News

Shocking: ರೈತನ ಹೊಲದಲ್ಲಿ ಬರೋಬ್ಬರಿ 4 ಸಾವಿರ ವರ್ಷ ಹಳೆಯ ಆಯುಧಗಳು ಪತ್ತೆ..!

27 June, 2022 12:05 PM IST By: Kalmesh T
4000 year old weapons found in farmer's yard

ಇಲ್ಲೊಬ್ಬ ರೈತನಿಗೆ ಹೊಲದಲ್ಲಿ ಉಳುಮೆ ಮಾಡುವಾಗ ಬರೋಬ್ಬರಿ 4 ಸಾವಿರ ವರ್ಷ ಹಳೆಯ ಪುರಾತನ ಕಾಲದ ಆಯುಧಗಳು ದೊರೆತಿವೆ. ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ.

ಇದನ್ನೂ ಓದಿರಿ:  ವಿಶ್ವದಾದ್ಯಂತ ಸದ್ದು ಮಾಡುತ್ತಿದೆ ಬರೋಬ್ಬರಿ 19 ಇಂಚಿನ ಅತಿ ಉದ್ದದ ಕಿವಿಯುಳ್ಳ ಈ ಮೇಕೆ! ಅಚ್ಚರಿಯಾದರೂ ಇದು ಸತ್ಯ..

ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಹೊಲ ನೆಲಸಮ ಮಾಡುತ್ತಿದ್ದ ವೇಳೆ ರೈತರೊಬ್ಬರಿಗೆ ಸಾವಿರಾರು ವರ್ಷಗಳಷ್ಟು ಹಳೆಯ ಆಯುಧಗಳು ಸಿಕ್ಕಿವೆ.  ಕತ್ತಿಗಳು, ಚಾಕುಗಳು, ತ್ರಿಶೂಲಗಳು ಮತ್ತು ಈಟಿಗಳು ಇಲ್ಲಿ ಸಿಕ್ಕಿವೆ. ಕೂಡಲೇ ಈ ವಿಚಾರವನ್ನು ಸ್ಥಳೀಯ ಆಡಳಿತಕ್ಕೆ ತಿಳಿಸಲಾಗಿದೆ.

ನಂತರ ಸ್ಥಳೀಯ ಪೊಲೀಸರು ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶಸ್ತ್ರಾಸ್ತ್ರಗಳು ಪತ್ತೆಯಾದ ಸ್ಥಳವನ್ನು ಸೀಲ್ ಮಾಡಿದ್ದಾರೆ. ಇಲ್ಲಿ ಸುಮಾರು 39 ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ.

ಮೈನ್‌ಪುರಿ ಜಿಲ್ಲೆ ತಹಸ್ಲಿ ಕುರವಲಿ ಪ್ರದೇಶದ (Tahasli Kuravali area) ಗಣೇಶಪುರ ಗ್ರಾಮದಲ್ಲಿ (Ganeshpur village) ಈ ಪುರಾತನ ವಸ್ತುಗಳು ಪತ್ತೆಯಾಗಿವೆ.

ರೈತ ಬಹದ್ದೂರ್ ಸಿಂಗ್ ಫೌಜಿ (Bahadur Singh Fauji) ಎಂಬುವವರು ತಮ್ಮ ಜಮೀನಿನಲ್ಲಿ ಭೂಮಿಯನ್ನು ಕೃಷಿ ಕಾರ್ಯಕ್ಕಾಗಿ ಉಳುಮೆ ಮಾಡುತ್ತಿದ್ದಾಗ ಈ ಆಯುಧಗಳು ಪತ್ತೆಯಾಗಿವೆ.

ಬರೋಬ್ಬರಿ 300 ಕೆ.ಜಿ ತೂಕ, 13 ಅಡಿ ಉದ್ದದ ವಿಶ್ವದ ಅತಿ ದೊಡ್ಡ ಮೀನು ಪತ್ತೆ..! ಏನಿದರ ವಿಶೇಷ ಗೊತ್ತೆ?

ಉಳುಮೆ ಮಾಡುತ್ತಿದ್ದಾಗ ಮಣ್ಣಿನಲ್ಲಿ ಸುತ್ತಿದ ಆಯುಧಗಳು ನೆಲದಿಂದ ಹೊರಬರಲು ಪ್ರಾರಂಭಿಸಿದವು. ಮತ್ತಷ್ಟು ಉತ್ಖನನ ನಡೆಸಿದಾಗ ಒಟ್ಟು 39 ಲೋಹದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.

ಪ್ರಾರಂಭದಲ್ಲಿ ರೈತ ಬಹದ್ದೂರ್ ಸಿಂಗ್ ಈ ಆಯುಧಗಳನ್ನು ಬಂಗಾರ ಅಥವಾ ಬೆಳ್ಳಿಯ ವಸ್ತುಗಳು ಎಂದು ಭಾವಿಸಿ ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದ.

ಆದರೆ ಗದ್ದೆಯಲ್ಲಿ ಆಯುಧಗಳು ಸಿಕ್ಕಿದ ಸುದ್ದಿ ಬೆಂಕಿಯಂತೆ ಗ್ರಾಮದಾದ್ಯಂತ ಹರಡಿದ್ದು, ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಎರಡು ಕಡೆಯಿಂದ ಮಾಹಿತಿ ಸಿಕ್ಕಿತ್ತು.

ನಂತರ ಪೊಲೀಸರು ರೈತನ ಮನೆಗೆ ಆಗಮಿಸಿ ಎಲ್ಲಾ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ  ಶಸ್ತ್ರಾಸ್ತ್ರಗಳು ಪತ್ತೆಯಾದ ಸ್ಥಳವನ್ನು ಸೀಲ್ ಮಾಡಲಾಗಿದೆ.

ಬರೋಬ್ಬರಿ 46 ವರ್ಷಗಳಿಂದ ತೇಲುತ್ತಿದ್ದ ಹಾಂಗ್ ಕಾಂಗ್ ನ ಪ್ರಸಿದ್ಧ “ಜಂಬೋ ಪ್ಲೋಟಿಂಗ್ ರೆಸ್ಟೋರೆಂಟ್” ಮುಳುಗಡೆ!

ಈ ಆಯುಧಗಳನ್ನು ನೋಡುತ್ತಿದ್ದಂತೆ ಹಲವು ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಇದು ಯಾರ ಕಾಲದ ಆಯುಧಗಳಾಗಿರಬಹುದು ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. 

ಕೆಲವು ತಜ್ಞರು ಈ ಆಯುಧಗಳು ದ್ವಾರಕಾ ಯುಗಕ್ಕೂ ಹಿಂದಿನವು ಎಂದು ವಿವರಿಸುತ್ತಿದ್ದಾರೆ. ಈ ಆಯುಧಗಳು 4000 ವರ್ಷಗಳಷ್ಟು ಹಳೆಯವು ಎಂದು ನಂಬಲಾಗಿದೆ.

ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ!