Horticulture

ಆಕಳು, ಎಮ್ಮೆ, ಕೋಳಿ, ಆಡು, ಮೇಕೆ ಈ ಎಲ್ಲವಕ್ಕೂ ಪೌಷ್ಟಿಕ ಆಹಾರ ಈ ಅಜೋಲಾ..!

12 June, 2022 11:44 AM IST By: Kalmesh T
This azola of nutritious food for all

ಹೈನುಗಾರಿಕೆ ಮಾಡಲು ಬಯಸುವವರಿಗೆ ಇರುವ ದೊಡ್ಡ ಆತಂಕವೇ ಪಶುಗಳಿಗೆ ನೀಡುವ ಆಹಾರ. ಜಾನುವಾರುಗಳಿಗೆ ಮೇವಿನ ಅಭಾವ ತಲೆದೋರುತ್ತಿರುವ ಈ ಸಂದರ್ಭದಲ್ಲಿ ಈ ಆತಂಕ ನಿವಾರಿಸಲು ಬಂದಿರುವ, ಪಶುಗಳ ಪಾಲಿಗೆ ನಿಜ ಅರ್ಥದಲ್ಲಿ ಕಾಮಧೇನು ಆಗಬಹುದಾದ ಆಹಾರವೇ ಅಜೋಲಾ. 

ಜಾನುವಾರುಗಳಿಗೆ ಉಪಯೋಗಿಸುವ ಪೌಷ್ಟಿಕ ಆಹಾರವಾದ ಅಜೋಲಾ, ರೈತನ ಬದುಕನ್ನೇ ಉಜ್ವಲಗೊಳಿಸುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಪಶುಪಾಲನೆ ಮಾಡುವವರು ಪ್ರತಿ ವರ್ಷ ಮೇವು ಸಂಗ್ರಹಿಸಿಟ್ಟುಕೊಳ್ಳಲು, ಬೇರೆಡೆಯಿಂದ ತರಿಸಲು ನಡೆಸುತ್ತಿದ್ದ ಕಸರತ್ತಿಗೆ ಅಜೋಲಾ ಮುಕ್ತಿ ನೀಡಲಿದೆ.

ಇದನ್ನೂ ಓದಿರಿ: "ಆರೋಗ್ಯ ವೃದ್ದಿಗೆ-ಪೌಷ್ಠಿಕ ಕೈತೋಟ"

ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ? ಹೌದು! ಇಲ್ಲಿದೆ “ಮೇ 20 - ವಿಶ್ವ ಜೇನು ದಿನ”ದ ನಿಮಿತ್ತ ಕುತೂಹಲಕಾರಿ ಲೇಖನ

ಜಲಸಸ್ಯದ ಲಕ್ಷಣಗಳು:

ನೀರಿನ ಮೇಲೆ ತೇಲಾಡಿಕೊಂಡು ಬೆಳೆಯಬಲ್ಲ ಝರಿ ರೀತಿಯ ಸಸ್ಯವೇ ಅಜೋಲಾ. ಇದರ ಕಾಂಡ ಮತ್ತು ಎಲೆಗಳು ಚಿಕ್ಕದಾಗಿದ್ದು, ಒಂದರ ಮೇಲೊಂದು ಜೋಡಿಸಿದಂತೆ ಇರುತ್ತವೆ. 8 ಸೇ.ಮಿ ಉದ್ದದ ಬೇರುಗಳು ನೀರಿನಲ್ಲಿ ಇಳಿಬಿದ್ದಿರುತ್ತದೆ. 

ಅನಬೇನಾ ಅಜೋಲಾ ಎಂಬ ನೀಲಿ ಹಸಿರು ಪಾಚಿ ಅಜೋಲಾ ಸಹಜೀವಿಯಾಗಿದೆ. ಅಜೋಲಾ ಸಸ್ಯದ ಎಲೆಯ ಕೆಳಭಾಗದಲ್ಲಿ ಸಣ್ಣ ರಂಧ್ರಗಳಿದ್ದು, (ಅವುಗಳಲ್ಲಿ ಅನಬೀನಾ ಎಂಬ ನೀಲಿ ಹಸಿರು ಪಾಚಿಯು ಅಡಕವಾಗಿದ್ದು, ಇವು ವಾಯುಮಂಡಲದಲ್ಲಿ ಮುಕ್ತವಾಗಿ ಸಿಗುವಂತ ಸಾರಜನಕವನ್ನು ಹೀರಿ ಹಿಡಿದಿಟ್ಟುಕೊಳ್ಳುವ ಶಕ್ತಿ ಪಡೆದಿರುತ್ತದೆ).

ಈ ಪಾಚಿಗೆ ವಾಸಿಸಲು ಇದು ಸ್ಥಳ ಒದಗಿಸುತ್ತದೆ. ಇದಕ್ಕೆ ಪ್ರತ್ಯುಪಕರವಾಗಿ ಅನಬೇನಾ ಅಜೋಲಾವು ಗಾಳಿಯಲ್ಲಿರುವ ಮುಕ್ತವಾಗಿ ಸಿಗುವ ಸಾರಜನಕವನ್ನು ಸ್ಥಿರೀಕರಿಸಿ ಬೆಳವಣಿಗೆಗೆ ಚೇತರಿಸುವ ಪದಾರ್ಥಗಳನ್ನು ಕೊಡುತ್ತದೆ.

ಇದನ್ನು ಹಸಿರು ಎಲೆ ಗೊಬ್ಬರವಾಗಿ  ಉಪಯೋಗಿಸುವುದಕ್ಕಿಂತ ಮುಂಚೆಯೇ ಸಾರಜನಕವನ್ನು ಸ್ಥಿರೀಕರಿಸುವ ಮೂಲಕ ಅಜೋಲಾವನ್ನು ಗೊಬ್ಬರವಾಗಿಯೂ ಬಳಸಬಹುದು.

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಅಜೋಲದಲ್ಲಿರುವ ಪೋಷಕಾಂಶಗಳು:

ಅಜೋಲ ಮಣ್ಣಿನಲ್ಲಿ ಹ್ಯೂಮಸ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗೂ ಮಣ್ಣಿನ ಗುಣಗಳನ್ನು ಅಭಿವೃದ್ಧಿಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಜೋಲವನ್ನು ಪರ್ಯಾಯ ಪಶು ಅಹಾರವಾಗಿ ಹಾಗೂ ಕೋಳಿ ಸಾಕಣೆ ಮತ್ತು ಮೀನು ಸಾಕಣೆಯ ಆಹಾರವಾಗಿ ಬಳಸಲಾಗುತ್ತದೆ.

ಅಜೋಲದಲ್ಲಿ ಶೇ. 4 ರಿಂದ 6 ಸಾರಜನಕ ಹಾಗೂ ಶೇ. 24-26 ರಷ್ಟು ಸಸಾರಜನಕ ಮತ್ತು ಸಸ್ಯ ಬೆಳವಣಿಗೆಗೆ ಬೇಕಾದ ಹಲವಾರು ಲಘು ಪೋಷಕಾಂಶಗಳು ಅಡಗಿವೆ.

ಅಜೋಲಾ ಬೆಳೆಯುವದು ಹೇಗೆ: 

ಆರಂಭದಲ್ಲಿ ನೆಲವನ್ನು ಸ್ವಚ್ಛಗೊಳಿಸಿ ಸಮತಟ್ಟಾಗಿಸಬೇಕು. 2.25 ಮೀ ಉದ್ದ ಹಾಗೂ 1.5 ಮೀ. ಅಗಲ ಇರುವಂತಹ ಗುಂಡಿ ಅಗೆಯಬೇಕು. ಹಾಗೆ, ಅನುಕೂಲಕ್ಕೆ ಅನುಗುಣವಾಗಿ ಉದ್ದಗಲವನ್ನು ಬದಲಿಸಿಕೊಳ್ಳಬಹುದು.

ಬಳಿಕ ಒಂದು ಅಂಗುಲದಷ್ಟು ಎತ್ತರಕ್ಕೆ ಮರಳು ಹಾಕಿ ಇದರ ಮೇಲೆ ತೊಟ್ಟಿಯ ಮೇಲ್ಭಾಗದ ಅಂಚಿನವರೆಗೆ ಬರುವಂತೆ 120ರಿಂದ 150 ಜಿಸಿಎಂ ಸಿಲ್ಫಾಲಿನ್ ಶೀಟು ಹರಡಬೇಕು. ಬಳಿಕ 30ರಿಂದ 35 ಕಿಲೋದಷ್ಟು ಫಲವತ್ತಾದ ಮೆತ್ತನೆ ಮಣ್ಣನ್ನು ಸಮಾನವಾಗಿ ಅದರ ಮೇಲೆ ಹರಡಬೇಕು.

ಬಳಿಕ ಸುಮಾರು ಐದು ಕಿಲೊದಷ್ಟು ಸೆಗಣಿಗೆ, 40 ಗ್ರಾಂ ಖನಿಜ ಮಿಶ್ರಣ ಸೇರಿಸಿ ನೀರಿನಲ್ಲಿ ಕಲೆಸಿದ ಮೇಲೆ ಮಣ್ಣಿನಲ್ಲಿ ಮಿಶ್ರಣ ಮಾಡಬೇಕು. ಸುಮಾರು 7ರಿಂದ 10 ಸೆಂಮಿ ಎತ್ತರದವರೆಗೆ ನೀರು ಹಾಯಿಸಿ ಅದಕ್ಕೆ ಒಂದು ಕೆಜಿಯಷ್ಟು ಅಜೋಲಾ ಕಲ್ಚರ್ ಅಥವಾ ಹೆಪ್ಪನ್ನು ಮೇಲ್ಭಾಗದಿಂದ ಸಮಾನವಾಗಿ ಬೀಳುವಂತೆ ಹಾಕಬೇಕು.

ಇಷ್ಟು ಮಾಡಿದ ನಂತರ ಅಜೋಲಾದ ಮೇಲೆ ನೀರನ್ನು ಚಿಮುಕಿಸಬೇಕು. ಇದು ಬಹು ಬೇಗನೆ ಬೆಳೆಯಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು.

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ

ಪೂರಕ ಆಹಾರದ ಸ್ಥಾನ:

ಅಜೋಲಾವನ್ನು ಆಕಳು, ಎಮ್ಮೆ, ಕೋಳಿ, ಆಡು, ಮೇಕೆ, ಮೊಲ, ಹಂದಿ, ಬಾತುಕೋಳಿ ಮತ್ತು ಮೀನುಗಳಿಗೆ ಪೂರಕ ಆಹಾರವಾಗಿ ಬಳಸಬಹುದು. ಇದರಲ್ಲಿ ಒಟ್ಟು ಆರು ತಳಿಗಳಿದ್ದು, ಅವುಗಳಲ್ಲಿ ಪಿನ್ನಾಟ ಹಾಗೂ ಮೈಕ್ರೋಫಿಲ್ಲಾ ತಳಿಗಳು ಹೆಚ್ಚು ಪ್ರಚಲಿತದಲ್ಲಿವೆ.

ಮೈಕ್ರೋಫಿಲ್ಲಾ ತಳಿಯನ್ನು ಮೇವಿಗಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಬಳಸುತ್ತಿದ್ದಾರೆ. ಅಜೋಲಾ ಮೈಕ್ರೋಫಿಲ್ಲಾವನ್ನು ವಿಭಿನ್ನ ವಾತಾವರಣಗಳಲ್ಲೂ ಬೆಳೆಯಬಹುದಾಗಿದೆ. ಹೆಚ್ಚು ಉಷ್ಣಾಂಶವಿರುವ ಪ್ರದೇಶಗಳಲ್ಲೂ ಇವು ಸರಾಗವಾಗಿ ಬೆಳೆಯುತ್ತವೆ.

ಜಾನುವಾರುಗಳಿಗೆ ನೀಡುವ ಮುನ್ನ:

ಅಜೋಲಾವನ್ನು ಜಾನುವಾರುಗಳಿಗೆ ಕೊಡುವ ಮೊದಲು ಸೆಗಣಿ ವಾಸನೆ ನಿವಾರಿಸಲು ಶುದ್ಧವಾಗಿ ತೊಳೆಯಬೇಕು. ಅವುಗಳಿಗೆ ನೀಡುವ ನಿತ್ಯ ಆಹಾರದಲ್ಲಿ ಶೇ.5-10ರಷ್ಟನ್ನು ಅಜೋಲಾದಿಂದ ಪೂರೈಸಬೇಕು. ಮೊದಮೊದಲು ಜಾನುವಾರುಗಳು ನಿರಾಕರಿಸುತ್ತವೆ.

ಕ್ರಮೇಣ ಸೇವಿಸಲು ಶುರು ಮಾಡುತ್ತವೆ. ಅಭ್ಯಾಸವಾಗುವವರೆಗೆ ಹಿಂಡಿ ಅಥವಾ ದಾಣಿಯ ಜತೆ ಮಿಶ್ರ ಮಾಡಿ ತಿನ್ನಿಸುವುದು ಸೂಕ್ತ. ಆರು ತಿಂಗಳು ಮೀರಿದ ಕರುಗಳಿಗೆ ಮಾತ್ರ ಅಜೋಲಾ ನೀಡಬಹುದು. ಕೋಳಿ, ಕುರಿ, ಆಡು,ಮೊಲ, ಮೀನು ಮತ್ತು ಹಂದಿಗಳಿಗೂ ಹಸಿಯಾದ ಅಜೋಲಾವನ್ನು ಆಹಾರವಾಗಿ ಕೊಡಬಹುದು.

ಲೇಖಕರು: ರಾಕೇಶ್‌ ಎಸ್‌. ಮತ್ತು ಮಹಾಂತೇಶ ಎಸ್‌ ಟೊನ್ನೆ 

ಎಂ ಎಸ್ಸಿ. ಕೃಷಿ ಕೀಟ ಶಾಸ್ತ್ರ, ರಾಯಚೂರು.

ಮೊ.ಸಂಖ್ಯೆ: 9113025350 ,8105008348