News

ಬಿಗ್‌ ಶಾಕ್:ಕೇಂದ್ರ ನೌಕರರ DA ಹೆಚ್ಚಳಕ್ಕೆ ಬೀಳಲಿದೆ ಬ್ರೇಕ್‌..ಕಾರಣವೇನು..?

23 April, 2022 12:08 PM IST By: Maltesh

7ನೇ ವೇತನ ಆಯೋಗದ(7th Pay Commission): ಕೇಂದ್ರ ನೌಕರರಿಗೆ ಕೊನೆಯ ದಿನಗಳಲ್ಲಿ ಸರ್ಕಾರ ಡಿಎ ಹೆಚ್ಚಳದ  ಬಂಪರ್‌ ಗಿಫ್ಟ್‌ ನೀಡಿದೆ. ಈ ಘೋಷಣೆಯೊಂದಿಗೆ ಸರಕಾರವು ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಿದೆ. ಡಿಎ ಬಾಕಿಯನ್ನು ಹಣಕಾಸು ಸಚಿವಾಲಯವೂ ಅನುಮೋದಿಸಿದೆ. ಈಗ ನೌಕರರು ಜುಲೈನಲ್ಲಿ ಡಿಎ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಆದರೆ ಈ ನಡುವೆ ಕೆಲವೊಂದು ಕಾರಣಗಳಿಂದಾಗಿ DA ಹೆಚ್ಚಳದಲ್ಲಿ ಬ್ರೇಕ್‌ ಬೀಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ರೈಲ್ವೆ ನೇಮಕಾತಿ: 147 ಹುದ್ದೆಗಳ ಭರ್ತಿ!

LIC BIG Scheme! Invest ₹ 29 ಪಡೆಯಿರಿ ₹4 ಲಕ್ಷ!

ಜುಲೈನಲ್ಲಿ ಡಿಎ ಹೆಚ್ಚಳವನ್ನು ನಿರೀಕ್ಷಿಸಲಾಗುವುದಿಲ್ಲ

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಮೊದಲ ಪರಿಷ್ಕರಣೆ ಜನವರಿಯಿಂದ ಜೂನ್ ವರೆಗೆ. ಎರಡನೆಯದು ಜುಲೈನಿಂದ ಡಿಸೆಂಬರ್ ವರೆಗೆ. ಮಾರ್ಚ್‌ನಲ್ಲಿ ಮೊದಲ ಡಿಎ ಪರಿಷ್ಕರಣೆ ಘೋಷಿಸಲಾಗಿದೆ. ಜುಲೈನಲ್ಲಿ ಮತ್ತೆ ಪರಿಷ್ಕರಿಸಲಾಗುವುದು. ಈ ಮಧ್ಯೆ ತುಟ್ಟಿಭತ್ಯೆಯ ಅಂಕಿ ಅಂಶಗಳು ಬರಲಾರಂಭಿಸಿವೆ. ಇಲ್ಲಿಯವರೆಗೆ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಮುಂದಿನ ತುಟ್ಟಿಭತ್ಯೆ ಹೆಚ್ಚಳದ ಸಾಧ್ಯತೆ ಕಡಿಮೆ ಎಂದು ತೋರುತ್ತದೆ. ಈಗಷ್ಟೇ ಜನವರಿ ಮತ್ತು ಫೆಬ್ರವರಿ ಎಐಸಿಪಿಐ ಸೂಚ್ಯಂಕದ ಮಾಹಿತಿ ಬಂದಿದೆ. ಡಿಸೆಂಬರ್ 2021 ಕ್ಕೆ ಹೋಲಿಸಿದರೆ ಇವು ಕುಸಿತವನ್ನು ತೋರಿಸುತ್ತಿವೆ.

ಹೌದು ಜನವರಿ ಮತ್ತು ಫೆಬ್ರವರಿ ಎಐಸಿಪಿಐ ಸೂಚ್ಯಂಕದ ಮಾಹಿತಿ ಬಂದಿದ್ದು. ಡಿಸೆಂಬರ್ 2021 ಕ್ಕೆ ಹೋಲಿಸಿದರೆ ಇವು ಕುಸಿತ ಕಂಡು ಬರುತ್ತಿದೆ.

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ಈ ತಪ್ಪುಗಳನ್ನ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗೋದು ಫಿಕ್ಸ್..!

ಎಐಸಿಪಿಐ ಅಂಕಿ ಅಂಶ ಎಷ್ಟು ಕುಸಿದಿದೆ?

ಡಿಸೆಂಬರ್ 2021 ರಲ್ಲಿ, ಎಐಸಿಪಿಐ ಅಂಕಿ ಅಂಶವು 125.4 ರಷ್ಟಿತ್ತು. ಜನವರಿ 2022 ರಲ್ಲಿ, ಇದು 0.3 ಪಾಯಿಂಟ್‌ಗಳಿಂದ 125.1 ಕ್ಕೆ ಇಳಿದಿದೆ. ಇದಾದ ನಂತರ ಫೆಬ್ರುವರಿಯಲ್ಲಿಯೂ 0.1 ಅಂಕಗಳ ಕುಸಿತ ಕಂಡಿದೆ.ಸತತ ಎರಡು ತಿಂಗಳ ಕುಸಿತದಿಂದಾಗಿ ಜುಲೈನಲ್ಲಿ ತುಟ್ಟಿಭತ್ಯೆ ಹೆಚ್ಚಳವಾಗಬಹುದೆಂಬ ಆತಂಕ ಎದುರಾಗಿದೆ. ಈ ಅಂಕಿ ಅಂಶವು ಇದಕ್ಕಿಂತ ಕಡಿಮೆಯಾದರೆ, ಡಿಎ ಹೆಚ್ಚಳವಾಗುವುದಿಲ್ಲ. ಡಿಎ 124ಕ್ಕಿಂತ ಕಡಿಮೆಯಾದರೂ ಸ್ಥಿರವಾಗಿರಬಹುದು.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

ಈ ಕಂಪನಿಯಲ್ಲಿ ತೂಕ ಇಳಿಸಿಕೊಂಡ್ರೆ ಅರ್ಧ ತಿಂಗಳ ಸಂಬಳ ಬೋನಸ್‌..!

ಎಐಸಿಪಿಐ ಅಂಕಿಅಂಶಗಳನ್ನು ಈ ರೀತಿ ನಿರ್ಧರಿಸಲಾಗುತ್ತದೆ

ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಅಂಕಿಅಂಶಗಳನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ದೇಶದ 88 ಕೈಗಾರಿಕಾ ಪ್ರಮುಖ ಕೇಂದ್ರಗಳಲ್ಲಿ ನೆಲೆಗೊಂಡಿರುವ 317 ಮಾರುಕಟ್ಟೆಗಳಿಂದ ಸಂಗ್ರಹಿಸಲಾದ ಚಿಲ್ಲರೆ ಬೆಲೆಗಳ ಆಧಾರದ ಮೇಲೆ ನಿರ್ಧರಿಸುತ್ತದೆ. 88 ಕೇಂದ್ರಗಳಿಗೆ ಮತ್ತು ಇಡೀ ದೇಶಕ್ಕೆ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. AICPI ಯ ಈ ಡೇಟಾವನ್ನು ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು ಬಿಡುಗಡೆ ಮಾಡಲಾಗುತ್ತದೆ.