News

ರೈಲಿನಲ್ಲಿ 123 ಮಹಿಳೆಯರ ಹೆರಿಗೆ: RPF ಸಿಬ್ಬಂದಿ ಸಹಾಯ

06 January, 2023 9:00 PM IST By: Hitesh
123 women give birth in train: RPF personnel help

ಭಾರತೀಯ ರೈಲ್ವೆಯು ಮಹತ್ವದ ವಿಷಯವೊಂದಕ್ಕೆ ಸುದ್ದಿಯಲ್ಲಿದೆ. ಅದೇ ಗರ್ಭಿಣಿಯರ ಹೆರಿಗೆ ಸಂದರ್ಭದಲ್ಲಿ ನೆರವಾಗಿರುವುದು.

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ 

2022ರಲ್ಲಿ ಭಾರತೀಯ ರೈಲ್ವೆಯ ಮಹಿಳಾ ಆರ್‌ಪಿಎಫ್ ಸಿಬ್ಬಂದಿ ರೈಲ್ವೆಯಲ್ಲಿ ತಮ್ಮ ಕರ್ತವ್ಯದ ಸಮಯದಲ್ಲಿ ಮಾನವೀಯತೆ ಮೆರೆದಿದ್ದಾರೆ. ಸಿಬ್ಬಂದಿಯು ಕಳೆದ ವರ್ಷ ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡ 175ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸಹಾಯ ಮಾಡಿದ್ದಾರೆ.

ಮಹಿಳಾ ಆರ್‌ಪಿಎಫ್ ಸಿಬ್ಬಂದಿ ಪ್ರಯಾಣ ಮಾಡುವಾಗ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡ 123 ಗರ್ಭಿಣಿ ಮಹಿಳಾ ಪ್ರಯಾಣಿಕರಿಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.  2022 ರಲ್ಲಿ ಆರ್‌ಪಿಎಫ್ ಮಹಿಳಾ ಸಿಬ್ಬಂದಿ ನೀಡಿದ ನೆರವು ನೀಡಿದ ಆ ಎಲ್ಲಾ ಮಹಿಳೆಯರು ಮತ್ತು ಅವರ ಮಕ್ಕಳು ಸುರಕ್ಷಿತವಾಗಿದ್ದಾರೆ. 62 ಗರ್ಭಿಣಿ ಮಹಿಳೆಯರು ರೈಲಿಗಾಗಿ ನಿಲ್ದಾಣದಲ್ಲಿ ಕುಳಿತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರಿಗೂ ಸಹಾಯ ಮಾಡಲಾಗಿದೆ.

ರೈಲಿನಲ್ಲಿ ಪ್ರಯಾಣಿಸುವಾಗ ಅಥವಾ ರೈಲಿಗಾಗಿ ರೈಲ್ವೇ ಆವರಣದಲ್ಲಿ ಕಾಯುತ್ತಿರುವಾಗ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡರೆ ಗರ್ಭಿಣಿಯರಿಗೆ ಸಹಾಯ ಮಾಡಲು ಭಾರತೀಯ ರೈಲೆ ಇಲಾಖೆಯು ಆಪರೇಷನ್ ಮಾತೃಶಕ್ತಿ ಎಂಬ ಕೇಂದ್ರವನ್ನು ಪ್ರಾರಂಭಿಸಿದೆ. 

ATM ಹಣ ನಿರಾಕರಿಸಿದ HDFC ಬ್ಯಾಂಕ್‌ಗೆ 2. 24 ಲಕ್ಷ ಭಾರೀ ದಂಡ! 

ವಿವಿಧೆಡೆ ರೈಲು ಸಂಚಾರ ಸ್ಥಗಿತ

ಭಾರತೀಯ ರೈಲ್ವೆಯು ಗುರುವಾರ ದೇಶಾದ್ಯಂತ 293 ರೈಲುಗಳನ್ನು ರದ್ದುಗೊಳಿಸಿದೆ. ದೇಶದ ಹಲವು ಭಾಗಗಳಲ್ಲಿ ದಟ್ಟವಾದ ಮಂಜಿನ ಕಾರಣ ಮತ್ತು ದುರಸ್ತಿ ಹಾಗೂ ನಿರ್ವಹಣೆ ಮಾಡುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇಂದು ಹಲವು ರೈಲುಗಳನ್ನು ರದ್ದುಗೊಳಿಸಿದೆ. ಅಲ್ಲದೆ, ರೈಲ್ವೆ ಇಲಾಖೆ ಇಂದು 40 ರೈಲುಗಳ ಮಾರ್ಗವನ್ನು ಕಡಿತಗೊಳಿಸಿದೆ. ಇದರ ಜತೆಗೆ 14 ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಾಣಿಕೆ ಮಾಡಲಾಗಿದೆ.

86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಸಿದ್ಧತೆ!

ಆನ್‌ಲೈನ್ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ತಮ್ಮ ಮೂಲ ಅಕೌಂಟ್‌ನಲ್ಲಿ ಪೂರ್ಣ ಮರುಪಾವತಿ ಪಡೆಯುತ್ತಾರೆ ಮತ್ತು ಕೌಂಟರ್ ಟಿಕೆಟ್‌ಗಳನ್ನು ಹೊಂದಿರುವವರು ಮರುಪಾವತಿ ಪಡೆಯಲು ರಿಸರ್ವೇಶನ್‌ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ

ರಾಜ್ಯದಲ್ಲಿ ಅರಸೀಕೆರೆಯಿಂದ ಹುಬ್ಬಳ್ಳಿಗೆ ಬೆಳಗ್ಗೆ 5: 45ಕ್ಕೆ ಹೊರಡಬೇಕಿದ್ದ ರೈಲು ಸಂಖ್ಯೆ 16213  ರದ್ದಾಗಿದೆ. ಜತೆಗೆ, ಯಶೌಂತಪುರ ಜಂಕ್ಷನ್‌ನಿಂದ ವಾಸ್ಕೋ ಡ ಗಾಮಾಗೆ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ 17309 ಎಕ್ಸ್‌ಪ್ರೆಸ್‌ ರೈಲು ಗಾಡಿ ಸಹ ರದ್ದಾಗಿದೆ. ಅಲ್ಲದೆ, ವಾಸ್ಕೋ ಡ ಗಾಮಾದಿಂದ ಯಶವಂತಪುರಕ್ಕೆ ರಾತ್ರಿ 10 ಗಂಟೆ 55 ನಿಮಿಷಕ್ಕೆ ಹೊರಡಬೇಕಿದ್ದ ರೈಲು ಸಂಖ್ಯೆ 17310 ಸಹ ರದ್ದಾಗಿದೆ. ಇನ್ನು, ಹುಬ್ಬಳ್ಳಿಯಿಂದ ಚಿತ್ರದುರ್ಗಕ್ಕೆ ಬೆಳಗ್ಗೆ 7: 10 ಕ್ಕೆ ಹೊರಡಬೇಕಿದ್ದ ರೈಲು ಸಂಖ್ಯೆ 17347 ಸಹ ಕ್ಯಾನ್ಸಲ್‌ ಆಗಿದೆ. ಇನ್ನು, ಇದೇ ರೀತಿ ಚಿತ್ರದುರ್ಗದಿಂದ ಹುಬ್ಬಳ್ಳಿಗೆ  ಮಧ್ಯಾಹ್ನ 2 ಗಂಟೆಗೆ ಹೊರಡಬೇಕಿದ್ದ ರೈಲು ಸಂಖ್ಯೆ 17348 ಸಹ ರದ್ದಾಗಿರುವುದು ವರದಿ ಆಗಿದೆ.

ದೇಶದ ಹಲವು ಭಾಗಗಳಲ್ಲಿ ದಟ್ಟವಾದ ಮಂಜಿನ ಕಾರಣ ಮತ್ತು ದುರಸ್ತಿ ಹಾಗೂ ನಿರ್ವಹಣಾ ಮಾಡಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ರೈಲ್ವೆ ಇಲಾಖೆ ಇಂದು 40 ರೈಲುಗಳ ಮಾರ್ಗವನ್ನು ಕಡಿತಗೊಳಿಸಿದೆ. ಇದರ ಜತೆಗೆ 14 ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಿಸಲಾಗಿದ್ದರೆ ಇನ್ನು 19 ರೈಲುಗಳ ಮಾರ್ಗ ಬದಲು ಮಾಡಲಾಗಿದೆ.  ರೈಲುಗಳ ಪಟ್ಟಿಯಲ್ಲಿ ಪ್ರಯಾಣಿಸಲು ನಿಗದಿಪಡಿಸಿದ ಪ್ರಯಾಣಿಕರಿಗೆ IRCTC ಸಂಪೂರ್ಣ ಟಿಕೆಟ್ ದರವನ್ನು ಹಿಂದಿರುಗಿಸಲು ಉದ್ದೇಶಲಾಗಿದೆ.   

ನವದೆಹಲಿಯಿಂದ ಕಾನ್ಪುರ ಶತಾಬ್ದಿ, ಹೌರಾದಿಂದ ನ್ಯೂ ಜಲ್ಪೈಗುರಿ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಜಯನಗರದಿಂದ ನವದೆಹಲಿಗೆ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಸೇರಿದಂತೆ 293 ರೈಲುಗಳನ್ನು ಗುರುವಾರ ರದ್ದುಗೊಳಿಸಿದೆ.

Gold Rate| ಹೊಸ ವರ್ಷದ ಮೊದಲ ವಾರವೇ ಚಿನ್ನ, ಬೆಳ್ಳಿದರ ಹೆಚ್ಚಳ! 

ಭಾರತೀಯ ರೈಲ್ವೆಯು 40 ರೈಲುಗಳನ್ನು ಮೂಲ ಬದಲಾಯಿಸಿದ್ದರೆ ಮತ್ತು 40 ರೈಲುಗಳನ್ನು ಅಲ್ಪಾವಧಿಗೆ ಕೊನೆಗೊಳಿಸಿದೆ. ಹೆಚ್ಚುವರಿಯಾಗಿ, ಹೌರಾದಿಂದ ಪುಣೆ ಡುರೊಂಟೊ ಎಕ್ಸ್‌ಪ್ರೆಸ್ ಮತ್ತು ದೆಹಲಿಯಿಂದ ಕೋಟ್ದ್ವಾರ ಸಿದ್ಧಬಲಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ಸೇರಿದಂತೆ ಭಾರತೀಯ ರೈಲ್ವೆ ಇಲಾಖೆ 17 ರೈಲುಗಳನ್ನು ಮರುಹೊಂದಿಸಲಾಗಿದೆ. ಅಲ್ಲದೆ, 19 ರೈಲುಗಳ ಮಾರ್ಗ ಬದಲಿಸಲಾಗಿದೆ.

ಆನ್‌ಲೈನ್ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ತಮ್ಮ ಮೂಲ ಅಕೌಂಟ್‌ನಲ್ಲಿ ಪೂರ್ಣ ಮರುಪಾವತಿ ಪಡೆಯುತ್ತಾರೆ ಮತ್ತು ಕೌಂಟರ್ ಟಿಕೆಟ್‌ಗಳನ್ನು ಹೊಂದಿರುವವರು ಮರುಪಾವತಿ ಪಡೆಯಲು ರಿಸರ್ವೇಶನ್‌ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ ಎಂದೂ ರೈಲ್ವೆ ಇಲಾಖೆ ತಿಳಿಸಿದೆ.

19 ರೈಲುಗಳ ಮಾರ್ಗ ಬದಲಾಯಿಸಲಾಗಿದೆ.  ರದ್ದಾದ ರೈಲುಗಳ ಪಟ್ಟಿಯಲ್ಲಿ ಪ್ರಯಾಣಿಸಲು ನಿಗದಿಪಡಿಸಿದ ಪ್ರಯಾಣಿಕರಿಗೆ IRCTC ಸಂಪೂರ್ಣ ಟಿಕೆಟ್ ದರವನ್ನು ಹಿಂದಿರುಗಿಸುತ್ತದೆ ಎಂದೂ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ