News

9 ಸಾವಿರ ರೈತರಿಗೆ ಒಂದೇ ದಿನದಲ್ಲಿ 1,500 ಕೋಟಿ ಸಾಲ: ನಿರ್ಮಲಾ ಸೀತಾರಾಮನ್‌

09 January, 2023 12:22 PM IST By: Hitesh
Nirmala Sitharaman

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಕೇಂದ್ರ ಸರ್ಕಾರವು 9 ಸಾವಿರಕ್ಕೂ ಹೆಚ್ಚು ರೈತರಿಗೆ ಕೇವಲ ಒಂದು ದಿನದಲ್ಲಿ ಒಟ್ಟು 1,500 ಕೋಟಿ ರೂಪಾಯಿಗಳ ಸಾಲದ ಚೆಕ್‌ಗಳನ್ನು ವಿತರಣೆ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.  

ಅಂತರರಾಜ್ಯ ಎತ್ತಿನಗಾಡಿ ಓಟದ ಸ್ಪರ್ಧೆ; ರೈತ ಸಾವು, ಕ್ರಮಕ್ಕೆ ಆಗ್ರಹ

ಕೋಟಾದಲ್ಲಿ ನಡೆದ ಕ್ರೆಡಿಟ್ ಔಟ್ರೀಚ್ ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಚಿವೆ ಅವರು ಭಾಗವಹಿಸಿ, ಈ ಸಂಬಂಧ ಮಾತನಾಡಿದರು.  

ಸರ್ಕಾರವು ಪಿಎಂ ಸ್ವನಿಧಿ ಯೋಜನೆಯಡಿ 2,363ಕ್ಕೂ ಹೆಚ್ಚು ರೈತರಿಗೆ ಹೆಚ್ಚಿನ ಸಾಲ ಮಂಜೂರು ಮಾಡಿದೆ. ಈ ಪೈಕಿ ಒಂದೇ ದಿನದಲ್ಲಿ 3 ಕೋಟಿ ರೂಪಾಯಿಗೂ ಅಧಿಕ ಸಾಲ ವಿತರಣೆ ಮಾಡಲಾಗಿದೆ. ಅಲ್ಲದೇ ನಾವು 9,000 ರೈತರಿಗೆ ಸಾಲ ಅಥವಾ ಟ್ರ್ಯಾಕ್ಟರ್ ಖರೀದಿಸುವುದು ಸೇರಿದಂತೆ ರೈತರಿಗೆ ನೆರವಾಗಲು ಸಹಾಯಧನ ನೀಡುತ್ತಿವೆ ಎಂದರು.   

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ 

ಮುದ್ರಾ ಸಾಲ ಯೋಜನೆ ಅಡಿಯಲ್ಲಿ, 3,700ಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು 40 ಕೋಟಿ ರೂಪಾಯಿಗಳ ಸಾಲವನ್ನು ಪಡೆಯಲಿದ್ದಾರೆ. ಗ್ರಾಮೀಣ ಭಾಗಕ್ಕೆ ಸ್ಟಾರ್ಟ್‌ಅಪ್‌ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತಿದೆ. ಅಲ್ಲದೇ ಸ್ಟಾಂಡಪ್ ಅಡಿಯಲ್ಲಿ ಕೋಟಾದಲ್ಲಿ 20 ಜನರಿಗೆ 2 ಕೋಟಿ ರೂಪಾಯಿಗಳನ್ನು  ಮಂಜೂರು ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.

Aadhaar Card| ಆಧಾರ್‌ ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್‌ ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು! Pan Card

ಇದಲ್ಲದೇ ವರ್ಷದ ಆರಂಭದಲ್ಲಿ ಪಶುಸಂಗೋಪನೆಗಾಗಿ 10 ಕೋಟಿ ರೂಪಾಯಿ ಗಳನ್ನು ವಿತರಿಸಿದ್ದೇವೆ. ಆದರೆ ಇಂದು, ನಾವು ಕೋಟಾದಲ್ಲಿ ಪಶುಸಂಗೋಪನೆಗಾಗಿ 68 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿದ್ದೇವೆ. ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ಅನುಕೂಲವಾಗುವಂತೆ ಅನೇಕ ಬ್ಯಾಂಕ್‌ಗಳು ಮಳಿಗೆಗಳನ್ನು ಹೊಂದಿವೆ ಎಂದು ಸೀತಾರಾಮನ್  ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಜಸ್ಥಾನದ ಕೋಟಾದಲ್ಲಿ ಕ್ರೆಡಿಟ್ ಔಟ್ರೀಚ್ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಐದು ಮೊಬೈಲ್ ಎಟಿಎಂ ವ್ಯಾನ್‌ಗಳಿಗೆ ಚಾಲನೆ ನೀಡಿದರು. ಅದರಲ್ಲಿ ಒಂದು ಕೋಟಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಮತ್ತು ನಾಲ್ಕು ರಾಜಸ್ಥಾನ ಮರುಧರ ಗ್ರಾಮೀಣ ಬ್ಯಾಂಕ್‌ಗೆ ಮಂಜೂರಾಗಿದೆ. 

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ

farmer

ಏನಿದು ಕಿಸಾನ್‌ ಸನ್ಮಾನ ಯೋಜನೆ

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಕಿಸಾನ್‌ ಸನ್ಮಾನ ಯೋಜನೆಯೂ ಒಂದಾಗಿದೆ. ಈ ಯೋಜನೆಗಾಗಿ ಒಟ್ಟು 16 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಹಣವನ್ನು ನೇರವಾಗಿ ಪಿಎಂ ಕೃಷಿ ಸಮ್ಮಾನ್ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿತ್ತು.

ಇದು ರೈತರಿಗೆ ನಿಶ್ಚಿತ ಆದಾಯವನ್ನು ಕಲ್ಪಿಸುವ ಯೋಜನೆ. ಈ ಯೋಜನೆಯ ಫಲಾನುಭವಿಗಳಾದ ಪ್ರತಿ ರೈತ ಕುಟುಂಬಕ್ಕೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಗಂಡ, ಹೆಂಡತಿ, ಅಪ್ರಾಪ್ತ ಮಕ್ಕಳು ಇರುವ ರೈತ ಕುಟುಂಬವನ್ನು ಫಲಾನುಭವಿ ಕುಟುಂಬವನ್ನಾಗಿ ಆಯ್ಕೆ ಮಾಡಲಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ಮೂರು ಬಾರಿ ನಿಶ್ಚಿತ ಆದಾಯ ನೀಡಲಾಗುತ್ತದೆ. ಅಲ್ಲಿಗೆ,ಒಂದು ಫಲಾನುಭವಿ ರೈತ ಕುಟುಂಬಕ್ಕೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ಗಳಂತೆ ಒಂದು ವರ್ಷದಲ್ಲಿ 6 ಸಾವಿರ ರೂ.ಗಳು ಸಂದಾಯವಾಗುತ್ತದೆ. ಈಯೋಜನೆಯಿಂದಾಗಿ ಸಾವಿರಾರು ರೈತರ ಖಾತೆಗೆ ಹಣ ಸಂದಾಯವಾಗುತ್ತಿದೆ.   

ಕೇರಳದಲ್ಲಿ ಹಕ್ಕಿ ಜ್ವರ: ಸೋಂಕು ತಡೆಗೆ ಮಾರ್ಗಸೂಚಿ ಪ್ರಕಟ