ಸ್ನಾನ ಎನ್ನುವುದು ದೇಹದ ಶುಚಿತ್ವ ಹಾಗೂ ಮನಸ್ಸಿಗೆ ಮುದ ನೀಡಲು ಮಾಡುವಂತಹ ಕಾರ್ಯ. ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿದರೆ, ಅದು ತುಂಬಾ ಒಳ್ಳೆಯದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹೀಗಾಗಿ ಹೆಚ್ಚಿನವರು ಮುಂಜಾನೆ ಎದ್ದ ಕೂಡಲೇ ಸ್ನಾನ ಮಾಡುವರು. ಹೀಗೆ ಪ್ರತಿದಿನ ಸ್ನಾನ ಮಾಡುವುದು ಸ್ವಚ್ಛತೆಗೆ ಸಂಬಂಧಿಸಿದೆ. ದಿನಾಲು ಸ್ನಾನ ಮಾಡುವುದರಿಂದ ಮೈಮೇಲಿರುವ ಕೊಳೆ, ದೇಹದ ದುರ್ವಾಸನೆ ಮತ್ತು ಆರೋಗ್ಯದ ದೃಷ್ಟಿಯಿಂದ ಸ್ನಾನ ಮಾಡುವುದು ಅಗತ್ಯವೆಂದು ಕೆಲವರು ಹೇಳುತ್ತಾರೆ.
ಕೂದಲು ಉದುರುತ್ತಿದೆಯೇ..? ಹಾಗಾದ್ರೆ ಈ ಪದಾರ್ಥಗಳ ಜೊತೆ ಇಂದೇ ಟೂ ಬಿಟ್ಟು ಬಿಡಿ
ಬೇಗಬೇಗನೆ ಎದ್ದು ದಿನದ ಆರಂಭವನ್ನು ಮಾಡುವುದು ನಿಮಗೆ ಇಷ್ಟವಾಗಿರಬಹುದು. ಆದರೆ ಬೆಳಗ್ಗೆ ಎದ್ದ ಬಳಿಕ ಸ್ನಾನ ಮಾಡಿದರೆ ಅದು ಹೊಸತನ ನೀಡುವುದು.
ನೀವು ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವ ತನಕ ಪ್ರತಿಯೊಂದು ಕ್ಷಣವನ್ನು ಕೂಡ ತುಂಬಾ ಅವಸರದಿಂದ ದೂಡುತ್ತೀರಿ. ಇದರಿಂದಾಗಿ ದೇಹದಲ್ಲಿ ಆತಂಕವು ಎದುರಾಗುತ್ತಲಿರುವುದು. ಹೀಗಾಗಿ ಬೆಳಗ್ಗೆ ಎದ್ದ ಬಳಿಕ ಸ್ನಾನ ಮಾಡಿದರೆ, ಅದರಿಂದ ದೇಹಕ್ಕೆ ಉಲ್ಲಾಸ ಸಿಗುವುದು. ಸ್ವಚ್ಛ ಮತ್ತು ತಾಜಾ ಭಾವನೆಗಾಗಿ ಸ್ನಾನ ಅಗತ್ಯವೆಂದು ಬಹುತೇಕರು ಹೇಳುತ್ತಾರೆ. ಆದರೆ ವೈಜ್ಞಾನಿಕ ಹಿನ್ನೆಲೆ ಇನ್ನೊಂದಿದೆ ಅದು ನಿಮಗೆ ಗೊತ್ತೇ.ಇಲ್ಲಿದೆ ಮಾಹಿತಿ.
ಸ್ನಾನ ರಕ್ತ ಪರಿಚಲನೆಗೆ ಉತ್ತಮ
ಇದು ಚರ್ಮಕ್ಕೆ ಪುನಶ್ಚೇತನ ನೀಡುತ್ತದೆ, ರಕ್ತ ಪರಿಚಲನೆಗೆ ನೆರವಾಗುತ್ತದೆ. ಒತ್ತಡದ ವಿರುದ್ಧ ಹೋರಾಡುತ್ತದೆ, ಸ್ನಾಯುವಿನ ಒತ್ತಡ ನಿವಾರಿಸುತ್ತದೆ. , ಕೊಳೆ ಮತ್ತು ಮೃತ ಚರ್ಮಕೋಶ ತೆಗೆಯುವುದರ ಹೊರತಾಗಿ, ಒಟ್ಟಾರೆಯಾಗಿ, ನಿರ್ದಿಷ್ಟ ರೋಗಗಳಿಂದ ವೇಗವಾಗಿ ಚೇತರಿಸಿಕೊಳ್ಳಲು ಬೆಳಗಿನ ಸ್ನಾನ ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಬ್ರಾಹ್ಮೀಮುಹೂರ್ತ ಸ್ನಾನ ಮಾಡುವ ಆದರ್ಶ ಸಮಯವಾಗಿದೆ. ಆದರೆ ಇತ್ತೀಚಿನ ಕಾಲದಲ್ಲಿ ಆ ಸಮಯದಲ್ಲಿ ಸ್ನಾನ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಬೆಳಗ್ಗೆ ಸ್ನಾನ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಸೂರ್ಯೋದಯದ ನಂತರ ಎಷ್ಟು ಬೇಗನೇ ಸಾಧ್ಯವಿದೆಯೋ ಅಷ್ಟು ಬೇಗನೇ ಸ್ನಾನ ಮಾಡುವುದು ಒಳಿತು. ಒಂದೊಂದೇ ಕೆಲಸಗಳನ್ನು ನೀವು ಕ್ರಮಬದ್ಧವಾಗಿ ಮಾಡುತ್ತಾ ಹೋದರೆ, ಆಗ ಉತ್ಪಾದಕತೆಯು ಹೆಚ್ಚುವುದು ಮತ್ತು ನಿಮ್ಮಲ್ಲಿ ಯಾವುದೇ ರೀತಿಯ ಆತಂಕ ಮತ್ತು ಭಯವು ಉಂಟಾಗದು. ನಿಮ್ಮಲ್ಲಿ ಪ್ರೇರಣೆ, ಉತ್ಪಾದಕತೆ ಮತ್ತು ಪರಿಣಾಮಕತ್ವ ಹೆಚ್ಚಾಗುವುದು.