News

“ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್”- ಕಂದಾಯ ಸಚಿವ ಆರ್.ಅಶೋಕ್

26 April, 2022 9:40 AM IST By: Kalmesh T
“543 acres of land given for Nice project back” - Revenue Minister R. Ashok

ನಿಗದಿತ ಅವಧಿಯಲ್ಲಿ ಬಿಎಂಐಸಿ (BMIC) ಯೋಜನೆಯನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ನೈಸ್ ಯೋಜನೆಗೆ ನೀಡಲಾಗಿದ್ದ 543 ಎಕರೆ ಹೆಚ್ಚುವರಿ ಭೂಮಿಯನ್ನು ಹಿಂಪಡೆಯುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಉಪಸಮಿತಿ ತೆಗೆದುಕೊಂಡಿದೆ.

ಕಂದಾಯ ಸಚಿವ ಆರ್.ಅಶೋಕ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಎನ್.ರವಿಕುಮಾರ್ ನೇತೃತ್ವದ ಉಪಸಮಿತಿಯು ಸಭೆ ನಡೆಸಿ ಯೋಜನೆಗೆ ನೀಡಿದ್ದ 543 ಎಕರೆ ಹೆಚ್ಚುವರಿ ಭೂಮಿಯನ್ನು ಪುನಃ ಸರ್ಕಾರ ವಶಕ್ಕೆ ಪಡೆಯುವ ನಿರ್ಧಾರವನ್ನು ತೆಗೆದುಕೊಂಡಿತು.

ಸರ್ಕಾರದಿಂದ ಹೆಚ್ಚುವರಿಯಾಗಿ ಭೂಮಿ ಪಡೆದು ನಿಗದಿತ ಅವಧಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸಿಲ್ಲ. ಹೀಗಾಗಿ ನಾವು ಭೂಮಿಯನ್ನು ವಾಪಸ್ ಪಡೆಯುವ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಇದನ್ನೂ ಓದಿರಿ:

“ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ”- ಮಾಜಿ ಸಿಎಂ ಯಡಿಯೂರಪ್ಪ!

ರಸಗೊಬ್ಬರ ಕೊರತೆ ಇಲ್ಲ; 4 ಸಾವಿರ ಮೆಟ್ರಿಕ್‌ ಟನ್‌ಗೂ ಅಧಿಕ ರಸಗೊಬ್ಬರ ದಾಸ್ತಾನಿಗೆ-ಬಿ.ಸಿ. ಪಾಟೀಲ್‌

ನೈಸ್ ಕಂಪನಿಯು ಬಿಎಂಐಸಿ (BMIC) ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿಲ್ಲ. ಕಾಂಕ್ರೀಟ್ ರಸ್ತೆ, ಮೇಲ್ಸೇತುವೆ ಮಾಡಬೇಕಿತ್ತು. ಅದಾವುದನ್ನೂ ಸರಿಯಾಗಿ ಮಾಡದೆ ಬಹಳಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಆಕ್ಷೇಪಿಸಿದರು. ಹಿಂದಿನ ಸರ್ಕಾರ ಹೆಚ್ಚುವರಿ ಭೂಮಿಯನ್ನು ಕೊಟ್ಟಿತ್ತು. ಆದರೆ ಯೋಜನೆಯು ಪೂರ್ಣಗೊಳ್ಳಲಿಲ್ಲ. ಸರ್ಕಾರದ ಷರತ್ತುಗಳನ್ನು ಸಹ ಪಾಲನೆ ಮಾಡಿಲ್ಲ. ಈ ಯೋಜನೆಯಿಂದ ಬೆಂಗಳೂರಿನ ಜನತೆಗೆ ಯಾವ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್ಚುವರಿಯಾಗಿ ನೀಡಿದ್ದ ಭೂಮಿಯನ್ನು ವಾಪಸ್ ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಏನೆಲ್ಲ ತಪ್ಪುಗಳು ಆಗಿವೆ ಎಂಬುದರ ಕುರಿತು ವಿಸ್ತೃತ ಚರ್ಚೆಯಾಗಿದೆ. ಅಕ್ಟೋಬರ್ ಇಲ್ಲವೇ ನವೆಂಬರ್ ತಿಂಗಳೊಳಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದರು. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಜೆಡಿಎಸ್ ನೈಸ್ ಯೋಜನೆಗೆ ಎಲ್ಲಾ ರೀತಿಯಲ್ಲೂ ಅನುಮತಿ ಕೊಟ್ಟಿದೆ. ಯೋಜನೆಗೆ ಅನುಮತಿ ನೀಡಿದಾಗ ಜನತಾದಳ ಸರ್ಕಾರ ಅಧಿಕಾರದಲ್ಲಿತ್ತು. ನೈಸ್ ಯೋಜನೆಯ ಪಿತಾಮಹ ಯಾರು ಎಂದು ಪ್ರಶ್ನಿಸಿದರು.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್‌ ಸೂಚನೆ

ಕರ್ನಾಟಕದಲ್ಲಿ ಕೇಜ್ರಿವಾಲ್ ಅಲೆ! ಇಲ್ಲೂ ಸೃಷ್ಟಿಸಲಿದ್ದಾರಾ ಆಮ್ ಆದ್ಮಿ ಪಾರ್ಟಿಯ ನೆಲೆ ?

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಅನುಮತಿ ನೀಡಿದ್ದರು. ನಂತರ ಬಂದ ಕಾಂಗ್ರೆಸ್ ಸರ್ಕಾರ ಒಪ್ಪಂದ ಮಾಡಿಕೊಂಡಿತು. ಇದರಲ್ಲಿ ಕಾಂಗ್ರೆಸ್-ಜೆಡಿಎಸ್ ಪಾಲಿದೆ ಹೊರತು ಬಿಜೆಪಿಯದ್ದಲ್ಲ ಎಂದು ಸ್ಪಷ್ಟಪಡಿಸಿದರು. ಈ ಯೋಜನೆಯ ಮೂಲಪುರುಷರು ಕಾಂಗ್ರೆಸ್-ಜೆಡಿಎಸ್ ನಾಯಕರು. ಇವರಿಬ್ಬರ ಮ್ಯಾಚ್ ಫಿಕ್ಸಿಂಗ್ನಿಂದ ನೈಸ್ ಯೋಜನೆ ಆರಂಭವಾಯಿತು. ಮಾಜಿ ಸಿಎಂ ಕುಮಾರಸ್ವಾಮಿ ಮಾಡಿರುವ ಆರೋಪಗಳು ಸುಳ್ಳು.

ನಮ್ಮದೇ ಭೂಮಿಯನ್ನು ನೈಸ್ ಯೋಜನೆಗೆ ಕೊಟ್ಟು ಹೊಡೆಸಿಕೊಳ್ಳುವಂತಾಗಿದೆ. ಸರ್ಕಾರದ ಭೂಮಿಯನ್ನು ನೈಸ್ನವರು ಅನುಭವಿಸುತ್ತಿದ್ದಾರೆ. ಈ ಆದೇಶದ ಕಾರಣ ಸರ್ಕಾರ 100 ಕೋಟಿ ಕೊಡುವಂತಾಗಿದೆ. ಮೆಟ್ರೋ ಯೋಜನೆಗೂ ಅಡ್ಡಿಯಾಗಿದೆ ಎಂದು ಹೇಳಿದರು. ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಗೆದಷ್ಟು, ಮೊಗೆದಷ್ಟು ಅಕ್ರಮ ಬಯಲಿಗೆ ಬರುತ್ತಿದೆ. ಈ ಅಕ್ರಮದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳೇ ಇವೆ.

ಏಪ್ರಿಲ್ 25-30 ರವರೆಗೆ 'ಆಜಾದಿ ಕಾ ಅಮೃತ್ ಮಹೋತ್ಸವ'; 'ಕಿಸಾನ್ ಭಾಗಿದರಿ, ಪ್ರಾಥಮಿಕ ಹಮಾರಿ' ಅಭಿಯಾನ!

NITI ಆಯೋಗ್: ಏಪ್ರಿಲ್ 25 ರಂದು 'ನವೀನ ಕೃಷಿ' ಕುರಿತು ಕಾರ್ಯಾಗಾರ!

ಪೊಲಿಸ್ ಅಧಿಕಾರಿಯಾಗಿ ಬರುವವರು ನಿಸ್ಪಕ್ಷಪಾತವಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ, ಹೀಗೆ ಆಯ್ಕೆಯಾಗುವವರು ಅಕ್ರಮ ನಡೆಸದೆ ಇರುತ್ತಾರಾ ? ಇದರ ಸತ್ಯಾಸತ್ಯತೆ ಹೊರಬರಬೇಕಿದೆ ಎಂದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದಾರೆ.

ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ವಿಸ್ತೃತ ತನಿಖೆ ನಡೆಸುವಂತೆ ಹೇಳಿದ್ದಾರೆ. ತನಿಖಾಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಬೇರೆ ಯಾವುದೇ ಸಿಎಂ ಆಗಿದ್ದರೂ ಸೂಕ್ತ ತನಿಖೆ ಆಗುತ್ತಿರಲಿಲ್ಲ ಎಂದು ಎಂದು ಹೇಳಿದರು.

PM ಜನೌಷಧಿ ಕೇಂದ್ರಗಳನ್ನು ತೆರೆಯಲು ಆನ್‌ಲೈನ್ ಅರ್ಜಿ ಆಹ್ವಾನ ! ಈಗಲೇ Apply ಮಾಡಿ

Central Institute of Fisheries Education : 15ನೇ ಘಟಿಕೋತ್ಸವ ಆಚರಣೆ