ನಿಮಗೂ ಕೃಷಿ, ತೋಟಗಾರಿಕೆ, ಸಸ್ಯಪಾಲನೆ ಮಾಡಬೇಕೆಂಬ ಹಂಬಲ ಇದೆಯೇ? ಆದರೂ ಇದನ್ನೆಲ್ಲ ಮಾಡಲು ಹೊಲ, ತೋಟಗಳ ಕೊರತೆಯಿಂದ ಆಗುತ್ತಿಲ್ಲವೇ? ಹಾಗಿದ್ದರೆ ಇನ್ನೂ ಮುಂದೆ ನೀವು ಚಿಂತಿಸಬೇಕಾಗಿಲ್ಲ. ಕಡಿಮೆ ಜಾಗದಲ್ಲಿಯೂ ಖುಷಿಯಿಂದ ಕೃಷಿ ಮಾಡುವ ಒಂದಷ್ಟು ಐಡಿಯಾಗಳನ್ನು ಇಲ್ಲಿವೆ.
ಟೆರೆಸ್ ಫಾರ್ಮ್ ಮನೆಯ ಮಹಡಿಯ ಮೇಲೆ ಸಾವಯುವ ಫಾರ್ಮ್ ಮಾಡಿಕೊಳ್ಳುವ ಮೂಲಕ ಬೆಂಗಳೂರಿನ ಕುಟುಂಬವೊಂದು ಮನೆಯಲ್ಲೆ ತರಕಾರಿ ಬೆಳೆಗಳನ್ನ ಬೆಳೆಯಲು ಮುಂದಾಗಿದೆ. ಇದರ ಮೂಲಕ ಮನೆಯ 60% ವೆಚ್ಚವನ್ನು ಕೂಡ ಅವರು ಕಡಿಮೆ ಮಾಡಿಕೊಂಡಿದ್ದಾರಂತೆ. ಕಳೆದ ಐದು ವರ್ಷಗಳಿಂದ ತಮ್ಮ ಕುಟುಂಬಕ್ಕೆ ಪ್ರತಿದಿನ ತಾಜಾ ತರಕಾರಿಗಳನ್ನು ಇದೆ ಫಾರ್ಮ್‌ನಿಂದ ಅವರು ಪಡೆದುಕೊಳ್ಳುತ್ತಿದ್ದಾರೆ.
ಇದನ್ನು ಓದಿರಿ:
TOMATO FARMING AT HOME! ಮನೆಯಲ್ಲಿ ಟೊಮೇಟೊ ಬೆಳೆಯುವುದು?
Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ
ಅಥವಾ ಟೆರೆಸ್ ಗಾರ್ಡನ್
ಹೌದು! ನೀವು ನಿಮ್ಮ ಮನೆಯ ಮಹಡಿಯ ಮೇಲೆ ಖಾಲಿ ಉಳಿದಿರುವ ಅಲ್ಪಜಾಗದಲ್ಲಿಯೂ ಕೂಡ ಕೃಷಿ ಮಾಡಬಹುದು. ಇದನ್ನು ಬೆಂಗಳೂರಿನ ನಿವಾಸಿಯಾದ 84 ವರ್ಷದ ಹೇಮಾ ರಾವ್ ಅವರು ಈಗಾಗಲೆ ಮಾಡಿ ಸಾಧಿಸಿದ್ದಾರೆ.
ಬೆಳ್ಳಂದೂರಿನ ಅಪಾರ್ಟ್‌ಮೆಂಟ್‌ನ ಕೆಲವು ನಿವಾಸಿಗಳು ಮಾರುಕಟ್ಟೆ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸಾವಯವ ಕೃಷಿಯತ್ತ ಪ್ರಗತಿ ಸಾಧಿಸಲು ರಾವ್ ಕುಟುಂಬದಿಂದ ಪ್ರೇರಿತರಾಗಿ ವಿವಿಧ ತರಕಾರಿಗಳನ್ನು ಬೆಳೆಯಲು ತಾರಸಿಯ ಮೇಲೆ ಒಟ್ಟಾಗಿ ಸೇರಿಕೊಂಡಿದ್ದಾರೆ.
ಕಿಚನ್ ಗಾರ್ಡನ್
ಟರೆಸ್ ಗಾರ್ಡನ್ ತರ ಕಿಚನ್ ಗಾರ್ಡನ್ ಕೂಡ ಒಂದು ಪ್ರಚಲಿತ ಕೃಷಿ ವಿಧಾನವಾಗಿದೆ. ಸಾಕಷ್ಟು ಯುವಕರು, ಮಹಿಳೆಯರು ಈ ಕಿಚನ್ ಗಾರ್ಡನ್ ಮಾಡಲು ಮುಂದಾಗಿ ಯಶಸ್ವಿಯೂ ಆಗಿದ್ದಾರೆ. ಈ ಕಿಚನ್ ಗಾರ್ಡನ್ ಮಾಡುವ ಮೂಲಕವು ಕೂಡ ನಾವು ತರಕಾರಿಗಳನ್ನು ಬೆಳೆಯಬಹುದು. ಇದರಿಂದ ಹೆಚ್ಚಿನ ಉತ್ಸಾಹ ಮತ್ತು ಆನಂದ ದೊರೆಯುತ್ತದೆ.
POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?
ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!
ಹೈಡ್ರೋಪೋನಿಕ್ ಕೃಷಿ
ಕಡಿಮೆ ಜಾಗದಲ್ಲಿ ಕೃಷಿ ಮಾಡುವಾಗ ಮೊದಲು ಇದ್ದ ಅವಕಾಶದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೈಡ್ರೋಫೊನಿಕ್ ಕೃಷಿಯನ್ನು ಕೂಡ ಬಳಕೆಗೆ ತರಲಾಗಿದೆ. ಈ ಹೈಡ್ರೋಪೋನಿಕ್ ಕೃಷಿ ಎಂದರೆ ಮಣ್ಣು ಮತ್ತು ಹೆಚ್ಚು ಜಾಗದ ಅವಶ್ಯಕತೆಯೇ ಇಲ್ಲದೇ ಕೇವಲ ತೇವಾಂಶವನ್ನು ಬಳಸಿಕೊಂಡು ಸಹ ಕೃಷಿ ಮಾಡಲಾಗುತ್ತದೆ.
ಜೇನುಸಾಕಣೆ: ಕಡಿಮೆ ವೆಚ್ಚ ಹೆಚ್ಚು ಗಳಿಕೆ!
Indoor Fish Farming: ಒಳಾಂಗಣ ಮೀನು ಸಾಕಾಣಿಕೆ ಮಾಡಿ 3 ಪಟ್ಟು ಲಾಭ ಗಳಿಸಿ
ಯಾವ ಯಾವ ತರಕಾರಿ ಬೆಳೆಯುತ್ತಾರೆ?
ಕೊತ್ತಂಬರಿ, ತುಳಸಿ, ಪುದೀನಾ, ಹಸಿರು ಎಲೆಗಳ ತರಕಾರಿಗಳು, ಪಾಲಕ್, ಸೋರೆಕಾಯಿ, ಹಾಗೆಯೇ ಬೀಟ್ರೂಟ್, ಮೂಲಂಗಿ, ಕ್ಯಾರೆಟ್ ಮತ್ತು ಆಲೂಗಡ್ಡೆಯಂತಹ ಗೆಡ್ಡೆಗಳು ಸೇರಿ ಇನ್ನೂ ಹಲವಾರು ರೀತಿಯ ತರಕಾರಿಗಳನ್ನು ಅವರು ಬೆಳೆಯುತ್ತಿದ್ದಾರೆ.
ಆರೋಗ್ಯದ ಸುಧಾರಣೆಗೆ ಸಹಾಯಕಾರಿ!
ಹೀಗೆ ಮನೆಯ ಮಹಡಿಯ ಮೇಲೆ ಸಾವಯವ ಫಾರ್ಮ್ ಮಾಡಿಕೊಳ್ಳುವದರಿಂದ ಹಲವಾರು ಪ್ರಯೋಜನಗಳಿವೆ ಎಂದು ಕೂಡ ಅವರು ಹೇಳುತ್ತಾರೆ. ಆರೋಗ್ಯದ ಸುಧಾರಣೆಗೆ ಈ ತೋಟಗಳು ಬಹು ಉಪಯೋಗವಾಗುತ್ತವೆ. ಫಾರ್ಮ್‌ನ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಅಷ್ಟೇ ಅಲ್ಲದೇ ಪೂರ್ತಿ ದಿನ ಕ್ರೀಯಾತ್ಮಕವಾಗಿ ಇರಬಹುದು ಎಂದು ಕೂಡ ಹೇಳುತ್ತಾರೆ.
Tomato Cultivation: ಮನೆಯಲ್ಲೇ ಟೊಮೆಟೊ ಬೆಳೆಯುವುದು ಹೇಗೆ..?
Pomegranate Farming:ಈ ತಂತ್ರಗಳನ್ನು ಅನುಸರಿಸಿ ಲಾಭದಾಯಕ ದಾಳಿಂಬೆ ಬೆಳೆಯಿರಿ