News

1 April 2022 Total Change? ಇನ್ನು ಮುಂದೆ ಎಲ್ಲ ದುಬಾರಿ! ಜನರೆ ಎಚ್ಚರ!

01 April, 2022 12:27 PM IST By: Ashok Jotawar
1 April 2022 Total Change? there are lot of things like pf, insurance, home loan, and medicines got price hiked!

ಹೊಸ ಆರ್ಥಿಕ ವರ್ಷ(New Financial Year) Full Price Hike!

ಔಷಧಗಳು(Medicine) ದುಬಾರಿ:

ಅನೇಕ ಔಷಧಗಳ ಬೆಲೆ ಏ.1ರಿಂದ ಏರಿಕೆಯಾಗಲಿದೆ. ಶೇ.10ರಷ್ಟುಬೆಲೆ ಏರಿಕೆಗೆ ಸರ್ಕಾರ ಅನುಮೋದನೆ ನೀಡಿದೆ. ಪ್ಯಾರಸಿಟಮಲ್‌, ಆ್ಯಂಟಿಬಯಾಟಿಕ್‌ ಅಜಿತ್ರೊಮೈಸಿನ್‌, ಬ್ಯಾಕ್ಟಿರಿಯಲ್‌ ಸೋಂಕು ನಿವಾರಕಗಳು, ಆ್ಯಂಟಿ ಅನೀಮಿಯಾ, ವಿಟಮಿನ್ಸ್‌ ಮತ್ತು ಮಿನರಲ್ಸ್‌ ಸೇರಿದಂತೆ 800 ಅಗತ್ಯ ಔಷಧಗಳ ಬೆಲೆ ಏರಿಕೆಯಾಗಲಿದೆ.

(Crypto Currency) ಕ್ರಿಪ್ಟೋ ಕರೆನ್ಸಿಗೆ ಹೊಸ ರೂಲ್ಸ್‌:

ಡಿಜಿಟಲ್‌ ಕರೆನ್ಸಿ(Digital Currency) ಮೇಲೆ ಸರ್ಕಾರ ತೆರಿಗೆ ವಿಧಿಸಲಿದೆ. ಕ್ರಿಪ್ಟೋ ಕರೆನ್ಸಿ ವರ್ಗಾವಣೆ ವೇಳೆ ಗಳಿಸಿದ ಆದಾಯದ ಮೇಲೆ ಶೇ.30ರಷ್ಟನ್ನು ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಕ್ರಿಪ್ಟೋ ಆಸ್ತಿಯನ್ನು ಉಡುಗೊರೆಯಾಗಿ ಸ್ವೀಕರಿಸಿದರೆ, ಸ್ವೀಕರಿಸುವ ವ್ಯಕ್ತಿ ಅವುಗಳ ಮೇಲಿನ ತೆರಿಗೆ ಪಾವತಿಸಬೇಕು.

ಇದನ್ನು ದೊರಿ:

Small Savings ಬಡ್ಡಿ ದರ..ಮಹತ್ವದ ಮಾಹಿತಿ ನೀಡಿದ ಹಣಕಾಸು ಸಚಿವಾಲಯ

ಪಿಎಫ್‌ ಮೇಲೆ(PF: Provident Funds)  ತೆರಿಗೆ:

ಏ.1ರಿಂದ ಹೊಸ ಆದಾಯ ತೆರಿಗೆ ಕಾನೂನನ್ನು ಜಾರಿ ಮಾಡಲಿದೆ. ಇದರ ಪರಿಣಾಮ ಅಸ್ತಿತ್ವದಲ್ಲಿರುವ ಪಿಎಫ್‌ ಖಾತೆಗಳನ್ನು ಎರಡು ಭಾಗಗಳಾಗಿ ವಿಭಾಗಿಸಲಾಗುತ್ತದೆ.  ಅಂದರೆ ಉದ್ಯೋಗಿಗಳು ಹಾಗೂ ಉದ್ಯೋಗದಾತರ ಕೊಡುಗೆ ಎರಡೂ ಸೇರಿ ವಾರ್ಷಿಕ 2.50 ಲಕ್ಷ ರು. ಮೀರುವ ಪಿಎಫ್‌ ಖಾತೆಗಳಿಗೆ ಇನ್ಮುಂದೆ ಸರ್ಕಾರ ತೆರಿಗೆ ವಿಧಿಸಲಿದೆ.

ಇದನ್ನು ದೊರಿ:

Senior Citizensಗೆ ಮತ್ತೇ ಶಾಕ್‌.! ಪ್ರಯಾಣ ರೀಯಾಯಿತಿ ಬಗ್ಗೆ ಏನಂದ್ರು ಸಚಿವರು?

Small Savings ಬಡ್ಡಿ ದರ..ಮಹತ್ವದ ಮಾಹಿತಿ ನೀಡಿದ ಹಣಕಾಸು ಸಚಿವಾಲಯ

ಮನೆಕೊಳ್ಳುವವರಿಗೆ ಶಾಕ್‌(HOME LOAN Subsidy Ban) 

ಕೇಂದ್ರ ಸರ್ಕಾರ ಸೆಕ್ಷನ್‌ 80ಇಇಎ ಅಡಿಯಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ನೀಡಲಾಗುತ್ತಿರುವ ತೆರಿಗೆ ವಿನಾಯ್ತಿಯನ್ನು ರದ್ದು ಮಾಡಲಿದೆ. 2019-20ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು 45 ಲಕ್ಷ ರು.ವರೆಗಿನ ಮನೆ ಖರೀದಿದಾರರಿಗೆ 1.50 ಲಕ್ಷ ರು.ಗಳ ಹೆಚ್ಚುವರಿ ಆದಾಯ ತೆರಿಗೆ ಪ್ರಯೋಜನವನ್ನು ಘೋಷಿಸಿತ್ತು.

ಥರ್ಡ್‌ ಪಾರ್ಟಿ ವಿಮೆ (Third Party Insurance) :

ಹೊಸ ಬೈಕು ಅಥವಾ ಕಾರು ಖರೀದಿ ಏ.1ರಿಂದ ದುಬಾರಿಯಾಗಲಿದೆ. ಥರ್ಡ್‌ ಪಾರ್ಟಿ ಮೋಟಾರ್‌ ವಿಮೆಯನ್ನು ಹೆಚ್ಚಿಸುವುದಾಗಿ ರಸ್ತೆ ಮತ್ತು ಸಾರಿಗೆ ಸಚಿವಾಲಯ ಘೋಷಿಸಿದೆ. ಇದರಿಂದಾಗಿ ಗ್ರಾಹಕರು ಕಾರು ಅಥವಾ ಬೈಕು ಕೊಳ್ಳಲು ಶೇ.17ರಿಂದ 23ರಷ್ಟುಹೆಚ್ಚುವರಿ ಹಣ ನೀಡಬೇಕಾಗುತ್ತದೆ.

ಎಲ್‌ಪಿಜಿ ಸಿಲಿಂಡರ್‌(LPG Gas) ಬೆಲೆ ಏರಿಕೆ?:

ಪ್ರತಿ ತಿಂಗಳಂತೆ ಏಪ್ರಿಲ್ ಮೊದಲ ದಿನದಂದು ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ಬದಲಾವಣೆ ಆಗಬಹುದು. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಏಪ್ರಿಲ್‌ನಲ್ಲಿ ಮತ್ತೊಮ್ಮೆ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.

ವಿಶೇಷ ಎಫ್‌ಡಿ ರದ್ದು: ಎಸ್‌ಬಿಐ(SBI), ಐಸಿಐಸಿಐ(ICICI) ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ(BOB), ಎಚ್‌ಡಿಎಫ್‌ಸಿ(HDFC), ಬ್ಯಾಂಕುಗಳು ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಯನ್ನು ಜಾರಿಗೊಳಿಸಿದ್ದವು. ಸದ್ಯ ಏ.1ರಿಂದ ಈ ಯೋಜನೆಯನ್ನು ರದ್ದು ಮಾಡಲು ಕೆಲ ಬ್ಯಾಂಕುಗಳು ನಿರ್ಧರಿಸಿವೆ.

ಸರ್ಕಾರದ ಲೆಕ್ಕಾಚಾರ!

ಮೊದಲಿಗೆ ಹೇಳುವುದೆಂದರೆ! Russia Ukraine ಯುದ್ಧದ ಮೊದಲು ಕೂಡ ಸರ್ಕಾರ ಎಲ್ಲ ಜನ ಜೀವನಕ್ಕೆ ಬೇಕಾದ ಅವಶ್ಯಕ ವಸ್ತುಗಳನ್ನು ಮೊದಲೇ ಹೆಚ್ಚಿಗೆ ಮಾಡಿ ಇಟ್ಟಿದ್ದರು, ಯಾವಾಗ ಅಂತರ ರಾಷ್ಟೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇತ್ತೋ ಆವಾಗ ದೇಶದಲ್ಲಿ Petrol Diesel ಬೆಲೆ ಗಗನಕ್ಕೆ ಏರಿದ್ದವು. ಮತ್ತು ಮನೆಯಲ್ಲಿ ಬಲಿಸುವ LPG ಕೂಡ, ಈಗ ಹೊಸದೊಂದು ದಾರಿ ಸಿಕ್ಕಿದೆ ಅದು ಏನು ಅಂದರೆ Russia Ukraine War! ಏಕೆಂದರೆ ಜನರ ಜೇಬಿಗೆ ಸರಿಯಾಗಿ ಕತ್ತರಿ ಸರ್ಕಾರದ ವತಿಯಿಂದ ಬೀಳುತ್ತಲೇ ಇದೆ. ಮತ್ತು ಸಾಹುಕಾರ ಜನರು ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುತಾಲೇ ಇದ್ದಾರೆ!

ಇನ್ನಷ್ಟು ಓದಿರಿ:

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯ ನಿರ್ವಹಿಸಲ್ಲ..! ಕಾರಣವೇನು.?

LPG:ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 250 ರೂ ಏರಿಕೆ..ಕಂಗಾಲಾದ ಗ್ರಾಹಕರು..!