ಬಿಸಿಲು ಮತ್ತು ಹೊರಗೆ ಹೆಚ್ಚಾಗಿ ಓಡಾಡುವುದರಿಂದ ಮುಖದ ಮೇಲೆ ಸಾಮಾನ್ಯವಾಗಿ ಕಪ್ಪು ಕಲೆಗಳು ಮೂಡುತ್ತವೆ. ಅದನ್ನು ಹೊರತೆಗೆಯಲು ಬ್ಯೂಟಿ ಪಾರ್ಲರ್‌ಗಳಿಗೆ
ತೆರಳಿದರೆ, ಸಾವಿರಾರೂ ರೂಪಾಯಿ ಹಣ ವ್ಯಯಿಸಬೇಕು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ!
ಅಲ್ಲದೇ ಇಲ್ಲಿ ಬಳಸುವ ರಾಸಾಯನಿಕಗಳಿಂದ ಮುಖದ ತ್ವಚೆಗೂ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಮನೆಯಲ್ಲಿರುವ ವಸ್ತುಗಳನ್ನೇ
ಬಳಸಿಕೊಂಡು ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಸುಲಭವಾದ ಮಾರ್ಗಗಳು ಇಲ್ಲಿವೆ.
ಈ ರೀತಿ ಮನೆಯ ಮನೆಮದ್ದುಗಳು ಚರ್ಮದ ಮೇಲಿನ ಕಪ್ಪು ಕಲೆಗಳನ್ನು ತೆಗೆಯಲು ಸಹಕರಿಸುವುದಲ್ಲದೇ, ಚರ್ಮಕ್ಕೆ ಹೊಳಪನ್ನು ಮತ್ತು ಮೃದುತ್ವವನ್ನೂ ನೀಡುತ್ತವೆ.
ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ
ಕಡಲೇ ಹಿಟ್ಟು, ಅರಿಶಿಣ ಮತ್ತು ಮೊಸರು
ಕಡಲೇಹಿಟ್ಟು, ಮೊಸರು ಹಾಗೂ ಅರಿಶಿಣದ ಮಿಶ್ರಣವು ಸುಲಭವಾಗಿ ಲಭ್ಯವಾಗುವಂತದ್ದು. ಕಡಲೇಹಿಟ್ಟು ಚರ್ಮದ ಬಣ್ಣಕ್ಕೆ ಕಾಂತಿ
ನೀಡುತ್ತದೆ ಮತ್ತು ಅರಿಶಿಣ ಚರ್ಮಕ್ಕೆ ಹೊಳಪು ನೀಡುವ ಗುಣ ಹೊಂದಿದ್ದು, ಮೊಸರಿನಲ್ಲಿ ಇರುವ ಲ್ಯಾಕ್ಟಿಕ್ ಚರ್ಮವನ್ನು ಮೃದುವಾಗಿಸುತ್ತದೆ.
ಮೊಸರು, ಅರಿಶಿಣ ಮತ್ತು ಮೊಸರನ್ನು ಸೇರಿಸಿ ಒಂದು ಮಿಶ್ರಣವನ್ನು ತಯಾರಿಸಿ ಮತ್ತು ಅದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿರಿ.
15 ನಿಮಿಷ ಒಣಗಲು ಬಿಡಿ, ಮಿಶ್ರಣವನ್ನು ತೊಳೆಯುವ ಸಂದರ್ಭದಲ್ಲಿ ನಿಧಾನಕ್ಕೆ ಸ್ಕ್ರಬ್ ಮಾಡಬೇಕು.
ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ
ಪಪ್ಪಾಯ, ಟೊಮೆಟೊ, ಕಲ್ಲಂಗಡಿ ಹಣ್ಣು, ಆಲೂಗಡ್ಡೆ ಮತ್ತು ಸೌತೆಕಾಯಿ
ಪಪ್ಪಾಯದಲ್ಲಿ, ಎಕ್ಸ್‌ಫೋಲಿಯೇಟಿಂಗ್ ಅಂಶಗಳು ಹೇರಳವಾಗಿದೆ. ಆಲೂಗಡ್ಡೆ ರಸವು ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲಗಳನ್ನು ಮಂದಗೊಳಿಸುತ್ತದೆ.
ಟೊಮ್ಯಾಟೋ ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಗುಣಗಳನ್ನು ಹೊಂದಿದೆ ಮತ್ತು ಅದು ಚರ್ಮಕ್ಕೆ ಉತ್ತಮ ಕಾಂತಿ ನೀಡಬಲ್ಲದು.
ಸೌತೆಕಾಯಿ ಮುಖದ ಚರ್ಮವನ್ನು ತಣ್ಣಗಾಗಿಸುತ್ತದೆ. ಇವುಗಳನ್ನು ಬಳಸುವುದರಿಂದ ಮುಖದ ಮೇಲಿನ ಕಲೆ ಕಡಿಮೆ ಆಗುತ್ತದೆ.
ಪಪ್ಪಯಾ ಹಣ್ಣು, ಕಲ್ಲಂಗಡಿ ಹಣ್ಣು, ಆಲೂಗಡ್ಡೆ, ಟೊಮೆಟೊ ಮತ್ತು ಸೌತೆಕಾಯಿಯ 4ರಿಂದ 5 ತುಂಡುಗಳನ್ನು ತೆಗೆದುಕೊಂಡು, ಅದನ್ನು ನುಣ್ಣಗೆ ರುಬ್ಬಿಕೊಳ್ಳಿ.
ಆ ಪೇಸ್ಟ್ ಅನ್ನು 15 ನಿಮಿಷಗಳ ಕಾಲ ಫ್ರಿಡ್ಜ್‍ನಲ್ಲಿ ಇರಿಸಬೇಕು.
ನಂತರದಲ್ಲಿ ಅದನ್ನು ಚರ್ಮದ ಮೇಲೆ ಹಚ್ಚಿ ಮತ್ತು ಚರ್ಮ ಅದನ್ನು ಹೀರಿಕೊಳ್ಳುವ ವರೆಗೆ ಉಜ್ಜುತ್ತಿರಿ ನಂತರ ತೊಳೆಯಬೇಕು.
ಡಿಸೆಂಬರ್ ಒಳಗೆ ಜಿಲ್ಲೆಗೊಂದು ಗೋಶಾಲೆ ನಿರ್ಮಿಸಿ: ಪ್ರಭು ಚವ್ಹಾಣ
ನಿಂಬೆರಸ ಮತ್ತು ಜೇನು ತುಪ್ಪ
ನಿಂಬೆರಸವು ಮುಖದ ಮೇಲಿನ ಕಲೆಯನ್ನು ತೆಗೆಯಲು ಸುಲಭ ಸಾಧನವಾಗಿದೆ. ತಾಜಾ ನಿಂಬೆ ಹಣ್ಣಿನ ರಸ ತೆಗೆದುಕೊಂಡು,
ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪ ಸೇರಿಸಿ. ಬೇಕಿದ್ದರೆ, ಈ ಮಿಶ್ರಣಕ್ಕೆ ಸಕ್ಕರೆಯನ್ನು ಸೇರಿಸಿ, ಚರ್ಮದ ಮೇಲೆ ನಿಧಾನಕ್ಕೆ ಸ್ಕ್ರಬ್ ಕೂಡ ಮಾಡಬಹುದು.
20ರಿಂದ 30 ನಿಮಿಷಗಳ ಕಾಲ ಅದನ್ನು ಮುಖದ ಮೇಲೆ ಹಾಗೆಯೇ ಒಣಗಲು ಬಿಡಿ, ಬಳಿಕ ತೊಳೆದು ತೆಗೆಯಿರಿ.
Central Budget ಗೋಧಿ ರಫ್ತು ನಿರ್ಬಂಧ ಸಡಿಲಿಸಿ: ಕೇಂದ್ರ ಸರ್ಕಾರಕ್ಕೆ ರೈತರ ಮನವಿ
ಸಕ್ಕರೆ, ಕಾಫಿ ಮತ್ತು ತೆಂಗಿನ ಎಣ್ಣೆ
ಕೆಫಿ ಬೀಜದಲ್ಲಿ ಉತ್ತಮ ಗುಣಗಳಿವೆ. ಕಾಫಿಯಲ್ಲಿ ಚರ್ಮಕ್ಕೆ ಉಪಯೋಗವ ಹಲವು ಉಪಯುಕ್ತ ಅಂಶಗಳಿವೆ.
ಇದು ಚರ್ಮ ಕಲೆಯನ್ನು ತೆಗೆಯಲು ಸಹಾಯ ಮಾಡುವುದು ಮಾತ್ರವಲ್ಲ, ಮೊಡವೆಗಳನ್ನು ಕೂಡ ನಿವಾರಣೆ ಮಾಡುತ್ತದೆ.
ಕಾಫಿ ಪೌಡರ್, ತೆಂಗಿನ ಎಣ್ಣೆ ಮತ್ತು ಸಕ್ಕರೆ ಸೇರಿಸಿ ಒಂದು ದಪ್ಪನೆಯ ಮಿಶ್ರಣ ಮಾಡಿಕೊಳ್ಳಬೇಕು.
ನಂತರದಲ್ಲಿ ಪೇಸ್ಟ್ ನಿಂದ ಚರ್ಮದ ಮೇಲೆ 10 ನಿಮಿಷ ಸ್ಕ್ರಬ್ ಮಾಡಿ. 10 ನಿಮಿಷ ಒಣಗಲು ಬಿಟ್ಟು, ಬಳಿಕ ತೊಳೆದು ತೆಗೆಯಬೇಕು.
ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ