Government Schemes

PM ಕಿಸಾನ್‌ 12 ಕಂತಿನಲ್ಲಿ ದೊಡ್ಡ ಬದಲಾವಣೆ.. ಕೋಟ್ಯಾಂತರ ರೈತರಿಗೆ ಸಿಹಿಸುದ್ದಿ

13 June, 2022 9:44 AM IST By: Maltesh

ನೀವು ಕೂಡ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮಗೊಂದು ಒಳ್ಳೆಯ ಸುದ್ದಿಯಿದೆ. ಈಗ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಪಡೆದ ಹಣವನ್ನು ಪಡೆಯಲು  ಬ್ಯಾಂಕ್‌ಗಳಿಗೆ ಹೋಗಬೇಕಾಗಿಲ್ಲ. ವಾಸ್ತವವಾಗಿ ಅಂಚೆ ಇಲಾಖೆ ಮೂಲಕ ರೈತರಿಗೆ ಹಣ ತಲುಪಿಸಲು ಸರ್ಕಾರ ಯೋಜನೆ ರೂಪಿಸಿದೆ.

Breaking News: ₹11.70 ಕೋಟಿ ಮೌಲ್ಯದ “ರಕ್ತ ಚಂದನ” ವಶಪಡಿಸಿಕೊಂಡ ಡಿಆರ್‌ಐ!

PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ

ಇದರ ಅಡಿಯಲ್ಲಿ ಪೋಸ್ಟ್‌ಮ್ಯಾನ್ ರೈತರ ಮನೆಗೆ ತೆರಳಿ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ನೀಡಲಿದ್ದಾರೆ. ಪೋಸ್ಟ್‌ಮ್ಯಾನ್ ಕ್ಯಾಶ್ ಹ್ಯಾಂಡಲ್ ಯಂತ್ರವನ್ನು ತೆಗೆದುಕೊಂಡು ಹೋಗುತ್ತಾರೆ, ಈ ವೇಳೆ ಫಲಾನುಭವಿಯ ಹೆಬ್ಬೆರಳು ಮಾದರಿ ಪಡೆದು ನಂತರ ರೈತರಿಗೆ ಹಣವನ್ನು ನೀಡಲಾಗುತ್ತದೆ.

ಪೋಸ್ಟ್ ಆಫೀಸ್‌ ದಿಟ್ಟ ಹೆಜ್ಜೆ

ಕೇಂದ್ರ ಸರ್ಕಾರದ ವತಿಯಿಂದ ರೈತರ ಮನೆಗಳಿಗೆ ಕಿಸಾನ್ ನಿಧಿಯ ಮೊತ್ತವನ್ನು ರವಾನಿಸುವ ಜವಾಬ್ದಾರಿಯನ್ನು ಅಂಚೆ ಇಲಾಖೆಗೆ ವಹಿಸಲಾಗಿದೆ. ಇದಕ್ಕಾಗಿ ಸರ್ಕಾರ ಅಂಚೆ ಇಲಾಖೆಗೆ ವಿಶೇಷ ಅಧಿಕಾರ ನೀಡಿದೆ. ಇಲ್ಲಿಯವರೆಗೆ ರೈತರು ಬ್ಯಾಂಕ್ ಹೊರತುಪಡಿಸಿ ಅಂಚೆ ಕಚೇರಿಗೆ ಭೇಟಿ ನೀಡಿ ಹಣವನ್ನು ಹಿಂಪಡೆಯಬಹುದು.

ಅಂಚೆ ಇಲಾಖೆ ಅಧಿಕಾರಿಗಳಿಗೂ ಆದೇಶ ನೀಡಲಾಗಿದೆ. ಇದಕ್ಕಾಗಿ ಜೂನ್ 13ರವರೆಗೆ ವಿಶೇಷ ಅಭಿಯಾನ ನಡೆಸಲಾಗುವುದು. ಇದಕ್ಕಾಗಿ ರೈತರಿಂದ ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಇಲ್ಲ ಎನ್ನಲಾಗುತ್ತಿದೆ.

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

ಮೇ 31 ರಂದು ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು 10 ಕೋಟಿಗೂ ಹೆಚ್ಚು ರೈತರ ಖಾತೆಗೆ ಪ್ರಧಾನಿ ಮೋದಿ ವರ್ಗಾಯಿಸಿದರು. ಇದರಡಿ ಈ ಎಲ್ಲ ರೈತರ ಖಾತೆಗೆ 2 ಸಾವಿರ ರೂ. ಬಂದಿದೆ. ಇನ್ನು ಹಲವು ಅನರ್ಹ ಫಲಾನುಭವಿಗಳಿಗೆ ಇದೀಗ ಸರ್ಕಾರದಿಂದ ವಸೂಲಾತಿ ನೋಟಿಸ್ ಕೂಡ ನೀಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಅನರ್ಹರಾಗಿರುವ ರೈತರಿಗೆ ಈ ನೋಟಿಸ್ ಕಳುಹಿಸಲಾಗಿದೆ.

ನಿಟ್ಟುಸಿರು ಬಿಟ್ಟ ರೈತರು

ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೇಂದ್ರ ಸರ್ಕಾರವು ಈಗ ಕಡ್ಡಾಯ eKYC ಗಡುವನ್ನು ವಿಸ್ತರಿಸಿದೆ. ಈ ಮಾಹಿತಿಯನ್ನು ಪಿಎಂ ಕಿಸಾನ್ ಪೋರ್ಟಲ್ (pmkisan.gov.in) ನಲ್ಲಿ ನೀಡಲಾಗಿದೆ. ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿನ ಫ್ಲಾಶ್ ಪ್ರಕಾರ, 'ಎಲ್ಲಾ PMKISAN ಫಲಾನುಭವಿಗಳಿಗೆ eKYC ಗಡುವನ್ನು 31 ಜುಲೈ 2022 ರವರೆಗೆ ವಿಸ್ತರಿಸಲಾಗಿದೆ'. ಮೊದಲು ಅದರ ಗಡುವು ಮೇ 31, 2022 ಆಗಿತ್ತು.

ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

PM Kisan 11th Installment ಹಣ ಬಾರದಿದ್ದಾಗ ಏನು ಮಾಡಬೇಕು..?

PM Kisan 11ನೇ ಕಂತಿನ ಹಣ ನಿಮ್ಮ ಖಾತೆಗೆ ಬರದೇ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 011-24300606ಗೆ ಕರೆ ಮಾಡಿ ಕಾರಣ ತಿಳಿಯಬಹುದು.

ಜೊತೆಗೆ ನೀವು ಈ ಸಂಖ್ಯೆಗಳಿಗೆ ಸಹ ಕರೆ ಮಾಡಬಹುದು:-

PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266

ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ:155261

PM ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011-23381092, 23382401

ಪಿಎಂ ಕಿಸಾನ್‌ನ ಹೊಸ ಸಹಾಯವಾಣಿ: 011-24300606

PM ಕಿಸಾನ್ ಮತ್ತೊಂದು ಸಹಾಯವಾಣಿಯನ್ನು ಹೊಂದಿದೆ: 0120-6025109

ಇ-ಮೇಲ್ ಐಡಿ: pmkisan-ict@gov.in

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ