ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. 7ನೇ ವೇತನ ಆಯೋಗದ ಅಡಿಯಲ್ಲಿ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಿದ್ದು, 5 ಮತ್ತು 6ನೇ ವೇತನ ಆಯೋಗದ ನೌಕರರಿಗೂ ಸರಕಾರ ಉಡುಗೊರೆ ನೀಡಿದೆ.
ಇದನ್ನೂ ಓದಿರಿ: ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್ ಮಾಡಿ
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ಈ ನೌಕರರ ಡಿಎಯನ್ನು ಶೇ.13ರಷ್ಟು ಹೆಚ್ಚಿಸಲಾಗಿದೆ. ಅಂದರೆ ಈಗ ಈ ನೌಕರರಿಗೂ ಉಳಿದ ಕೇಂದ್ರ ನೌಕರರಿಗೆ ನೀಡುವಂತೆ ತುಟ್ಟಿಭತ್ಯೆ ನೀಡಲಾಗುತ್ತಿದೆ.
ವಾಸ್ತವವಾಗಿ, ಕೇಂದ್ರ ನೌಕರರಲ್ಲಿ ಇಂತಹ ಅನೇಕ ಉದ್ಯೋಗಿಗಳು ಇಲ್ಲಿಯವರೆಗೆ 7 ನೇ ವೇತನ ಆಯೋಗದ ಪ್ರಯೋಜನವನ್ನು ಪಡೆಯುತ್ತಿಲ್ಲ.
ಅಂತಹ ನೌಕರರ ವೇತನವನ್ನು ಹೆಚ್ಚಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ತಿಂಗಳ ನೌಕರರ ಖಾತೆಯಲ್ಲಿ ಹೊಸ ತುಟ್ಟಿಭತ್ಯೆ ಕ್ರೆಡಿಟ್ ಕೂಡ ಪ್ರಾರಂಭವಾಗಿದೆ.
ಅಧಿಕ ಇಳುವರಿ ನೀಡುವ ದಾಳಿಂಬೆಯ ಪ್ರಮುಖ ತಳಿಗಳು..
ಉತ್ತಮ ಆರೋಗ್ಯಕ್ಕೆ ವರದಾನ ಡ್ರ್ಯಾಗನ್ ಹಣ್ಣು! ಇಲ್ಲಿದೆ ಡ್ರ್ಯಾಗನ್ ಹಣ್ಣಿನ ಮಾಹಿತಿ…
ಸಚಿವಾಲಯದ ನಿರ್ಧಾರ
ಹಣಕಾಸು ಸಚಿವಾಲಯದ ಪ್ರಕಾರ, '5 ನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ನೌಕರರ ಡಿಎ (DA) 381 ಪ್ರತಿಶತಕ್ಕೆ ಏರುತ್ತದೆ.
ಆದರೆ 6 ನೇ ವೇತನ ಆಯೋಗದ ಅಡಿಯಲ್ಲಿ ಕೆಲಸ ಮಾಡುವ ನೌಕರರ ಡಿಎಯನ್ನು 196 ರಿಂದ ಶೇಕಡಾ 203 ಕ್ಕೆ ಹೆಚ್ಚಿಸಲಾಗಿದೆ.
ಅಂದರೆ ಶೇ.7ರಷ್ಟು ಏರಿಕೆಯಾಗಿದೆ. ಈ ಉದ್ಯೋಗಿಗಳಿಗೆ ಹೆಚ್ಚಿದ ಡಿಎ ಪ್ರಯೋಜನವನ್ನು ಜನವರಿ 2022 ರಿಂದ ಜಾರಿಗೆ ತರಲಾಗಿದೆ. ಈ ನೌಕರರಿಗೂ 3 ತಿಂಗಳ ಬಾಕಿ ವೇತನ ನೀಡಲಾಗುತ್ತಿದೆ.
3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?
ಇಲ್ಲಿಯವರೆಗೆ ಈ ಉದ್ಯೋಗಿಗಳು 7 ನೇ ವೇತನ ಆಯೋಗದ ಪ್ರಯೋಜನವನ್ನು ಪಡೆಯುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಕೇಂದ್ರ ಇಲಾಖೆಗಳಲ್ಲಿ ಅಥವಾ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ನೌಕರರನ್ನು ಇನ್ನೂ 7ನೇ ವೇತನ ಆಯೋಗಕ್ಕೆ ಸೇರಿಸಿಲ್ಲ.
ಆದರೆ, ಹಣಕಾಸು ಸಚಿವಾಲಯದ ಈ ಘೋಷಣೆಯ ನಂತರ, 5 ಮತ್ತು 6 ನೇ ವೇತನ ಆಯೋಗಗಳ ಶಿಫಾರಸುಗಳ ಅಡಿಯಲ್ಲಿ ಕೆಲಸ ಮಾಡುವ ಈ ನೌಕರರು 7 ರಿಂದ 13 ರಷ್ಟು ಡಿಎ ಲಾಭವನ್ನು ಏಕರೂಪದಲ್ಲಿ ಪಡೆಯಲು ಪ್ರಾರಂಭಿಸಿದ್ದಾರೆ.
ಈ ಘೋಷಣೆಯೊಂದಿಗೆ ಉದ್ಯೋಗಿಗಳ ಸಂಬಳದಲ್ಲೂ ಬಂಪರ್ ಹೆಚ್ಚಳವಾಗಿದೆ.