ಪ್ರಮುಖವಾಗಿದೆ. ಅಲ್ಲದೇ ಮಾಧ್ಯಮಿಕ ಶಾಲಾ ಪರೀಕ್ಷೆ ಮುಗಿದ ನಂತರವಷ್ಟೇ ವಿದ್ಯಾರ್ಥಿಗಳ ದಾಖಲಾತಿ ಮಾಡಬೇಕು.

ಯಾವುದೇ ಸುಳ್ಳು ಮಾಹಿತಿ ನೀಡಬಾರದು. ಪೋಷಕರು ಮತ್ತು ವಿದ್ಯಾರ್ಥಿಗಳನ್ನು, ತಪ್ಪುದಾರಿಗೆಳೆಯುವ ರ್ಯಾಂಕ್‌ಗಳ ಖಾತರಿ

ನೀಡದಂತೆಯೂ ನಿರ್ದೇಶನ ನೀಡಲಾಗಿದೆ. ಅಲ್ಲದೇ ಕೋಚಿಂಗ್ ಸೆಂಟರ್‌ಗಳು, ಪದವಿಗಿಂತ ಕಡಿಮೆ ವಿದ್ಯಾಭ್ಯಾಸ ಮಾಡಿರುವ

ಶಿಕ್ಷಕರನ್ನು ನೇಮಿಸಿಕೊಳ್ಳುವಂತಿಲ್ಲ ಎಂದೂ ಸೂಚಿಸಲಾಗಿದೆ.
-----------------------
2. ರಾಜ್ಯದಲ್ಲಿ ಖಾಸಗಿ ವಾಹನ ಚಾಲಕರು, ನಿರ್ವಾಹಕರು ಮತ್ತು ಕ್ಲೀನರ್‌ಗಳ ಸಾಮಾಜಿಕ ಭದ್ರತೆ ಉದ್ದೇಶದಿಂದ

ರೂಪಿಸಿರುವ ಕರ್ನಾಟಕ ಮೋಟಾರು ಸಾರಿಗೆ ಮತ್ತು  ಕಾರ್ಮಿಕರ ಸಾಮಾಜಿಕ ಭದ್ರತಾ ಹಾಗೂ ಕಲ್ಯಾಣ

ಸುಂಕ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಒಪ್ಪಿಗೆ  ಸೂಚಿಸಿದೆ.
----------------------- 

ಬೆಂಕಿ ಅವಘಡ: ಅರಣ್ಯ ಭೂಮಿ, ಕೃಷಿ ಜಮೀನಿಗೆ ಹಾನಿ

ಹಳೇ ವಾಹನ ಮಾರಾಟ ಮಾಡಿದರೆ, 50 ಸಾವಿರ ರೂ! 

3. ಕರ್ನಾಟಕದಲ್ಲಿ ಹಳೇಯ ವಾಹನ ಸವಾರರಿಗೆ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಕರ್ನಾಟಕದಲ್ಲಿ ನೋಂದಾಣಿ ಮಾಡಿಕೊಂಡಿರುವ

ವಾಹನಗಳ ಸ್ಕ್ರ್ಯಾಪಿಂಗ್ ನೀತಿ 2022ರ ಪರಿಷ್ಕರಣೆಗೆ ಸಚಿವ ಸಂಪುಟ ಅನುಮತಿ ನೀಡಿದೆ. ಪರಿಷ್ಕೃತ ನೀತಿಯ ಅನುಸಾರ ಯಾರಾದರೂ

ತಮ್ಮ ಹಳೇ ವಾಹನಗಳನ್ನು ಗುಜರಿಗೆ ಹಾಕಿದರೆ, ಅಂತಹವರಿಗೆ ಹೊಸ ವಿದ್ಯುತ್ ಚಾಲಿತ ವಾಹನಗಳ ಖರೀದಿ ಮಾಡುವ

ಸಂದರ್ಭದಲ್ಲಿ ಎಕ್ಸ್ ಶೋರೂಂ ಬೆಲೆಯನ್ನು ಆಧರಿಸಿ 1 ಸಾವಿರದಿಂದ 50 ಸಾವಿರ ರೂಪಾಯಿವರೆ ತೆರಿಗೆ ವಿನಾಯಿತಿ ಸಿಗಲಿದೆ.
----------------------

4. ಕೃಷಿಯಲ್ಲಿ ಕೊಯ್ಲು ಮಾಡಿದ ನಂತರದ ಕೆಲಸಗಳಲ್ಲಿ ರೈತರ ಸಬಲೀಕರಣಕ್ಕೆ ರೂಪಿಸಲಾಗಿರುವ ಕೃಷಿ

ಮೂಲಭೂತ ಸೌಕರ್ಯ ನಿಧಿಯ 4 ಸಾವಿರದ 500 ಕೋಟಿ ರೂಪಾಯಿ ಅನುದಾನವನ್ನು ಸಂಪೂರ್ಣ ಬಳಸಿಕೊಳ್ಳಬೇಕು

ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಕೊಯ್ಲೋತ್ತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ

ಯೋಜನೆಗಳಿಗೆ ಗ್ಯಾರಂಟಿ ಇಲ್ಲದೆಯೂ 2 ಕೋಟಿ ರೂಪಾಯಿ ವರಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲು ಅವಕಾಶವಿದೆ.

ಈ ಸೌಲಭ್ಯದ ಅನುಷ್ಠಾನ ಬೇಗ ಆಗಬೇಕು. ಅಲ್ಲದೇ ರೈತರಿಗೆ ಪೂರ್ಣ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
----------------------- 

5. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 2022-23ನೇ ಸಾಲಿನ ವಿವಿಧ ತೋಟಗಾರಿಕಾ ಬೆಳೆಗಳ ಪ್ರದೇಶ

ಮತ್ತು ಉತ್ಪಾದನೆಯ ಮೂರನೇ ಮುಂಗಡ ಅಂದಾಜನ್ನು ಬಿಡುಗಡೆ ಮಾಡಿದೆ.

ಈ ಬಾರಿ ತೋಟಗಾರಿಕೆ ಉತ್ಪಾದನೆಯು ಒಟ್ಟು ಅಂದಾಜು  355.25 ಮಿಲಿಯನ್ ಟನ್‌ಗಳಷ್ಟು ಹೆಚ್ಚಳವಾಗಿದೆ. 

7. 2022-23ರ ಮೂರನೇ ಮುಂಗಡ ಅಂದಾಜಿನ ಪ್ರಕಾರ ಹಣ್ಣುಗಳು, ತರಕಾರಿಗಳು, ತೋಟದ ಬೆಳೆಗಳು,

ಮಸಾಲೆಗಳು, ಹೂವುಗಳು ಮತ್ತು ಜೇನುತುಪ್ಪದ ಉತ್ಪಾದನೆಯು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.  
-----------------------

ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ಸರ್ಕಾರದ ಇದೀಗ ಹೊಸ ಹೆಜ್ಜೆಯನ್ನು ಇರಿಸಿದೆ.

ಕರ್ನಾಟಕದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸುವ ಉದ್ದೇಶದಿಂದ

ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ.
-----------------------
7. ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲ. ರಾಜ್ಯದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ.

ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಕಡೆ ಬೆಳಗಿನ ಜಾವ ದಟ್ಟ ಮಂಜು ಮುಸುಕಿರಲಿದೆ.

ಇನ್ನು ಬಿಸಿಲಿನ ಪ್ರಮಾಣವು 30 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಚಳಿ 17 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
-----------------------
8. ರೈತರು ರಸ್ತೆಯಲ್ಲಿ ಹಾಕಿದ ಹುಲ್ಲಿನಿಂದ ಬೆಂಕಿ ಹೊತ್ತಿಕೊಂಡಿದ್ದು, ಓಮಿನಿ ಕಾರೋಂದು ಸ್ಥಳದಲ್ಲೇ ಸುಟ್ಟು ಕರಕಲಾಗಿದೆ.

ಹಳೆಯ ಘಟನೆಯ ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ಸಂಭಾಷಣೆಯಲ್ಲಿ ರೋಡ್‌ನಲ್ಲಿ ಹುಲ್ಲು ಹಾಕಿದ್ದೇ ತಪ್ಪು ಎನ್ನುವುದು ಇದೆ.
-----------------------