ಭಾರತದಲ್ಲಿ ನಿರುದ್ಯೋಗ ಪ್ರಮಾಣವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗುತ್ತಿರುವುದು ವರದಿ ಆಗುತ್ತಲೇ ಇದೆ.
Siddheshwar Swamiji: ನಡೆದಾಡುವ ದೇವರು “ಸಿದ್ಧೇಶ್ವರ ಸ್ವಾಮೀಜಿ” ಅಸ್ತಂಗತ; ಕಂಬನಿ ಮಿಡಿದ ಕೋಟ್ಯಾಂತರ ಭಕ್ತರು
ಇದಕ್ಕೆ ಆರ್ಥಿಕ ಹಿಂಜರಿತ, ಕೋವಿಡ್ ಸಾಂಕ್ರಾಮಿಕ ಸೋಂಕು ಹರಡಿರುವುದರ ಜೊತೆಗೆ ಅದಕ್ಕೆ ಪೂರಕವಾದ ರೂಪುರೇಷಗಳನ್ನು ತೆಗೆದುಕೊಳ್ಳದೆ ಇರುವುದೂ ಪ್ರಮುಖ ಕಾರಣವಾಗಿದೆ.
ಡಿಸೆಂಬರ್‌ನಲ್ಲಿ ಶೇಕಡಾ 8.3ಕ್ಕೆ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದ್ದು, ಇದು 16 ತಿಂಗಳುಗಳಲ್ಲಿ ಅತ್ಯಧಿಕ ಪ್ರಮಾಣದ ನಿರುದ್ಯೋಗ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವಿಶ್ಲೇಷಿಸಿದೆ.
Kalasa Banduri Nala Project | ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಜಲ ಆಯೋಗ ಸಮ್ಮತಿ
ಇದರಲ್ಲಿ ನಗರ ನಿರುದ್ಯೋಗ ದರವು ಹಿಂದಿನ ತಿಂಗಳಿನ ಶೇಕಡಾ 8.96 ರಿಂದ ಡಿಸೆಂಬರ್‌ನಲ್ಲಿ ಶೇಕಡಾ 10.09 ಕ್ಕೆ ಏರಿದೆ. ಆದರೆ ಗ್ರಾಮೀಣ ನಿರುದ್ಯೋಗ ದರವು ಶೇಕಡಾ 7.55 ರಿಂದ ಶೇಕಡಾ 7.44 ಕ್ಕೆ ಇಳಿಕೆ ಆಗಿರುವುದು ವರದಿ ಆಗಿದೆ.
ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಸಂಗ್ರಹಿಸಿದ ಮತ್ತು ನವೆಂಬರ್‌ನಲ್ಲಿ ಬಿಡುಗಡೆಯಾದ ಪ್ರತ್ಯೇಕ ತ್ರೈಮಾಸಿಕ ಮಾಹಿತಿಯ ಪ್ರಕಾರ ನಿರುದ್ಯೋಗ ದರವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದಲ್ಲಿ 7.6 ಶೇಕಡಾಕ್ಕೆ ಹೋಲಿಸಿದರೆ ಶೇಕಡಾ 7.2 ಕ್ಕೆ ಇಳಿಕೆ ಆಗಿದೆ. ಅಲ್ಲದೇ ಡಿಸೆಂಬರ್‌ನಲ್ಲಿ, ನಿರುದ್ಯೋಗ ದರವು ಹರಿಯಾಣದಲ್ಲಿ ಶೇಕಡಾ 37.4 ಕ್ಕೆ ಏರಿತು. ನಂತರ ರಾಜಸ್ಥಾನದಲ್ಲಿ 28.5 ಶೇಕಡಾ ಮತ್ತು ದೆಹಲಿಯಲ್ಲಿ 20.8 ಶೇಕಡಾ ಆಗಿತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿಅಂಶಗಳು ತಿಳಿಸಿದೆ.
Pm Kisan| ಪಿ.ಎಂ ಕಿಸಾನ್ ಅಪ್ಡೇಟ್: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ
ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರಸ್ತುತ ಈ ಬೆಳವಣಿಗೆ ಮತ್ತು ಕೋವಿಡ್ ಪ್ರಕರಣಗಳ ಹಠಾತ್ ಏರಿಕೆಯಿಂದಾಗಿ ಮುಂಬರುವ ತಿಂಗಳುಗಳಲ್ಲಿ ಯಾವುದೇ ಗಮನಾರ್ಹ ಹೊಸ ಉದ್ಯೋಗಾವಕಾಶಗಳ ಕಂಡು ಬರುವುದಿಲ್ಲ ಎನ್ನಲಾಗಿದೆ.
ದೇಶದಲ್ಲಿ ಕೋವಿಡ್ ಪ್ರಕರಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ನಂತರದಲ್ಲಿ ಹೊಸ ಮಾದರಿಯ ಉದ್ಯೋಗಗಳು ಸೃಷ್ಟಿ ಆಗುವ ನೀರಿಕ್ಷೆ ಇತ್ತು. ಆದರೆ, 2022ರ ಕೊನೆಯ ತಿಂಗಳಲ್ಲಿ ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೋವಿಡ್ ಉಪತಳಿಯಿಂದಾಗಿ ಕೋವಿಡ್ ಸೋಂಕು ಪ್ರಕರಣಗಳು ಹಠಾತ್ ಹೆಚ್ಚಳವಾಗಿದ್ದು, ಹಲವು ಕಂಪನಿಗಳು ಉದ್ಯೋಗಿಗಳ ನೇಮಕದ ಪ್ರಕ್ರಿಯೆಯನ್ನು ಮುಂದೂಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ಸೃಷ್ಟಿಯಾಗಿದ್ದು, ಕಳೆದ ವರ್ಷವಷ್ಟೇ ಆರ್ಥಿಕ ಚೇತರಿಕೆ ಕಾಣಿಸಿಕೊಂಡಿತ್ತು.